ಸಸ್ಯ ಸಂತೆಗೆ ಉತ್ತಮ ಪ್ರತಿಕ್ರಿಯೆ; ಮಾವಿನ ಸಸಿಗಳಿಗೆ ಅಧಿಕ ಬೇಡಿಕೆ

ಧಾರವಾಡ 04;  ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆಗಳು ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಎಲ್ಲ ದೇಶಗಳು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಕನರ್ಾಟಕದ ಜನರಲ್ಲಿರುವ ಹಸಿರು ಪ್ರೀತಿಯನ್ನು ಜಾಗೃತಗೊಳಿಸಿ,ಪ್ರತಿ ವರ್ಷ ಮಳೆಗಾಲದಲ್ಲಿ ಜನರ ಬೇಡಿಕೆಗನುಸಾರವಾಗಿ ಸಸಿಗಳನ್ನು ಪೂರೈಸುವ ಸಸ್ಯ ಸಂತೆ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯು ಕಳೆದ ಎರಡು ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದೆ.

 ಧಾರವಾಡದ ತೋಟಗಾರಿಕೆ ಉಪನಿದರ್ೇಶಕರ ಕಚೇರಿ ಆವರಣದಲ್ಲಿ  ಕಳೆದ ಜೂನ್ 25 ರಂದು ಸಸ್ಯ ಸಂತೆ ಕಾರ್ಯಕ್ರಮ ಪ್ರತಿದಿನ ಸಸ್ಯಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತ ಸಾಗಿದೆ. ಸಸಿ ನೆಡಲು ಸೂಕ್ತವಾಗಿರುವ ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ಸಸಿಗಳು ದೊರಯುತ್ತಿರುವದರಿಂದ  ನಗರ ಪ್ರದೇಶಗಳ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಜಿಲ್ಲೆಯ ಗ್ರಾಮೀಣ ಭಾಗದ ರೈತರು  ಮತ್ತು ಸಾರ್ವಜನಿಕರಿಗಾಗಿ ಕುಂದಗೋಳ ತಾಲ್ಲೂಕಿನ ಜಿಗಳೂರು ತೋಟಗಾರಿಕೆ ಕ್ಷೇತ್ರ, ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪ ತೋಟಗಾರಿಕೆ ಕ್ಷೇತ್ರ ಹಾಗೂ ನವಲಗುಂದದ ತೋಟಗಾರಿಕೆ ಕಾಯರ್ಾಲಗಳಲ್ಲಿಯೂ ಸಸ್ಯ ಸಂತೆಗಳು ನಡೆಯುತ್ತಿವೆ.

ಮಾವು,ಕರಿಬೇವು,ನುಗ್ಗೆ,ಪಪ್ಪಾಯ,ತೆಂಗು ಸಸಿ,ನಿಂಬೆ ಹಾಗೂ ವಿವಿಧ ಅಲಂಕಾರಿಕ ಸಸ್ಯಗಳು ಇಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಆಪೂಸ್ ತಳಿಯ ಮಾವಿನ ಸಸಿಗಳನ್ನು ಎರಡು ಊಟೆ ಕಸಿ ವಿಧಾನದಲ್ಲಿ ಇಲ್ಲಿ ಅಭಿವೃದ್ಧಿ ಪಡಿಸಿ ಮಾರಾಟ ಮಾಡಲಾಗುತ್ತಿದೆ.ಜೂನ್ ತಿಂಗಳಿನಲ್ಲಿಯೇ 6 ಸಾವಿರ ಮಾವಿನ ಸಸಿಗಳು ಮಾರಾಟವಾಗಿವೆ. ನೆರೆಯ ಜಿಲ್ಲೆಗಳಿಂದಲೂ ಇಲ್ಲಿನ ಮಾವಿನ ಸಸಿಗಳಿಗೆ ಬೇಡಿಕೆ ಬರುತ್ತಿದೆ. ದೂರದ ಚಾಮರಾಜನಗರ ಜಿಲ್ಲೆಗೂ ಧಾರವಾಡದಿಂದ ಮಾವಿನ ಸಸಿಗಳನ್ನು ಕಳಿಸಲಾಗಿದೆ. 


  ತೋಟಗಾರಿಕೆ ಇಲಾಖೆಯು ರಾಜ್ಯದ ಬಹುತೇಕ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಸ್ಯಕ್ಷೇತ್ರಗಳನ್ನು (ನರ್ಸರಿ) ಹೊಂದಿದೆ.ಇಲ್ಲಿ ಬೆಳೆಯಲಾಗುವ ಸಸಿಗಳಿಗೆ ಸಕಾಲಕ್ಕೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಸಸ್ಯ ಸಂತೆ ಕಾರ್ಯಕ್ರಮ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಖಾಸಗಿಯಾಗಿ ಸಾಕಷ್ಟು ಸಸ್ಯಕ್ಷೇತ್ರಗಳಲ್ಲಿ ಬಗೆ ಬಗೆಯ ಸಸಿಗಳ ತಳಿಗಳು ಸಿಗುತ್ತವೆ.ಆದರೆ ಅವುಗಳ ತಳಿ ಮತ್ತು ಗುಣಮಟ್ಟಕ್ಕಿಂತಲೂ ತೋಟಗಾರಿಕೆ ಇಲಾಖೆಯ ಸಸ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲಾದ ತಳಿಗಳ ಬಗೆಗೆ ಜನರಿಗೆ ಹೆಚ್ಚು ನಂಬಿಕೆ ,ವಿಶ್ವಾಸ ಇರುತ್ತದೆ. ಜನರ ಬೇಡಿಕೆಗೆ ಅನುಸಾರವಾಗಿ ಇಲ್ಲಿ ಸಸಿಗಳನ್ನು ಅಭಿವೃದ್ಧಿ ಪಡಿಸಿ ಒದಗಿಸಲಾಗುತ್ತಿದೆ.ಮಳೆಗಾಲ ಮುಗಿಯುವವರೆಗೂ ಸಸ್ಯ ಸಂತೆ ಮುಂದುವರೆಯುತ್ತದೆ ಎಂದು ತೋಟಗಾರಿಕೆ ಉಪನಿದರ್ೇಶಕ ಡಾ.ರಾಮಚಂದ್ರ ಕೆ.ಮಡಿವಾಳ ಹೇಳುತ್ತಾರೆ.


ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ನಿರಂತರವಾಗಿ ಉತ್ತಮ ಗುಣಮಟ್ಟದ ತಳಿಯ ಸಸಿಗಳನ್ನು ಬೆಳೆಯಲಾಗುತ್ತಿದೆ. ಕೌಶಲ್ಯ ಹೊಂದಿದ ಕೆಲಸಗಾರರನ್ನು  ಸಕಾಲದಲ್ಲಿ ಸಸಿಗಳನ್ನು ಬೆಳೆಸುವ ಕಾರ್ಯದಲ್ಲಿ   ಬಳಸಿಕೊಳ್ಳಲಾಗುತ್ತಿದೆ ಎಂದು ಸಸ್ಯಕ್ಷೇತ್ರದ ಅಧಿಕಾರಿ ವೀರಣ್ಣ ಹೇಳುತ್ತಾರೆ. 

ಹುಬ್ಬಳ್ಳಿ ಧಾರವಾಡ ಅವಳಿ ನಗರ  ಹಾಗೂ ಸುತ್ತಲಿನ ತಾಲ್ಲೂಕುಗಳ ಜನರು ತೋಟಗಾರಿಕೆ ಇಲಾಖೆಯ ಕಚೇರಿಗಳ ಆವರಣ ಮತ್ತು ಜಿಲ್ಲೆಯ ಸಸ್ಯಕ್ಷೇತ್ರಗಳಲ್ಲಿ ಒಂದು ಸುತ್ತು  ಹಾಕಿ ಬಂದರೆ,  ಈ ಮಳೆಗಾಲದಲ್ಲಿ  ತಾವೂ  ಒಂದಷ್ಟು ಸಸಿಗಳನ್ನು ನೆಟ್ಟು ,ಬೆಳೆಸುವ ಕಾರ್ಯ ಮಾಡಬೇಕು ಎಂಬ ಸ್ಫೂತರ್ಿ ನೀಡುವಂತೆ ಸಸ್ಯ ಸಂತೆಗಳು ನಡೆಯುತ್ತಿವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನ ಮಳೆಗಾಲ ಮುಗಿಯುವದೊರಳಗಾಗಿ ಒಮ್ಮೆ ಸಸ್ಯ ಸಂತೆಗೆ ಭೇಟಿ ನೀಡಬಹುದು.