ಮೂರು ದಿನಗಳವರೆಗೆ ನಡೆಯಲಿರುವ ಅಯೋಧ್ಯೆ ರಾಮ ಮಂದಿರ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮ

Ayodhya Ram Mandir first anniversary program to be held for three days

ಅಯೋಧ್ಯೆ 11: ಇಂದು ಉತ್ತರಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ.

ಮೂರು ದಿನಗಳವರೆಗೆ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಲ ರಾಮಮೂರ್ತಿಗೆ ಅಭಿಷೇಕ ನೆರವೇರಿಸಿ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಹಾ ಆರತಿ ಬೆಳಗಿ ದೇವರಿಗೆ 56 ತಿನಿಸುಗಳನ್ನು ಅರ್ಪಿಸಿದರು.

ಮೂರು ದಿನಗಳಲ್ಲಿ ದೇಶ, ವಿದೇಶಗಳಿಂದ ಲಕ್ಷಾಂತರರ ಭಕ್ತಾದಿಗಳು ಆಗಮಿಸುವ ನೀರಿಕ್ಷೆ ಇದೆ. ಬರುಬ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನೀರು, ವಾಸ್ತವ್ಯ ಟೆಂಟ್‌ಗಳು, ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೂ ಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ,  ವಿವಿಐಪಿಗಳಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗಿದೆ  ಎಂದು ಟ್ರಸ್ಟ್‌ ತಿಳಿಸಿದೆ.