ಗೋಕಾಕ ನಗರದಲ್ಲಿ ಕಲಾವಿದ ಕಾಡೇಶಕುಮಾರರ ಯುಗಾದಿ ಸಂಗೀತ ಸಂಭ್ರಮ

ಗೋಕಾಕ ನಗರದಲ್ಲಿ ಕಲಾವಿದ ಕಾಡೇಶಕುಮಾರ ಆಯೋಜಿಸಿದ ಯುಗಾದಿ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಗಣ್ಯರು.

ಗೋಕಾಕ 09: ವಸಂತ ಕಾಲವು ಯುಗಾದಿಯ ಆರಂಭದಲ್ಲಿ ಪ್ರಕೃತಿಯಲ್ಲಿ ಹೊಸತನ ಭರಿಸುತ್ತದೆ. ಜೀವನದ ಸುಖ ದುಃಖಗಳ ಪ್ರತಿಕವಾಗಿ ಯುಗಾದಿ ಹೊಸ ವರ್ಷ ಬೇವು ಬೆಲ್ಲವನ್ನು ಪ್ರತಿನಿಧಿಸುತ್ತದೆ. ಕೋಗಿಲೆ ಹಾಡುವ ಈ ಅವಧಿಯಲ್ಲಿ ಕಾಡೇಶಕುಮಾರ ಅವರು ಸಂಗೀತದ ವಾರ್ಷಿ ಕೋತ್ಸವ ಆಚರಿಸುವುದೂ ವೈಶಿಷ್ಟ್ಯವಾಗಿದೆ. ಹಳೆಯ ಸಂಗೀತ ಪ್ರಧಾನ ಹಾಡುಗಳಲ್ಲಿ ನವರಸಗಳ ಮಾಧುರ್ಯವಿದೆ ಯುಗಾದಿ ಹೊಸತನದಂತೆ ಸಂಗೀತದಲ್ಲಿ ಅಂತಃಸತ್ವವಿದೆ ಎಂದು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಮಹಾಂತೇಶ ತಾಂವಶಿ ಹೇಳಿದರು.

    ನಗರದ ಲಿಟಲ ಫ್ಲಾವರ್ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಸಂಗೀತ ಕಲಾವಿದ ಕಾಡೇಶಕುಮಾರ ಆಯೋಜಿಸಿದ "ಯುಗಾದಿ ಸಂಗೀತ ಸಂಭ್ರಮ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡೇಶಕುಮಾರ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದರು.

    ವೇದಿಕೆ ಮೇಲೆ ಮಹಾದೇವ ಈಟಿ, ಗಿರೀಶ ಝಂವರ, ರಾಜೇಂದ್ರ ಹಿಡಕಲ್,  ಅಮ್ಮಾಜಿ ನೃತ್ಯ ಶಾಲೆಯ ರಜನಿ ಜಿರಗ್ಯಾಳ, ಸಲ್ಮಾ ಶೇಖ ಮುಂತಾದವರು ಉಪಸ್ಥಿತರಿದ್ದರು.

     ನಂತರ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಕುಮಾರ ಚಿನ್ಮಯ ಈಟಿ, ಸಾಯಿರಾಮ ಕಲಾಲ, ಅಮನ ಶೇಖ, ಓಂ ಘೋಂಗಲೆ ಗಿಟಾರ ನುಡಿಸಿದರೆ, ಮಹಾಂತೇಶ ತಾಂವಶಿ, ಮುನ್ನಾ ಪಠಾಣ, ಅಶೋಕ ಕುರಬೇಟ, ಬಸವರಾಜ ಮಠಪತಿ, ಮಹಾಂತೇಶ ಬಳಗಾರ, ಶಕೀಲ ಜಕಾತಿ, ಮಹಾಂತೇಶ ದಾಸನ್ನವರ, ಮಯೂರ ಕೆಳಗಿನಮಠ, ಚನ್ನಪ್ಪ ಹುನ್ನೂರ, ಕಾಡೇಶಕುಮಾರ, ಕುಮಾರಿ ಸೋನಿ ಭೂತಿ, ಖುಷ್ಬೂ ಮೇದಾರ,  ಆರ್.ರಾಜಶ್ರೀ, ವಿಜಯಲಕ್ಷ್ಮೀ ಮಾಲದಿನ್ನಿ ಹಳೆಯ ಸುಮಧುರ ಗೀತೆಗಳನ್ನು ಹಾಡಿ ಜನಮನ ರಂಜಿಸಿದರು. ಸಾಹಿತಿ ಜಯಾನಂದ ಮಾದರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ  ನಿರೂಪಿಸಿದರು. ಶಿಕ್ಷಕ ರಾಮಚಂದ್ರ ಕಾಕಡೆ ವಂದಿಸಿದರು. 

   ಇತ್ತೀಚೆಗೆ ನಮ್ಮನ್ನು ಅಗಲಿದ ಖ್ಯಾತ ಸಾಹಿತಿ ಬಿ.ಎ. ಸನದಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು