ಯುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದೇ ಯುವಸೌರಭ

ಕೊಪ್ಪಳ: ಯುವ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದೇ ಯುವಸೌರಭ ಎಂದು ಯಲಬುರ್ಗಾ  ತಾಲ್ಲೂಕಿನ ಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.  

ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಕನೂರ ತಾಲ್ಲೂಕಿನ ಗೊರ್ಲಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ (ಸೆ.30) ಹಮ್ಮಿಕೊಳ್ಳಲಾದ ಯುವಸೌರಭ (ಯುವ ಪ್ರತಿಭೆ ಪ್ರೋತ್ಸಾಹ) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಹಳ್ಳಿಗಳಲ್ಲಿ ಇರುವ ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಯುವಸೌರಭ  ಕಾರ್ಯಕ್ರಮ ಸಹಕಾರಿಯಾಗಿದೆ. ಹಳ್ಳಿಯ ಹೆಣ್ಣು ಮಕ್ಕಳು ಮನೆಕೆಲಸಕ್ಕೆ ಮಾತ್ರ ಸೀಮಿತವಾಗದೆ ವೀರಗಾಸೆ ಮತ್ತು ಡೊಳ್ಳು ಕುಣಿತದಂತಹ ಇನ್ನೂ ಅನೇಕ  ಸಾಂಸ್ಕೃತಿಕ ಕಲೆಗಳಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಷಯವಾಗಿದೆ ಎಂದರು.  

ಇಟಗಿ ಗ್ರಾ. ಪಂ. ಅಧ್ಯಕ್ಷೆ ಗೌರಮ್ಮ ರಾಮಪ್ಪ ಗಿರಡ್ಡಿರವರು ಕಾರ್ಯಕ್ರಮ ಉದ್ಘಾಟಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ಜಿ. ಪಂ. ಸದಸ್ಯೆ ಗಂಗಮ್ಮ ಈರಣ್ಣ ಗುಳಗಣ್ಣನವರ ವಹಿಸಿದ್ದರು.  ಇಟಗಿ ಗ್ರಾ.ಪಂ. ಉಪಾಧ್ಯಕ್ಷೆ ಈರಮ್ಮ ಬಸವರಾಜ ಕಳ್ಳಿಮನಿ, ಸದಸ್ಯೆ ಸರೋಜಮ್ಮ ಶಾಂತವೀರಯ್ಯ ಗುನ್ನಳ್ಳಿ,   ತಳಕಲ್ ಪ. ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ. ಫಕೀರಪ್ಪ ವಜ್ರಬಂಡಿ, ಗಣ್ಯರಾದ ದ್ವಾರಕಯ್ಯಸ್ವಾಮಿ ಹಿರೇಮಠ, ಮಹೇಶ್ ಸುವರ್ೆ, ಚನ್ನಪ್ಪಗೌಡ್ರ ಮಾಲಿಪಾಟೀಲ್, ಅಪ್ಪಯ್ಯ ಬಿನ್ನಾಳ, ವಿರುಪನಗೌಡ್ರ ಪೊಲೀಸ ಪಾಟೀಲ್, ವೀರಯ್ಯ ಶಿರೂರಮಠ, ರುದ್ರಯ್ಯ ಕೋಮಾರ, ವೀರಬಸಯ್ಯ ಕೋಮಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಕಾರ್ಯಕ್ರಮದ ವಿವರ: ಶಿವಲಿಂಗಪ್ಪ ವ್ಹಿ ಹಳೇಪೇಟೆ ಹಾಗೂ ತಂಡದಿಂದ ಹಿಂದುಸ್ತಾನಿ ವಾದ್ಯ ತಬಲಾ ವಾದನ, ಶಕುಂತಲಾ ಬೆನ್ನಾಳ ಹಾಗೂ ತಂಡದಿಂದ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ಹಾಡುಗಾರಿಕೆ, ವಿದ್ಯಾ ಮಂಗಳೂರು ಹಾಗೂ ತಂಡದಿಂದ ಸಮೂಹ ನೃತ್ಯ, ಯುವರಾಜ ಹಿರೇಮಠ ಹಾಗೂ ತಂಡದಿಂದ ಸುಗಮ ಸಂಗೀತ, ಮೆಹಬೂಬ ಕಿಲ್ಲೇದಾರ ಹಾಗೂ ತಂಡದಿಂದ ಜನಪದ ಗೀತೆಗಳು, ಬಸವರಾಜ ಸಂಗಯ್ಯ ವಿರುಪಾಪೂರ ಹಾಗೂ ತಂಡದಿಂದ ನಂದಿಕೋಲು, ರೇಖಾ ಎಸ್. ಇಟಗಿ ಗೊಲರ್ೆಕೊಪ್ಪ ತಂಡದಿಂದ ವೀರಗಾಸೆ, ರವಿಕುಮಾರ್ ಗಂಗನಾಳ ತಂಡದಿಂದ ಬಯಲಾಟ, ಸಂಗಮೇಶ ಕಲ್ಲೂರ ಹಾಗೂ ಕಟ್ಟಿಬಸವಲಿಂಗೇಶ್ವರ ಜಾನಪದ ಕಲಾ ಸಂಘ ಗೊಲರ್ೆಕೊಪ್ಪ ತಂಡದಿಂದ ಕಥಾ ಕೀರ್ತನ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.