ಕಟ್ಟಡ ಕಾಮರ್ಿಕರ ಸಂಘದಿಂದ ಸಾಧಕ ಕಾಮರ್ಿಕರ ಮಕ್ಕಳಿಗೆ ಸನ್ಮಾನ

ಅಥಣಿ 05: ಬಡತನದಲ್ಲಿಯೂ ಸಹ ಎಲ್ಲವನ್ನೂ ಮೀರಿನಿಂತು ಸಾಧನೆ ಮಾಡುವಂತಹ ಕಾಮರ್ಿಕ ಮಕ್ಕಳ ಸಾಧನೆಯೇ ನಿಜವಾಗಿಯೂ ಅಭಿನಂದನಾರ್ಹ ಎಂದು ಅಮರ ದುರ್ಗಣ್ಣವರ ಹೇಳಿದರು.

     ಅವರು ಅಥಣಿ ಪಟ್ಟಣದ ದಡ್ಡಿ ಸಿದ್ದೇಶ್ವರ ದೇವಸ್ಥಾನದಲ್ಲಿ ಕಟ್ಟಡ ಕಾಮರ್ಿಕರ ಸಂಘದ ವತಿಯಿಂದ ಶಿಕ್ಷಣದಲ್ಲಿ ಸಾಧನೆ ಮಾಡಿದ ಮಕ್ಕಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಕಾಮರ್ಿಕರ ಮಕ್ಕಳಿಗೆ ಏನಾದರು ಸಾಧನೆ ಮಾಡಬೇಕೆಂಬುವ ಜವಾಬ್ದಾರಿ ಇರುತ್ತದೆ, ಪ್ರತಿದಿನವೂ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಕಾಮರ್ಿಕರ ಮಕ್ಕಳಿಗೆ ಆ ಕ್ಷೇತ್ರಗಳ ಬಗೆಗೆ ಅಪಾರ ಗೌರವವಿರುತ್ತದೆ, ಇದರಿಂದಾಗಿ ಕಾಯಕವೇ ಕೈಲಾಸ ಎನ್ನುವದು ಅವರ ಪ್ರತಿನಿತ್ಯದ ಮಂತ್ರವಾಗಿರುತ್ತದೆ, ಇದು ಅವರು ಮಾಡುವ ಸಾಧನೆಗೆ ಪ್ರೋತ್ಸಾಹ ನೀಡುತ್ತದೆ ಎಂದ ಅವರು ಮಕ್ಕಳ ಈ ಸಾಧನೆಯನ್ನು ಶ್ಲಾಘಿಸುವದು ಹಾಗೂ ಅವರಿಗೆ ಸನ್ಮಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

         ಕಟ್ಟಡ ಕಾಮರ್ಿಕರ ಸಂಘದ ಅಧ್ಯಕ್ಷ ಸುರೇಶ ಮೋಪಗಾರ ಮಾತನಾಡಿ ಕಾಮರ್ಿಕರಿಗೆ ಕಾನೂನಿನ ಅರಿವು, ಇದರಿಂದಾಗಿ ಸರಕಾರದಿಂದ  ಬರುವಂತಹ ಸೌಲಭ್ಯಗಳ ಕುರತಾಗಿಯೂ ಸಹ ಅವರಿಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ, ಅದರಂತೆ ಸರಕಾರವು ಕಾಮರ್ಿಕರಿಗೆ ಕಡಿಮೆ ಸೌಲಭ್ಯ ನಿಡುತ್ತಿದೆ , ಸರಕಾರಿ ಸೌಲಭ್ಯಗಳ ಬಗ್ಗೆ ಕಾಮರ್ಿಕರಿಗೆ ಯಾವುದೆ ಮಾಹೀತಿ ಸಿಗುತ್ತಿಲ್ಲಾ ಅದರಿಂದ ಕಾಮರ್ಿಕರಿ ಸರಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ , ಆದರೆ ಇನ್ನೂ ಮುಂದೆ ಹಾಗೆ ಆಗದ ಹಾಗೇ ನಾವು ಎಚ್ಚರದಿಂದ ಇರಬೇಕು ಕಾಮರ್ಿಕರ ಸೌಲಭ್ಯದ ಕುರಿತು ನಾವು ಮಾಹಿತಿಗಳನ್ನ ತಗೆದುಕೊಳ್ಳಬ್ಬೇಕು ಎಂದು ಸಲಹೆ ನೀಡಿದರು .

               ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತನೆ ತರಗತಿ, ಪದವಿ ಪೂರ್ವ ಹಾಗೂ ಪದವಿಯಲ್ಲಿ ಹೆಚ್ಚಿನ ಅಂಕಗಳನ್ನ ತಗೆದುಕೊಂಡು ಸಾಧನೆ ಮಾಡಿದ ಮಕ್ಕಳಿಗೆ ಗೌರವ ಧನ ನೀಡಿ ಸತ್ಕರಿಸಲಾಯಿತು. ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ ವಿದ್ಯಾಥರ್ಿಗೆ 10000, ಎರಡನೆಯವರಿಗೆ 5000 ಕೊನೆಯವರಿಗೆ 2500 ರೂ ಗೌರವ ಧನ ನೀಡಲಾಯಿತು .

       ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣಾ, ಕಾಮರ್ಿಕ ನಿರೀಕ್ಷಕ ತೀರ್ಥಬಾಬು, ಕುಮಾರ ಬಡಿಗೇರಿ, ಅಶೋಕ ಶೆಜೋಳಿ, ಹನಮಂತ ಮಾಕಾಣಿ, ಶಿವಾನಂದ ಲಂಗೋಟಿ ಮುಂತಾದವರು ಭಾಗವಹಿಸಿದ್ದರು .