ಬೆಂಗಳೂರು, ಆ 8 ಮುಂಬರುವ ಟೋಕಿಯೋ ಒಲಿಂಪಿಕ್ಸ್ ಟೆಸ್ಟ್ ಟೂರ್ನಿ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಭಾರತ ಪುರುಷರ ಹಾಕಿ ತಂಡದ ತರಬೇತಿ ಶಿಬಿರ ಈ ವಾರ ಮುಕ್ತಾಯವಾಗಲಿದೆ. ಮುಂದಿನ ಸವಾಲನ್ನು ಸ್ವೀಕರಿಸಲು ಯುವ ಆಟಗಾರರು ಸಿದ್ಧರಿದ್ದಾರೆಂದು ಉಪ ನಾಯಕ ಮಂದೀಪ್ ಸಿಂಗ್ ತಿಳಿಸಿದ್ದಾರೆ. ಭಾರತ ತಂಡ ಪ್ರಸ್ತುತ ವಿಶ್ವ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದೆ. ಟೋಕಿಯೋ ಒಲಿಂಪಿಕ್ಸ್ ಟೆಸ್ಟ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಅಗ್ರ ಕ್ರಮಾಂಕದ ತಂಡಗಳು ಎದುರಾಗಲಿವೆ. ಆದರೂ, ಭಾರತ ತಂಡದ ಯುವ ಆಟಗಾರರು ಕಠಿಣ ಸವಾಲು ಮೆಟ್ಟಿ ನಿಲ್ಲಲು ಸಿದ್ಧರಿದ್ದಾರೆಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಲಿಂಪಿಕ್ಸ್ ಟೆಸ್ಟ್ ಟೂರ್ನಿಯಲ್ಲಿ ಭಾರತ ತಂಡ ಮಲೇಷ್ಯಾ, ಜಪಾನ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಈ ಮೂರು ತಂಡಗಳ ಗುಣಮಟ್ಟದ ತಂಡಗಳಾಗಿದ್ದು, ಭಾರತಕ್ಕೆ ಕಠಿಣ ಸವಾಲು ನೀಡಲಿವೆ. ಹೆಚ್ಚಿನ ಯುವ ಆಟಗಾರರನ್ನು ಒಳಗೊಂಡಿರುವ ನಮ್ಮ ತಂಡದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮುಂದಿನ ವರ್ಷದ ಮಹತ್ವದ ಕ್ರೀಡಾಕೂಟದ ವಾತವರಣ ಹೇಗಿದೆ ಎಂದು ಅರ್ಥಿಸಿಕೊಳ್ಳಲು ಈ ಟೂರ್ನಿ ನಮಗೆ ಸಹಾಯವಾಗಲಿದೆ ಎಂದು ಮಂದೀಪ್ ಹೇಳಿದ್ದಾರೆ. ಅತಿ ಹೆಚ್ಚು ಅನುಭವಿ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಕನ್ನಡಿಗೆ ಎಸ್.ವಿ ಸುನೀಲ್, ಕೋತಾಜಿತ್ ಸಿಂಗ್ ಅವರು ರಾಷ್ಟ್ರೀಯ ತಂಡದ ಪರ ಅತಿ ಹೆಚ್ಚು ಪಂದ್ಯಗಳಾಡಿದ್ದಾರೆ. ಅವರ ಸೇವೆ ಬಾರತ ತಂಡಕ್ಕೆ ಹೆಚ್ಚ ಲಾಭವಾಗಲಿದೆ. ತಂಡದಲ್ಲಿ ಉಪ ನಾಯಕನ ಜವಾಬ್ದಾರಿ ನೀಡಿರುವುದರಿಂದ ನನ್ನ ಮೇಲೆ ಹೆಚ್ಚಿನ ಭಾರ ಇದೆ. ರಾಷ್ಟ್ರೀಯ ತಂಡದ ಪರ ಆಡಲು ಹೆಮ್ಮೆ ಎಂದೆನಿಸುತ್ತಿದೆ. ಭಾರತ ತಂಡದ ಯಶಸ್ಸಿಗೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ. ಮಂದೀಪ್ ಸಿಂಗ್ ಅವರು ಭಾರತದ 142 ಪಂದ್ಯಗಳಾಡಿದ್ದಾರೆ. ಗಾಯದಿಂದಾಗಿ ದೀರ್ಘಕಾಲ ಅಂಗಳದಿಂದ ಹೊರಗುಳಿದಿದ್ದ ಎಸ್.ವಿ ಸುನೀಲ್ ಅವರು ಅವರು ತಂಡಕ್ಕೆ ಮರಳಿದ್ದು ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಸುನೀಲ್ ಭಾರತದ ಪರ 250 ಪಂದ್ಯಗಳಾಡಿದ್ದಾರೆ.