ಯುವಕರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಡಾ. ಎಂ.ಎನ್‌. ಭೋಮಾಜ

Youth should get regular health check-up: Dr. M.N. Bhomaj

ಕಾಗವಾಡ 02: ಇಂದಿನ ಯುವ ಸಮುದಾಯದಲ್ಲಿ ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಹೃದಯ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಅತೀ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವಕರು ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಡಾ. ಎಂ.ಎನ್‌. ಭೋಮಾಜ ಹೇಳಿದರು. 

ರವಿವಾರ ದಿ. 01 ರಂದು ತಾಲೂಕಿನ ಶಿರಗುಪ್ಪಿಯ ಜೈನ ಸಮುದಾಯ ಭವನದಲ್ಲಿ 20ನೇ ಶತಮಾನದ ಪ್ರಥಮಾಚಾರ್ಯ ಪ.ಪೂ. ಶ್ರೀ 108 ಶಾಂತಿಸಾಗರ ಮುನಿಮಹಾರಾಜರ ಆಚಾರ್ಯ ಪದಾರೋಹಣ ಶತಾಬ್ದಿ ವರ್ಷ ಮತ್ತು ರಾಷ್ಟ್ರಸಂತ ಪ.ಪೂ. 108 ವಿದ್ಯಾನಂದ ಮುನಿಮಹಾರಾಜರ ಜನ್ಮಶತಾಬ್ದಿ ವರ್ಷದ ನಿಮಿತ್ಯ ಶ್ರೀ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಸಾಂಗಲಿಯ ಉಷಃಕಾಲ ಅಭಿನವ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ, ಮಿರಜ್‌ನ ವಸಂತದಾದಾ ಬ್ಲಡ್ ಬ್ಯಾಂಕ್ ಇವರ ಸಹೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ರೋಗ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು. 

ಶಿಬಿರವನ್ನು ಗಣ್ಯರು ಶಾಂತಿಸಾಗರ ಮುನಿಮಹಾರಾಜ ಮತ್ತು ವಿದ್ಯಾನಂದ ಮುನಿಮಹಾರಾಜರ ಭಾವಚಿತ್ರದ ಪೂಜೆಯೊಂದಿಗೆ ದೀಪ ಬೆಳಗಿಸಿ, ಚಾಲನೆ ನೀಡಲಾಯಿತು. ಇದೇ ವೇಳೆ ಅನೇಕ ಮುಖಂಡರು ತಮ್ಮ ಅನಿಸಿಕೆ ಹಂಚಿಕೊಂಡರು. 

ಶಿಬಿರದಲ್ಲಿ 150 ಜನ ರಕ್ತದಾನ ಮಾಡಿದರು. ಅಲ್ಲದೇ 300 ಕ್ಕೂ ಹೆಚ್ಚು ಜನ ಹೃದಯ ರೋಗ ತಪಾಸಣೆ ಮಾಡಿಸಿಕೊಂಡರು. ಆಯುಷ್ಮಾನ ಭಾರತ, ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಸಂತೋಶಕುಮಾರ ಗುಂಡಪ್ಪನವರ, ಆರತಿ ಚೌಗುಲೆ ಮಾಹಿತಿ ನೀಡಿದರು. 

ಈ ಸಮಯದಲ್ಲಿ ಡಾ. ಆಶೀಫ್ ಸೊಲ್ಲಾಪೂರೆ, ಡಾ, ವಿಧಿ ಶಹಾ, ಡಾ. ಅಮೋಲ ಭೋಜೆ, ಡಾ. ಬಿ.ಡಿ. ಶಹಾ, ಡಾ. ಅವಿನಾಶ ರಾಠೋಡ, ಡಾ. ಅಮೀತ ಬೋರೆ, ಡಾ. ಅಮೀತ ಜೋಶಿ, ಡಾ. ಸ್ಪಪ್ನಿಲ ಕನ್ಹೇರಿ, ಡಾ. ಸುಕುಮಾರ ಚೌಗುಲೆ, ಡಾ. ಜೆ.ಎ. ಖೋತ, ಡಾ. ಮನೋಜ ಮಿಣಚೆ, ಮುಖಂಡರಾದ ಮಹಾವೀರ ಕಾತ್ರಾಳೆ, ಭಮ್ಮಣ್ಣಾ ಚೌಗುಲೆ, ವಿದ್ಯಾಸಾಗರ ಮಾನಗಾಂವೆ, ಅಶೋಕ ಕಾತ್ರಾಳೆ, ಸುರೇಶ ಚೌಗುಲೆ, ಅಭಯ ಅಕಿವಾಟೆ, ಭೀಮು ಭೋಲೆ, ಅಜೀತ ಪೂಜಾರಿ ಸೇರಿದಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರು, ಶಾಂತಿಸಾಗರ ಸಹಕಾರಿಯ ಆಡಳಿತ ಮಂಡಳಿಯ ಸದಸ್ಯರು, ಶಾಖಾ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅನೀಲ ಕನವಾಡೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.