ಲಿಂಗದಲ್ಲಿ ಭಕ್ತಿ, ಕಾಯಕದಲ್ಲಿ ನಿಷ್ಠೆ ಶ್ರೇಷ್ಠ:ಬಸವಲಿಂಗ ಶರಣರು
ಹೂವಿನಹಡಗಲಿ: ವೀರಶೈವ ಧರ್ಮಕ್ಕೆ ಜ್ಯೋತಿಷ್ಯ ಶಾಸ್ತ್ರ, ಜಾತಕಗಳಿಗಿಂತ ಲಿಂಗದಲ್ಲಿ ಭಕ್ತಿ ಇಟ್ಟು, ಕಾಯಕದಲ್ಲಿ ನಿಷ್ಠೆ ಇಡುವುದೇ ಶ್ರೇಷ್ಠ ಎಂದು ಮೈಲಾರದ ಬಸವಲಿಂಗ ಶರಣರು ಪ್ರತಿಪಾದಿಸಿದ್ದಾರೆ ಎಂದು ಹಿರೇಹಡಗಲಿ ಕಸಾಪ ಅದ್ಯಕ್ಷ ಜಿ.ಎಸ್.ಸತೀಶ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಿರೇಕುರುವತ್ತಿಯ ಚಕ್ಕಿ ಚೆನ್ನಪ್ಪ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪೂಜ್ಯ ಚರಂತಪ್ಪಯ್ಯ ಮಹಾಸ್ವಾಮಿಗಳ ಸ್ಮರಣಾರ್ಥ ದತ್ತಿ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ಸ್ಮರಣಾರ್ಥ ದತ್ತಿ,ತೆಗ್ಗಿನ ಮಠದ ವೀರಮ್ಮ ಶಿವಶಂಕರಯ್ಯ ಸ್ಮಾರಕ ದತ್ತಿ,ಮುಂಡವಾಡ ಕಸ್ತೂರಿ ಚನ್ನಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಮೈಲಾರ ಬಸವಲಿಂಗ ಶರಣರ ಸಾಹಿತ್ಯ’ಕುರಿತು ಮಾತನಾಡಿದರು.ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ಬಗೆ, ದತ್ತಿ ಉಪನ್ಯಾಸದ ಮಹತ್ವದ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕ ಎಚ್.ಎಲ್. ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ರಂಜಿತಾ, ನಿವೇದಿತಾ ಕನ್ನಡ ಕಾವ್ಯಗಳನ್ನು ವಾಚಿಸಿದರು. ಕುಮಾರಿ ವೇದಳ ಕನ್ನಡ ಗೀತೆ ಗಾಯನ ಮೆಚ್ಚುಗೆ ಪಡೆಯಿತು.ಶಿಕ್ಷಕ,ಜನಪದ ಕಲಾವಿದ ವಿ.ಜಿ.ಅಗ್ರಹಾರ ಇವರ ಸಂಗೀತ ಕಾರ್ಯಕ್ರಮ ವಿದ್ಯಾರ್ಥಿಗಳ ಮನಸೂರಗೊಂಡಿತು. ಇದೇ ವೇಳೆಜಟ ಟಿಜಥಿ ಜಿ.ಎಸ್.ಸತೀಶ್ ಹಾಗೂ ವಿ.ಜಿ.ಅಗ್ರಹಾರ ಇವರನ್ನು ಕಸಾಪ ವತಿಯಿಂದ ಗೌರವಿಸಲಾಯಿತು. ಹಿರಿಯ ಶಿಕ್ಷಕರಾದ ಕೊಟ್ರೇಶ್, ದೈಹಿಕ ಶಿಕ್ಷಕ ಮೆಹಬೂಬ್ ಬಾಷಾ ಉಪಸ್ಥಿತರಿದ್ದರು. ಶಿಕ್ಷಕ ಸಂತೋಷ್ ವಂದಿಸಿದರು. ಕನ್ನಡ ಶಿಕ್ಷಕ ಮಂಜುನಾಥ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.