ಲೋಕದರ್ಶನ ವರದಿ
ಬೆಳಗಾವಿ: ಯುವ ಜನೋತ್ಸವ ನಿತ್ಯೋತ್ಸವ ಆಗಬೇಕು. ಭಾರತೀಯ ಸಂಸ್ಕೃತಿಯ ದರ್ಶನವನ್ನು ಕೊಂಡೊಯ್ಯುವ ಜವಾಬ್ದಾರಿ ಯುವಕ-ಯುವತಿಯರದ್ದಾಗಿದೆ ಎಂದು ಜನಪದ ವಿದ್ವಾಂಸ ಡಾ.ಬಸವರಾಜ ಜಗಜಂಪಿ ಹೇಳಿದರು.
ಅವರು ಹುಬ್ಬಳ್ಳಿಯ ಕನರ್ಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಕೆಎಲ್ಇ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಜರುಗಿದ ಅಂತರ್ ಕಾನೂನು ಮಹಾವಿದ್ಯಾಲಯಗಳ ವಲಯಮಟ್ಟದ ಎರಡು ದಿನಗಳ ಯುವಜನೋತ್ಸವದಲ್ಲಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಭಾರತ ದೇಶದಲ್ಲಿ ಪಾಂಡಿತ್ಯ, ಕೌಶಲ ಹಾಗೂ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಂದು ಭಾರತೀಯ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ತನ್ನ ವಿಶಿಷ್ಟವಾದ ಬೆಳಕನ್ನು ಚೆಲ್ಲಿದೆ. ವಿದ್ಯಾಥರ್ಿಗಳ ಪ್ರತಿಭೆಗೆ ಯುವಜನೋತ್ಸವ ಒಂದು ವೇದಿಕೆಯಾಗಿದೆ. ನಮ್ಮ ಜನಪದರು ಯಾವುದೇ ಶಾಲೆ ಕಾಲೇಜುಗಳನ್ನು ಕಲಿತವರಲ್ಲ. ಆದರೆ ಅವರು ರಚಿಸಿದ ಸಾಹಿತ್ಯ ವಿಶ್ವವಿದ್ಯಾಲಯದ ಕಟ್ಟೆ ಹತ್ತಿತು. ಜನಪದವೇ ನಮ್ಮ ಉಸಿರು, ಶಕ್ತಿ. ಅಂತಹ ಜನಪದ ಸಾಹಿತ್ಯ-ಕಲೆಯನ್ನು ಜೀವಂತವಾಗಿಡುವ ಜವಾಬ್ದಾರಿ ಇಂದಿನ ಯುವಜನಾಂಗದ್ದು. ಆತ್ಮವಿಶ್ವಾಸದಿಂದ ಪಾಲ್ಗೊಳ್ಳುವ ಮೂಲಕ ಆರೋಗ್ಯಕರವಾದ ಸ್ಪಧರ್ೆಯಲ್ಲಿ ತೊಡಗಬೇಕು. ನಮ್ಮಲ್ಲಿ ಸೂಪ್ತವಾದ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಮಾರ್ಗದರ್ಶನವೆನಿಸಿದೆ. ಜೀವನದಲ್ಲಿ ಉತ್ತಮ ಮಾನವನಾಗಿ ಬದುಕುವುದು ಮುಖ್ಯ. ನಮ್ಮ ಒಲಿವಿನಂತೆ ನಾವಾದಾಗ ಜೀವನ ಮಧುರವೆನಿಸುತ್ತದೆ ಎಂದು ಹೇಳಿದರು.
ಭಾರತ ನೂರಾಮೂವತ್ತು ಕೋಟಿ ಜನಸಂಖ್ಯೆ ಹೊಂದಿದ್ದರೂ ಅದಿಂದು ದೇಶಕ್ಕೆ ದೊಡ್ಡ ಸಮಸ್ಯೆಯಾಗಿಲ್ಲ. ನಮ್ಮ ದೇಶದ ಪ್ರತಿಭೆ, ಕೌಶಲವನ್ನು ಜಗತ್ತು ಗುರುತಿಸುತ್ತಿದೆ. ನಮ್ಮಲ್ಲಿಯ ಪ್ರತಿಭೆಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದ್ದು, ಅಮೇರಿಕೆದಂತಹ ದೇಶಗಳು ಭಾರತೀಯರು ಅದರಲ್ಲೂ ಕನ್ನಡಿಗರನ್ನು ತಮ್ಮ ಸೇವಾಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮನ್ನಣೆ ನೀಡುತ್ತಿವೆ ಎಂದು ಹೇಳಿದರು.
ಸಾಂಸ್ಕೃತಿಕ ದಿವಾಳಿ ಎಂದೂ ಆಗಬಾರದು. ಆದರೆ ಇಂದು ಯಂತ್ರ ತಂತ್ರಜ್ಞಾನದ ದಾಸರಾಗಿ ಸಂಸ್ಕೃತಿಯನ್ನೇ ಮರೆಯುತ್ತಿದ್ದೇವೆ. ಇದರಿಂದ ನಮ್ಮ ಸಂಸ್ಕೃತಿ ಅಪಾಯದಲ್ಲಿದೆ. ಸಾಮಾಜಿಕ ಜಾಲತಾಣದ ಪ್ರಭಾವದಿಂದ ನಾವಿಂದು ವ್ಯಕ್ತಿ ಕೇಂದ್ರವಾಗುತ್ತಿದ್ದೇವೆ. ಅಂತ್ಯಸಂಸ್ಕಾರಕ್ಕೆ ಹೋದರೂ ನಾವು ಸೆಲ್ಫಿಗೆ ಮಾರುಹೋಗುತ್ತಿದ್ದೇವೆ ಇದು ಕಳವಳಕಾರಿ ಬೆಳವಣಿಗೆ. ನಮ್ಮ ಜಾನಪದ ಕಲೆ ಅತ್ಯಂತ ಶ್ರೀಮಂತವಾಗಿದ್ದು ಉತ್ತಮ ಭವಿಷ್ಯವಿದೆ. ಯುವ ಸಮುದಾಯ ಅತ್ಯಂತ ಆತ್ಮವಿಶ್ವಾಸದಿಂದ ಶ್ರದ್ಧೆಯಿಂದ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮದ ಕ್ಷಣಗಳನ್ನು ಅನುಭವಿಸಬೇಕು. ಇಂತಹ ಸ್ಪಧರ್ೆಗಳು ನಮಗೆ ಹುರುಪು, ಅದ್ಯಮ ವಿಶ್ವಾಸ ನೀಡುತ್ತವೆ. ಗೆದ್ದು ಬೀಗುವುದು ಬೇಡ. ಅವುಗಳಲ್ಲಿ ಸ್ಪಧರ್ೆಗಳಲ್ಲಿ ಸ್ಪಧರ್ಾತ್ಮಕ ಮನೋಭಾವದಿಂದ ಪಾಲ್ಗೊಳ್ಳೋಣ. ಭಾಗವಹಿಸುವಿಕೆ ಮುಖ್ಯ ಇಂತಹ ಕಾರ್ಯಕ್ರಮಗಳು ಬದುಕನ್ನು ಕಟ್ಟಿಕೊಡುವ ವೇದಿಕೆಯಾಗಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಆರ್.ಬಿ.ಬೆಲ್ಲದ ಮಾತನಾಡಿ, ಯುವ ಪ್ರತಿಭೆಗಳಿಗೆ ಉತ್ತಮವಾದ ಅವಕಾಶವನ್ನು ಯುವಜನೋತ್ಸವ ನೀಡಿದೆ. ಇಲ್ಲಿ ಸ್ಪಧರ್ೆ ಮುಖ್ಯವಲ್ಲ. ಇಲ್ಲಿ ಪಾಲ್ಗೊಳ್ಳುವುದು ಮುಖ್ಯ. ವಿದ್ಯಾಥರ್ಿ ಜೀವನದಲ್ಲಿ ನಮ್ಮ ಸಾಂಸ್ಕೃತಿಕ ಚಿಂತನೆಗೆ ಇದೊಂದು ವೇದಿಕೆಯಾಗಬೇಕು. ವಿದ್ಯಾಥರ್ಿಗಳ ಸೃಜನಾತ್ಮಕ ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಯುವಜನೋತ್ಸವ ಮುನ್ನುಡಿ ಬರೆಯುತ್ತದೆ. ಈ ನಿಟ್ಟಿನಲ್ಲಿ ಕಾನೂನಿನ ವಿದ್ಯಾಥರ್ಿಗಳು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳದೆ ಪರಂಪರೆಯಿಂದ ಬಂದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲಿ ಭಾಗವಹಿಸಿ ಪ್ರತಿಭೆ ಮೆರೆಯಬೇಕೆಂದು ನುಡಿದರು.
ಡಾ.ಉಮಾ ಹಿರೇಮಠ, ವಿಜಯ ಮುರದಂಡೆ, ಜ್ಯೋತಿ ಹಿರೇಮಠ, ಸವಿತಾ ಪಟ್ಟಣಶೆಟ್ಟಿ, ಸುಪ್ರಿಯಾ ಸ್ವಾಮಿ, ಅಶ್ವಿನಿ ಪರಪ್ಪ ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಯಸಿಂಹ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಲ್ಲಿಕಾಜರ್ುನ ಸಂಗಡಿಗರು ಪ್ರಾಥರ್ಿಸಿದರು. ಯುವ ಜನೋತ್ಸವದ ಸಂಯೋಜಕಿ ಗೋಪಿಕಾ ಹೊಸಮನಿ ವಂದಿಸಿದರು. ಷಾಯಮಾ ಮೇಸ್ತ್ರಿ ಹಾಗೂ ಪೂಣರ್ಿಮಾ ಕಾಜಗಾರ ನಿರೂಪಿಸಿದರು. ರಾಜ್ಯದ ವಿವಿಧ 12 ಕಾನೂನು ಮಹಾವಿದ್ಯಾಲಯಗಳ ಸ್ಪಧರ್ಾಳುಗಳು ಪಾಲ್ಗೊಂಡಿದ್ದರು.