ಕಾಗವಾಡ 07: ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಪ್ರತಿಯೊಬ್ಬ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ. ಈ ಕಾರಣಕ್ಕಾಗಿ ಶ್ರಮಿಸಿ, ಇಡಿ ಜೀವನ ಇನ್ನೊಬ್ಬರಿಗಾಗಿ ಮುಡುಪಿಟ್ಟು, ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ, ಸಂಸ್ಥಾಪಕ ಆಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಅಶೋಕ ಅರಗೆ ಇವರು ಎಂದು ಸಂಸ್ಥೆಯ ಚೆಯರಮನ್ ಮಹಾವೀರ ಮಗದುಮ್ಮ ಹೇಳಿದರು.
ಶುಕ್ರವಾರ ರಂದು ಜೈ ಜಿನೇದ್ರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಆಧ್ಯಕ್ಷ ಅಶೋಕ ಅರಗೆ ಇವರು ಬೆಳಗ್ಗೆ ಹೃದಯ ಘಾತದಿಂದ ನಿಧನ ಹೊಂದಿದರು. ಸಂಜೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಶ್ರದ್ಧಾಂಜಲಿ ಅಪರ್ಿಸಿದರು. ಮಹಾವೀರ ಮಗದುಮ್ಮ ಮಾತನಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಂಸ್ಥೆ ವಾ. ಚೆಯರಮನ್ ಡಾ. ಬಿ.ಎ.ಪಾಟೀಲ, ಕಾರ್ಯದಶರ್ಿ ಭರತ್ ಖಂಡೆರಾಜುರಿ, ಸದಸ್ಯರಾದ ನೇಮಿನಾಥ ಸದಲಗೆ, ಬಾಬಾಗೌಡಾ ಪಾಟೀಲ, ಸುಭಾಷ ಅಲತಗೆ, ಪ್ರಫೂಲ್ ಕುಸನಾಳೆ, ಪ್ರಮೋದ ಪಾಟೀಲ, ಸಚಿನ ವಸವಾಡೆ, ರಾಜೇಂದ್ರ ಮಗದುಮ್ಮ ಮುಂತಾದವರು ಇದ್ದರು..