ಕಾಗವಾಡ 02: ಇಂದಿನ ವೈಜ್ಞಾನಿಕ ಯುಗದ ಹೆಸರಿನಲ್ಲಿ ಅನೇಕ ಯುವಕರು ದುಶ್ಚಟಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ಇದೊಂದು ಚಿಂತೆಯ ವಿಷಯವಾಗಿದೆ. ಯುವಕರು ಮಧ್ಯ ಸೇವನೆ ಮಾಡಿ ತಮ್ಮ ಶರೀರವನ್ನು ನಾಶ ಮಾಡಿ ಕೊಳ್ಳುತ್ತಿದ್ದಾರೆ. ಇದರಿಂದ ದೂರುವಿರಬೇಕೆಂದು ಮಿರಜನ ನಿರ್ಮಲ್ ವ್ಯಸನಮುಕ್ತಿ ಕೇಂದ್ರದ ತಜ್ಞ ವೈದ್ಯರಾದ ಡಾ. ಚಂದ್ರಶೇಖರ ಹಳಿಂಗಳೆ ಯುವಕರಿಗೆ ಕರೆ ನೀಡಿದ್ದಾರೆ.
ಅವರು, ಇತ್ತಿಚಿಗೆ ಮಿರಜ ತಾಲೂಕಿನ ಅರಗ ಗ್ರಾಮದಲ್ಲಿ ಜೈನ ಮುನಿಗಳ ಸಾನಿಧ್ಯದಲ್ಲಿ ನಡೆಯುತ್ತಿರುವ ಜೈನ ಸಮಾಜದ ಪಂಚಕಲ್ಯಾಣ ಪೂಜಾ ಕಾರ್ಯಕ್ರಮದಲ್ಲಿ ನಿರ್ಮಲ್ ವ್ಯಸನ ಮುಕ್ತಿ ಕೇಂದ್ರದ ತಜ್ಞ ವೈದ್ಯರ ತಂಡದೊಂದಿಗೆ ಭೇಟಿ, ನೀಡಿ ದುಶ್ಚಟಗಳ ಪರಿಣಾಮ ಮತ್ತು ಅದರಿಂದ ಮುಕ್ತಿ ಕುರಿತು ಕಿರು ನಾಟಕದ ರೂಪದಲ್ಲಿ ಮಾಹಿತಿ ನೀಡುತ್ತಾ ಮಾತನಾಡುತ್ತಿದ್ದರು.
ಡಾ. ಚಂದ್ರಶೇಖರ ಹಳಿಂಗಳೆ ಇವರು ಮೂಲತಃ ವಿಜಯಪೂರ ಜಿಲ್ಲೆಯವರಾಗಿದ್ದು, ಮಿರಜ ಪಟ್ಟಣದಲ್ಲಿ ವ್ಯಸನಮುಕ್ತಿ ಕೇಂದ್ರ ಸ್ಥಾಪಿಸಿ, ಕಳೆದ 20 ವರ್ಷಗಳಿಂದ ಯುವಕರನ್ನು ವ್ಯಸನಮುಕ್ತ ಮಾಡಲು ಶ್ರಮಿಸುತ್ತಿದ್ದಾರೆ. ಕರ್ನಾಟಕದ ವಿಜಯಪೂರ, ಬೆಳಗಾವಿ ಜಿಲ್ಲೆ ಸಾವಿರಾರು ಯುವಕರು ವ್ಯಸನಮುಕ್ತಿಗಾಗಿ ವೈದ್ಯರನ್ನು ಸಂಪರ್ಕಿಸುತ್ತಾರೆ. ಅವರು ಈ ಕುರಿತು ಮಾಹಿತಿ ನೀಡುತ್ತಾರೆ. ಮತ್ತು ಯುವಕರನ್ನು ವ್ಯಸನಮುಕ್ತಿಗೊಳಿಸಲು ಶ್ರಮಿಸುತ್ತಾರೆ.
“ನಾನು ವ್ಯಸನ ಮುಕ್ತನಾಗುತ್ತೇನೆ” ಎಂಬ ಪ್ರತಿಜ್ಞೆ ಮಾಡಿ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಆಸ್ಪತ್ರೆಗೆ ಬರುವವರಿಗಾಗಿ ಜನವರಿ 1 ರಿಂದ ಜನವರಿ 4 ರ ವರೆಗೆ ಕೆಸ್ ಪೇಪರ್ ಹಾಗೂ ಇನ್ನಿತರ ಉಪಚಾರದಲ್ಲಿ ರಿಯಾಯಿತಿ ನೀಡಲು ಮುಂದಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9922646566, 9028081339 ಗೆ ಸಂಪರ್ಕಿಸಿ, ಹೊಸ ವರ್ಷದ ಹೊಸ ಯುಗದ ಸಂಕಲ್ಪ ಮಾಡೋಣ ಎಂದು ಕರೆ ನೀಡಿದ್ದಾರೆ.
ಈ ಸಮಯದಲ್ಲಿ ನಿರ್ಮಲ ಆಸ್ಪತ್ರೆಯ ಸಿಬ್ಬಂದಿಗಳಾದ ವಿನಾಯಕ ಕವಡೆ, ಸಾಗರ ಜಾಧವ, ಅನುಜಾ ಯರನಾಳೆ, ಸ್ವರೂಪ ರಾಯನಾಡೆ, ಪ್ರಶಾಂತ ಜಾಧವ, ಹರೀಶ ಲೋಹಾರ, ಪವನ ಕೂಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.