ಸಿಡಿಲು ಬಡಿದು ಮೂರು ಜಾನುವಾರುಗಳ ಸಾವು

ಸಂಬರಗಿ 15: ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದಾಗಿ ಗಡಿ ಭಾಗದ ಜಕಾರಹಟ್ಟಿ ಹಾಗೂ ಮದಬಾವಿ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. 

 ಸುಮಾರು ಮೂರು ಲಕ್ಷ ನಷ್ಟವಾಗಿದೆಸೋಮವಾರ ಸಂಜೆಯಿಂದ ಮಳೆ ಆರಂಭಗೊಂಡಿದ್ದು, ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಶಿವಾಜಿ ನಾಮದೇವ ಇಂಗಳೆ ಹಾಗೂ ತಾಣಜಿ ನಾಮದೇವ ಇಂಗಳೇ ಜಕಾರಹಟ್ಟಿ ಹಾಗೂ ಮಾದಭಾವಿಯ ತಮನ್ನಾಮೆಂಡಿಗೇರಿ ಎಂಬುವವರು ತಮ್ಮ ಮನೆಯ ಮುಂದೆ ಜಾನುವಾರಗಳನ್ನು  ಕಟ್ಟಿದ್ದು, ಒಂದು ಹಸು, ಎರಡು ಎಮ್ಮೆ ಸಿಡಿಲಿಗೆ ಬಲಿಯಾಗಿವೆ. ಜಾನುವಾರುಗಳು ಹೊರಗೆ ಇದ್ದುದರಿಂದಮಳೆಯ ಅಬ್ಬರ ಹೆಚ್ಚಾಗಿ ತಮ್ಮ ರಕ್ಷಣೆಗಾಗಿ ಕಿತ್ತುಕೊಂಡು ಮನೆಗೆ ನುಗ್ಗಿವೆ. ಈ ಕುರಿತು ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿ ಮಲ್ಲಪ್ಪ ಕೊಟ್ಟಶೆಟ್ಟಿ ಇವರಿಗೆ ನೀಡಿದಂತಘಟನಾ ಸ್ಥಳದಲ್ಲಿ ತಾಲೂಕಾ ಪಶು ಅಧಿಕಾರಿ ಡಾ.ಎಸ್‌.ಜಿ.ಕಾಂಬಳೆ ತಂಡ ಭೇಟಿ ನೀಡಿ ಪರೀಶೀಲನೆ ನಡೆಸಿ ಪಶುವಿನ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. 

ಕಂದಾಯ ನೀರೀಕ್ಷಕರು ವಿನೋದ್‌ಕದಂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಶಾಸಕ ರಾಜು ಕಾಗೆ ಅವರನ್ನು ಸಂಪರ್ಕಿಸಿ ಸರ್ಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.