ಲೋಕದರ್ಶನ ವರದಿ
ಶಿರೂರ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರೀಶೀಲಿಸಿದ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ
ಧಾರವಾಡ 25: ಇಂದು ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ಜರುಗಿತ್ತು.
ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿರೂರು ಗ್ರಾಮ ಪಂಚಾಯತಿಯ ಡಿಜಿಟಲ್ ಲೈಬ್ರರಿ ಅರಿವು ಕೇಂದ್ರಕ್ಕೆ ಭೇಟಿ ನೀಡಿ, ಪರೀಶೀಲಿಸಿದರು. ಕಥೆ, ಕವನ, ಕಾದಂಬರಿ ಹಾಗೂ ಸ್ವರ್ದಾತ್ಮಕ ಪುಸ್ತಕಗಳು ಅರಿವು ಕೇಂದ್ರದಲ್ಲಿ ಲಭ್ಯವಿದ್ದು, ಶಾಲಾ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರತಿದಿನ ಅರಿವು ಕೇಂದ್ರದಲ್ಲಿ ಗ್ರಾಮದ ಹಿರಿಯರು ಭೇಟಿ ನೀಡುತ್ತಿದು,್ದ ಅರಿವು ಕೇಂದ್ರದಲ್ಲಿ ಇರತಕ್ಕಂತಹ ಪುಸ್ತಕಗಳನ್ನ ಓದುತ್ತಾ ಓದುತ್ತಾ ಆಧ್ಯಾತ್ಮಿಕ ಚಿಂತನೆ ಎಂಬ ಪುಸ್ತಕವನ್ನು ಗ್ರಾಮದ ಹಿರಿಯರಾದ ಈರ್ಪ ಸನಮನಿ ಬರೆದಿದ್ದು, ಪುಸ್ತಕವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಇದೇ ಗ್ರಾಮದ ಇನ್ನೋರ್ವ ಯುವಕ ಮಹೇಶ ತೊಗಲಂಗಿ ಅವರು ಪ್ರಜಾಪ್ರಭುತ್ವದ ಬಗ್ಗೆ ಅಂಬೇಡ್ಕರ್ ಅವರ ಚಿಂತನೆ ಕುರಿತು ಪಿ.ಎಚ್.ಡಿ ಮಾಡುತ್ತಿದ್ದಾರೆ ಮತ್ತು ಗ್ರಾಮದ ಶಾಲಾ ಮಕ್ಕಳು ಅರಿವು ಕೇಂದ್ರದ ಸುದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿರೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ನಂಬರ-2 ಶಾಲೆಗೆ ಭೇಟಿ ನೀಡಿ, ಪ್ರಗತಿಯಲ್ಲಿರುವ ಶೌಚಾಲಯ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ಶಿರೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕೂಸಿನ ಮನೆಗೆ ಭೇಟಿ ನೀಡಿ, ಕೂಸಿನ ಮನೆಯಲ್ಲಿ ಇರುವಂತಹ ಮಕ್ಕಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ. ಎಸ್. ಮುಗನೂರಮಠ, ಆಯಟ್ಟಿ ಗ್ರಾಮ ಶ್ರೀ ಫಲಹಾರೇಶ್ವರ ಸ್ವಾಮೀಜಿ, ಶಿರೂರ ಗ್ರಾಮ ಪಂಚಾಯತ ಅಧ್ಯಕ್ಷೆ ಉಮಾಶ್ರೀ ಕಾಳಿ, ಗ್ರಾಮ ಪಂಚಾಯತ ಉಪಾಧ್ಯಕ್ಷ ಸಂಗನಗೌಡ ತೋಟದ, ಸಹಾಯಕ ನಿರ್ದೇಶಕರಾದ ಜಗದೀಶ ಹಡಪದ, ಹರ್ಷವರ್ಧನ ಹಂಚಿನಾಳ, ತಾಲೂಕ್ ಯೋಜನಾಧಿಕಾರಿ ಬಿ.ಎಸ್.ಪಾಟೀಲ, ಉಪತಸಿಲ್ದಾರ ಎಮ್.ಎಚ್.ಸದರಬಾಯಿ, ಕ್ಷೇತ್ರ ಶಿಕ್ಷಣಾಧಿಕಾರಿಎಸ್.ಬಿ ಮಲ್ಲಾಡ, ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜೀವಕುಮಾರ್ ಗುಡಿಮನಿ, ಸಮಾಜ ಕಲ್ಯಾಣ ಇಲಾಖೆ, ಸಾಮಾಜಿಕ ಅರಣ್ಯ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಶಿರೂರು ಗ್ರಾಮದ ಹಿರಿಯರಾದ ಚಿನ್ನಪ್ಪಗೌಡ ಪಾಟೀಲ, ಶಂಕ್ರ್ಪ ಯಮನೂರ, ಶಂಕರಗೌಡ ಬಾಳಗೌಡ್ರು, ನಾಗಪ್ಪ ಸಂಕದ, ರೈತ ಮುಖಂಡರಾದ ಮಲ್ಲಿಕಾರ್ಜುನ್ ಗೌಡ ಬಾಳನಗೌಡ್ರು ಉಪಸ್ಥಿತರಿದ್ದರು.