ಲೋಕದರ್ಶನ ವರದಿ
ಕುಕನೂರು 22: ಪ್ರತಿಯೊಬ್ಬ ಮನುಷ್ಯನು ಸಮಾಜಕ್ಕೆ ಮಾರಕವಾಗದೆ ಉಪಕಾರಿಯಾಗಬೇಕು ಅಂದಾಗ ಮನುಷ್ಯನಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದು ಮುಖ್ಯೋಪಾದ್ಯಾಯರಾದ ಶಿವಲಿಂಗಪ್ಪ ಪಟ್ಟೆದ ಹೇಳಿದರು.
ತಾಲೂಕಿನ ಸಿದ್ನೇಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಯಲ್ಲಿ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ವಚನಕಾರರಲ್ಲಿ ಅತ್ಯಂತ ಶ್ರೇಷ್ಠ ವಚನಕಾರರಾಗಿ ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಅಡಿಮೇಲಾಗಿ ಬೀಳುವ ಲೊಟ್ಟೆ ಮೂಳರ ಕಂಡರೆ ಗಟ್ಟಿ ಪಾದರಕ್ಷೆಯ ತೆಗೆದುಕೊಂಡು ಟೋಕ ಟೋಕನೆ ಹೊಡೆಯಂದ ನಮ್ಮ ಅಂಬಿಗರ ಚೌಡಯ್ಯ ಇಂತಹ ಸಾವಿರಾರು ವಚನಗಳನ್ನ ರಚಿಸಿದ್ದಾರೆ ಹಾಗೂ ಅವುಗಳನ್ನ ಅರ್ಥಮಾಡಿಕೊಂಡರೆ ಮಾನವ ತನ್ನ ಜೀವಿತಾವದಿಯಲ್ಲಿ ಹೇಗೆ ಜೀವಿಸಬೇಕು ಎನ್ನುವ ಅರ್ಥ ತಿಳಿಯುತ್ತದೆ ಎಂದರು.
ಎಸ್ಡಿಎಮ್ಸಿ ಅಧ್ಯಕ್ಷ ಕಾಶಿಂಸಾಬ ಚಿತ್ತಾಪೂರ ಮಾತನಾಡಿ ವ್ಯಕ್ತಿಯೂ ತನ್ನ ಜೀವನವನ್ನು ಯಾವ ರೀತಿಯಲ್ಲಿ ರೂಪಿಸಿಕೊಂಡಿದ್ದರು ಸುತ್ತ ಮುತ್ತಲ ಜನರಲ್ಲಿ ಕೇಲವರಾದರು ಅವನ ಬಗ್ಗೆ ಒಂದಲ್ಲಾ ಒಂದು ಬಗೆಯ ಕೊಂಕು ನುಡಿಯನ್ನು ಆಡುತ್ತಿರುತ್ತಾರೆ ಆದ್ದರಿಂದ ಲೋಕದಲ್ಲಿ ಎಲ್ಲರೂ ಮೆಚ್ಚುವಂತೆ ಬಾಳ್ವೆ ನಡೆಸಲು ಯಾರಿಂದಲು ಆಗದು ಎಂಬ ಸಾಮಾಜಿಕ ವಾಸ್ತವ ಸತ್ಯವನ್ನು ವಚನಗಳ ಮೂಲಕ ಹೇಳಿದ್ದಾರೆ ಅದರಂತೆ ನಾವು ನಡೆದುಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶರಣಪ್ಪ ಲಕ್ಷಟ್ಟಿ, ಸಂಗಪ್ಪ ಕೊಪ್ಪದ, ಕವಿತಾ ನಾಯಕ, ರೇಖಾ ಛಲವಾದಿ, ಎಸ್ಡಿಎಮ್ಸಿ ಸದಸ್ಯರಾದ ರುದ್ರಯ್ಯಸ್ವಾಮೀ ಪೂಜಾರ, ಬಸವರಾಜ ಛಲವಾದಿ, ಹನುಮಂತ ಸೇರಿದಂತೆ ಶಾಲಾ ವಿದ್ಯಾಥಿಗಳು ಹಾಜರಿದ್ದರು.
\