ಸಿಂದಗಿ- ಸ್ಥಳಿಯ ಸಾರಂಗಮಠದ ಶ್ರೀ ಚೆನ್ನವೀರ ಸ್ವಾಮಿಜಿ ಪ್ರತಿಷ್ಠಾನ ಪ್ರತಿವರ್ಷ ಸೇಶ ವಿದೇಶಗಳಲ್ಲಿ ವಿಜ್ಷಾನ, ಕೃಷಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿ ಕೊಂಡಿರುವ ವಿಜ್ಞಾನಿಗಳಿಗೆ ವಿಶ್ವ ವಿಖ್ಯಾತ ಗಣಿತ್ಞ ಹಾಗೂ ಖಗೋಳಶಾಸ್ತ್ರಜ್ಞ ವಿಜಯಪುರದ ಭಾಸ್ಕರಾಚಾರ್ಯ 2 ಅವರ ಹೆಸರಿನಲ್ಲಿ ಕೊಡ ಮಾಡುವ ಭಾಸ್ಕರ ಪ್ರಶಸ್ತಿಗೆ ಖ್ಯಾತ ಕೃಷಿ ವಿಜ್ಞಾನಿ ಡಾ. ಎಸ್.ಎ.ಪಾಟೀಲ ಆಯ್ಕೆಯಾಗಿದ್ದಾರೆ ಎಂದು ಸಾರಂಗಮಠದ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದ ಸಾರಂಗಮಠದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 2016 ರಲ್ಲಿ ಭಾರತರತ್ನ ಡಾ. ಸಿಎನ್ಆರ್ ರಾವ್, 2017 ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಮತ್ತು ಪದ್ಮಭೂಷಣ ಯು.ಎನ್.ಆರ್. ರಾವ್ ಅವರಿಗೆ ನೀಡಲಾಗಿದ್ದು 2018 ರಲ್ಲಿ ಕೃಷಿ ವಿಜ್ಞಾನಿ ಡಾ. ಎಸ್.ಎ.ಪಾಟೀಲ ಅವರಿಗೆ ನೀಡಲಾಗುವುದು. ಪ್ರಶಸ್ತಿ ರೂ 1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನಮ್ಮ ಜಿಲ್ಲೆಯ ಖ್ಯಾತ ಗಣಿತಜ್ಞ ಭಾಸ್ಕರಾಚಾರ್ಯ-2 ಅವರ ಹೆಸರಿನ್ನು ಚೀರಸ್ಥಾಯಿಯಾಗಿಡಲು ಮತ್ತು ಅವರ ಹೆಸರಿನಲ್ಲಿ ಅನೇಕ ವೈಜ್ಞಾನಿಕ ಕಾರ್ಯಗಳಿಗೆ ಪ್ರೇರಣೆ ನೀಡಲು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಈ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದೇವೆ.
ಕೃಷಿ ವಿಜ್ಞಾನಿ ಡಾ. ಎಸ್.ಎ.ಪಾಟೀಲ ಮೂಲತ ಕಲಬುಗರ್ಿಯವರು. ಕೇಷಿ ಸಮಶೋಧನೆಯನ್ನು ಒಂದು ತಪಸ್ಸನ್ನಾಗಿ ಆಚರಿಸಿಕೊಂಡು ಬಂದವರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಕೇಂದ್ರದ ನಿದರ್ೇಶಕರಾಗಿ ಹಾಗೂ ಆಯ್.ಎಸ್.ಎ.ಪಿ ಯ ಚೇರಮನ್ನರಾಗಿ ಕಾರ್ಯ ನಿರ್ವಹಿಸಿದವರು. ವರಲಕ್ಷ್ಮೀ ಹತ್ತಿ, ನೆಲಗಡಲೆ, ನೈಗರ್, ಸೂರ್ಯಕಾಂತಿ, ಹಾಗೂ ಔಡಲದಂತಹ ವಾಣಿಜ್ಯ ಬೆಳೆಗಳ ಹೈಬ್ರೀಡ್ ತಳಿಗಳನ್ನು ಅಭಿವೃದ್ದಿ ಪಡಿಸಿದ್ದಾರೆ.
ಇವರು ಅಭಿವೃದ್ದಿ ಪಡಿಸಿರುವ ಉದ್ದ ನೂಲಿನ ಎಳೆಯನ್ನು ಬಿಟ್ಟು ಕೊಡುವ ಡಿ.ಸಿ.ಎಚ್ ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿವೆ. ಬೀಜ ಸಂಸ್ಕರಣಾ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡವರು, ಮಕ್ಕಳಿಗೆ ಕೃಷಿ ತಂತ್ರಜ್ಞಾನದ ಶಿಕ್ಷಣವನ್ನು ನಿಡಲು ಮುಂದಾಗಿದ್ದಾರೆ. ಒಣಬೇಸಾಯ, ಸಾವಯವ ಕೃಷಿ, ತೋಟಗಾರಿಕೆಯಲ್ಲಿ ಗಣನೀಯ ಸೇವೆ ಸಲ್ಲಿಸಿ ದೇಶದ ವಿವಿಧಡೆ ರೈತರೊಂದಿಗೆ ಸಂವಾದ ಮಾಡಿ ರೈತರಿಗೆ ಅನೇಕ ರೀತಿಯ ಕೃಷಿಯ ಲೋಭೋಪಾಯವನ್ನು ತಿಳಿಸಿದ್ದಾರೆ. ರಾಷ್ಟ್ರ ಅಂತರಾಷ್ಟ್ರೀಯ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡವರು ಅಂತವರಿಗೆ ಜುಲೈ 23 ರಂದು ಮುಂಜಾನೆ 11 ಗಂಟೆಗೆ ಪಟ್ಟಣದ ಸಾತವೀರೇಶ್ವರ ಸಭಾ ಭವನದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ಇದೇ ಸಂಧರ್ಭದಲ್ಲಿ ಜಿಲ್ಲೆಯ ರೈತರೊಂದಿಗೆ ಕೃಷಿ ವಿಜ್ಞಾನಿ ಡಾ. ಎಸ್.ಎ.ಪಾಟೀಲ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಭಾಸ್ಕರಾಚಾರ್ಯ ಬಳಗದ ಡಾ.ಎಂ.ಎಸ್.ಚಾಂದಕವಟೆ ಮಾತನಾಡಿ, ವಿಜಯಪುರ ಜಿಲ್ಲೆಯ ಭಾಸ್ಕರಾಚಾರ್ಯರ ಹೆಸರನ್ನು ಶಾಸ್ವತವಾಗಿಡಲು ಸಕರ್ಾರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಪೀಠ ನಿಮರ್ಾಣ ಮಾಡಿದೆ ಹಾಗೂ ತಾರಾಲಯವನ್ನು ಮಾಡುವ ಯೋಜನೆಯನ್ನು ಸಕರ್ಾರ ಕೈಗೆತ್ತಿಕೊಂಡಿದೆ. ಈಲ್ಲೆಯ ಶಾಲಾ ಕಾಲೇಜುಗಳಿಗೆ ಸಂಚಾರ ಮಾಡಿ ಭಾಸ್ಕರಾಚಾರ್ಯ ಅವರ ಕೊಡುಗೆಗಳನ್ನು ಮತ್ತು ಅವರ ಗಣಿತ, ಭೂಗೋಲದ ಪರಿಕಲ್ಪನೆಯನ್ನು ಮಕ್ಕಳಿಗೆ ತಿಳಿಸುವ ಕಾರ್ಯಕ್ಕೆ ನಾವು ಮುಂದಾಗಿದ್ದೇವೆ ಎಂದರು. ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ನೀದರ್ೇಶಕ ಅಶೋಕ ವಾರದ, ಬಾಬು ಡೋಳ್ಳಿ ಇದ್ದರು.