ಬಸವ ಪಟಆರೋಹಣ: ಗವಿಮಠಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ

Basava Pataarohana: Electrified drive for Gavi Matha Jatra


ಬಸವ ಪಟಆರೋಹಣ: ಗವಿಮಠಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ 

ಕೊಪ್ಪಳ 11: ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ದಿನಾಂಕ 11 ರಂದು ಶನಿವಾರ  ಸಂಜೆ 5ಬಸವ ಪಟಆರೋಹಣಮೂಲಕಜಾತ್ರೆಯ ಸಕಲ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು ಇಂದು ಶ್ರೀಗವಿಮಠದ ಕರ್ತೃಗದ್ದುಗೆಯ ಮುಂಭಾಗದಲ್ಲಿ ‘ಬಸವ ಪಟಆರೋಹಣ’ ಎಂಬ ಧಾರ್ಮಿಕಕಾರ್ಯಕ್ರಮವೂಜರುಗಿತು. ಭಕ್ತರೆಲ್ಲರೂಕೂಡಿಕೊಂಡುನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆಭಕ್ತರುಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಶ್ರದ್ಧೆಯಿಂದಕೈಯಲ್ಲಿ ಹಿಡಿದು ಶ್ರೀ ಗವಿಮಠದಕರ್ತೃಗದ್ದುಗೆಯ ಸುತ್ತಐದು ಸಾರಿ ಪ್ರದಕ್ಷಿಣೆ- ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯ ಮುಂಭಾಗದಎದುರಿಗಿರುವ ಶಿಲಾಸ್ತಂಭಕ್ಕೆ್ಕೆ ಬಸವಪಟವನ್ನುಆರೋಹಣಗೊಳಿಸಿದರು. 

ಬಸವಪಟಆರೋಹಣ ಮಾಡುವಉದ್ದೇಶ: ನಮ್ಮದು ಕೃಷಿ ಪ್ರಧಾನ ನಾಡು.ಆಕಾರಣಕ್ಕಾಗಿನಂದಿ, ಈಶ್ವರ, ಸೂರ್ಯ, ಚಂದ್ರ,ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ.ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿಸದಾಕಾಲ ಉತ್ತಮ ಮಳೆ, ಉತ್ತಮ ಬೆಳೆ ಬಂದುರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾದೊರೆಯಲೆಂಬ ಆಶಯಕ್ಕಾಗಿ‘ಬಸವ ಪಟಆರೋಹಣ’ ಕಾರ್ಯಕ್ರಮವುಜರುಗುತ್ತದೆ.ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟಆರೋಹಣಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.