ಗುರು ರಕ್ಷೆ ಪುರಸ್ಕಾರ ಪಡೆದ ಯೋಗ ಗುರು ರಾಘವೇಂದ್ರ

ರನ್ನ ಬೆಳಗಲಿ 09:  ರನ್ನ ಬೆಳಗಲಿಯ ವಿವಿಧ ಕ್ಷೇತ್ರದ ಸಾಧಕ ಹೋರಾಟಗಾರರಾದ ರಾಘವೇಂದ್ರ ಮಹಾದೇವ ನೀಲನ್ನವರರವರಿಗೆ ಇತ್ತೀಚಿಗೆ ಜರುಗಿದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯ  ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನಾಡಹಬ್ಬ ದಸರಾ ಹಾಗೂ ನವರಾತ್ರಿ ಉತ್ಸವ ಹಾಗೂ ಮಹಾಕಾಳಿಕಾ ಭುವನೇಶ್ವರಿ ವನದ ಅಡಿಗಲ್ಲು ಸಮಾರಂಭ ಕಾರ್ಯಕ್ರಮವು ದಿ. 01 ಮಂಗಳವಾರ ದಂದು ಕೋಡಿಹಾಳ ತೋಟದಲ್ಲಿ ಜರುಗಿತು. ಈ ಕಾರ್ಯಕ್ರಮದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಸಾಮಾಜಿಕ,ಧಾರ್ಮಿಕ,ಯೋಗ ಕ್ಷೇತ್ರಗಳ ಸಾಧನೆಗೆ "ಗುರು ರಕ್ಷೆ" ಪುರಸ್ಕಾರ ನೀಡಿ ಗೌರವಿಸಿದ್ದಾರೆ.ರಾಮನೀ..ಎಂಬ ಸಂಕ್ಷಿಪ್ತ ನಾಮದಿಂದ ಚಿರಪರಚಿತರಾದ  ಶ್ರೀಯುತರು ಬಾಲ್ಯದಿಂದಲೂ ಯೋಗದಲ್ಲಿ ಆಸಕ್ತಿ ಹೊಂದ್ದಿದ್ದು ವಿವಿಧ ವೇದಿಕೆಗಳ ಅತ್ಯುತ್ತಮ ನಿರೂಪಕರಾಗಿ, ಯೋಗ ತರಬೇತಿದಾರರಾಗಿ,ಉಪನ್ಯಾಕರಾಗಿ, ಸಮಾಜ ಸೇವಕರಾಗಿ, ಸಾಹಿತಿಗಳಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಿಗೆ ಸೇವೆ ಸಲ್ಲಿಸುವುದರ ಜೊತೆಗೆ ಹಸಿರು ಕ್ರಾಂತಿ ದಿನಪತ್ರಿಕೆ ವರದಿಗಾರರಾಗಿ ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ. ಪದವಿ ವಿದ್ಯಾಲಯ, ಪದವಿ ಪೂರ್ವ ಮಹಾವಿದ್ಯಾಲಯ, ಮತ್ತು ಪ್ರೌಢ ಶಾಲೆಗಳಿಗೆ ಸೇರಿದಂತೆ ವ್ಯಕ್ತಿತ್ವ ವಿಕಸನ, ಸ್ವಾಸ್ಥ್ಯ ಸಂಕಲ್ಪ ಕುರಿತು 150 ಕ್ಕೂ ಹೆಚ್ಚು ಉಪನ್ಯಾಸಗಳಲ್ಲಿ ಯೋಗ ಮತ್ತು ಜೀವನ, ಯೋಗ ಮತ್ತು ಶಿಕ್ಷಣಗಳ ಕುರಿತು ವಸತಿ ಶಾಲೆಗಳಿಗೆ, ಆಶಾ ಕಾರ್ಯಕರ್ತರಿಗೆ, ವಿವಿಧ ರೋಗಕ್ಕೆ ಪೀಡತರಾದ ರೋಗಿಗಳಿಗೆ, ವಿವಿಧ ಸಂಘ ಸಂಸ್ಥೆಗಳ ಯುವಕ ಮಂಡಳಿಗಳಿಗೆ ಮತ್ತು ಎಲ್ಲಾ ಸ್ಥರಗಳ  ವಿದ್ಯಾರ್ಥಿಗಳಿಗೆ ಯೋಗದ ಕುರಿತು ತರಬೇತಿಯನ್ನು ನೀಡುತ್ತಾ ರಾಷ್ಟ್ರ ಪ್ರೇಮ ಬೆಳೆಸುವಲ್ಲಿ ಮುಂಚೂಣಿಯಲ್ಲಿರುವ ಶ್ರೀಯುತರಿಗೆ ದಿವ್ಯ ಸಾನಿಧ್ಯ ವಹಿಸಿದ ಗಿರಿರಾಜ ಸೂರ್ಯ ಸಿಂಹಾಸನಾದೀಶ್ವರ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು,ಪಾವನ ಸಾನಿಧ್ಯ ವಹಿಸಿದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ದ ಸಂಸ್ಥಾನ ಮಠ ನಿಡಸೋಸಿ,  ಪ್ರಭು ಮಹಾಸ್ವಾಮಿಗಳು ವಿರಕ್ತಿಮಠ ಚಿಮ್ಮಡ, ಪದ್ಮಶ್ರೀ ಪುರಸ್ಕೃತರು, ನಿಕಟ ಪೂರ್ವ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಡಾ.  ಮಂಜಮ್ಮ ಜೋಗತಿ ಹಾಗೂ ಕಾರ್ಯಕ್ರಮದ ಗಣ ಅಧ್ಯಕ್ಷತೆ ವಹಿಸಿದ ಡಾ ರಮೇಶಕುಮಾರ  ಶಾಸ್ತ್ರಿಗಳು ಪುಣ್ಯಕೋಟಿ ಸಿದ್ದಾಶ್ರಮ ಶ್ರೀಗಳ ನೇತೃತ್ವದಲ್ಲಿ  ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಿದರು. 

ಕಲ್ಯಾಣ ಹೊರಗಿನಮಠ ಶ್ರೀಗಳಾದ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ರನ್ನ ಬೆಳಗಲಿಯ ಶಿವಯೋಗಾಶ್ರಮದ  ಸಿದ್ದರಾಮ ಶಿವಯೋಗಿಗಳು, ದಿಗ್ಗೆವಾಡಿ ಯ ಪೂಜ್ಯರಾದ ಡಾ. ಕಾಡೆಯ ಶಾಸ್ತ್ರಿಗಳು ಹಿರೇಮಠ ಮತ್ತು ರಾಜಕೀಯ ಮುಖಂಡರಾದಬಾಗಲಕೋಟೆ ಜಿಲ್ಲೆಯ ಲೋಕಸಭಾ ಸಂಸದರಾದ ಪಿ. ಸಿ.ಗದ್ದಿಗೌಡರ, ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ, ಜಮಖಂಡಿ ಮತಕ್ಷೇತ್ರದ ಶಾಸಕರಾದ ಜಗದೀಶ ಗುಡಗುಂಟಿ, ರಾಯಬಾಗ ಮತಕ್ಷೇತ್ರದ ಶಾಸಕರಾದ ದುರ್ಯೋಧನ ಐಹೊಳೆ, ಅರುಣ ಕಾರಜೋಳ ಇನ್ನು ಹಲವಾರು ಗಣ್ಯರು ಭಾಗಿಯಾಗಿದ್ದರು.