ಬೆಳಗಾವಿ, ಜುಲೈ 10: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಕರ್ಾರ ಆತ್ಮನಿರ್ಭರ ಭಾರತಕ್ಕೆ ಪಣ ತೊಟ್ಟು ದೇಶದ ಜನರ ಎದುರು ಅವಕಾಶಗಳನ್ನು ಇರಿಸಿದೆ. ದೇಶದ ಜನತೆ ಅದರಲ್ಲೂ ಮುಖ್ಯವಾಗಿ ಯುವಜನತೆ ಆತ್ಮನಿರ್ಭರ ಭಾರತ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕರೆ ನೀಡಿದರು.
ನಗರದ ಕಾಡಾ ಕಚೇರಿಯಲ್ಲಿ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ ಅಂಗಡಿ ಅವರು, ಭಾರತ ಈಗ ಹೊರಳು ಹಾದಿಯಲ್ಲಿದೆ. ಗಾಂವ್, ಗರೀಬ್, ಕಿಸಾನ್ ಅಂದರೆ ಗ್ರಾಮ, ಬಡವ ಮತ್ತು ರೈತನನ್ನು ದೃಷ್ಟಿಯಲ್ಲಿರಿಸಿಕೊಂಡು 80 ಕೋಟಿ ಜನರಿಗೆ ಕೊರೋನಾ ಸಂಕಟದ ಸಮಯದಲ್ಲಿ ಉಚಿತವಾಗಿ ನವೆಂಬರ್ ವರೆಗೆ ಅಕ್ಕಿ, ಬೇಳೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಸ್ವಯಂ ಬದುಕು ಕಟ್ಟಿಕೊಳ್ಳುವ ಜತೆಗೆ ದೇಶದ ಅಭ್ಯುದಯಕ್ಕಾಗಿ ದುಡಿಯಬೇಕಾಗಿದೆ ಎಂದರು.
ವೋಕಲ್ ಟು ಲೋಕಲ್, ಲೋಕಲ್ ಟು ಗ್ಲೋಬಲ್ ಎನ್ನುವ ಉದ್ದೇಶವನ್ನು ಸಾಕಾರಗೊಳಿಸಲು ಯುವಜನತೆ ಮುಂದೆ ಬರಬೇಕಿದೆ. ಕೇಂದ್ರ ಸಕರ್ಾರ 20 ಲಕ್ಷ ಕೋಟಿ ನೆರವು ಘೋಷಿಸಿದೆ. ರೈಲ್ವೆ, ಏರ್ಫೋಸರ್್, ಕೃಷಿ, ತೋಟಗಾರಿಕೆ, ಹೈನೋದ್ಯಮ, ಸಣ್ಣ ಕೈಗಾರಿಕೆ ಸೇರಿ ಹಲವು ವಲಯಗಳಲ್ಲಿ ಸ್ವಯಂ ಉದ್ಯೋಗಕ್ಕೆ ಅವಕಾಶಗಳ ಬಾಗಿಲು ತೆರೆದಿದೆ. ಈ ನಿಟ್ಟಿನಲ್ಲಿ ಯುವಜನರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಇಂದಿನ ಈ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.