ನವದೆಹಲಿ, ಅ 22 : ವಿಜಜ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡ ಸೋಲು ಅನುಭವಿಸಿದ ಬಳಿಕ ಭಾರತ ತಂಡದ ಮಾಜಿ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ.
ಸೋಮವಾರ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 174 ರನ್ ದಾಖಲಿಸಿತ್ತು. ಬಳಿಕ. 175 ರನ್ ಗುರಿ ಬೆನ್ನತ್ತಿದ ಪಂಜಾಬ್ ತಂಡ 12.2 ಓವರ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು 52 ರನ್ ಗಳಿಸಿತ್ತು. ಈ ವೇಳೆ ಬಂದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.
ಲೀಗ್ ಹಂತದಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಆಧಾರದ ಮೇಲೆ ತಮಿಳುನಾಡಿಗೆ ಸೆಮಿಫೈನಲ್ ಗೆ ಅರ್ಹತೆ ಪಡೆಯಿತು.
ಈ ಬಗ್ಗೆ ಟ್ವಿಟರ್ನಲ್ಲಿ ಕಿಡಕಾರಿರುವ ಯುವರಾಜ್ ಸಿಂಗ್, 'ವಿಜಯ್ ಹಜಾರೆ ಟ್ರೋಫಿಯ ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಪಂಜಾಬ್ಗೆ ಅನಿರೀಕ್ಷಿತ ಫಲಿತಾಂಶ ಸಿಕ್ಕಿದೆ. ಮಳೆಯಿಂದ ಪಂದ್ಯ ರದ್ದುಗೊಳಿಸಿ ಪಂಜಾಬ್ ಸೆಮಿಫೈನಲ್ ಬಾಗಿಲು ಬಂದ್ ಮಾಡಲಾಗಿದೆ. ಮೀಸಲು ದಿನ ಏಕೆ ನಿಗದಿಮಾಡಬಾರದು? ದೇಶೀಯ ಕ್ರಿಕೆಟ್ ಎಂದರೆ ಬಿಸಿಸಿಐಗೆ ದೊಡ್ಡ ವಿಷಯವಲ್ಲವೇ? ಎಂದು ಅಸಮಾಧಾನ ವ್ಯಕ್ತಪಾಡಿಸಿದ್ದಾರೆ.
ಎಲೈಟ್ ಎ ಮತ್ತು ಬಿ ಗುಂಪಿನಲ್ಲಿ ಗೆಲುವು ಪಡೆದು ನಾಕೌಟ್ ಗೆ ಅರ್ಹತೆ ಪಡೆಯುವುದು ಕಷ್ಟದ ಕೆಲಸ. ಅಂಥದರಲ್ಲಿ ಪಂಜಾಬ್ ಕಠಿಣ ಹೋರಾಟದೊಂದಿಗೆ ನಾಕೌಟ್ ಹಂತೆಕ್ಕೆ ಲಗ್ಗೆ ಇಟ್ಟಿದೆ. ಆದರೆ, ಮಳೆಯಿಂದಾಗಿ ಪಂದ್ಯ ಸಂಪೂರ್ಣವಾಗಿ ಆಡದೆ ಟೂನರ್ಿಯಿಂದ ಹೊರ ನಡೆದಿದೆ. ಎಂದು ಪಂಜಾಬ್ ತಂಡದ ಮಂದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.