ವಿಕಲ ಚೇತನರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು: ಪ್ರಕಾಶ ಕೋಳಿವಾಡ

ರಾಣೇಬೆನ್ನೂರು 15: ವಿಶೇಷ ಚೇತನರು ಸರಕಾರಿ ಹಾಗೂ ಇತರೆ ಯೋಜನೆಗಳ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು  

ಅವರು ಇಲ್ಲಿನ ತಾಲೂಕ ಪಂಚಾಯಿತಿ ಸಭಾ ಭವನದಲ್ಲಿ ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆ, ರಾಣೆಬೆನ್ನೂರು ತಾಲೂಕ ಪಂಚಾಯತ್  ಸಂಯುಕ್ತವಾಗಿ ಆಯೋಜಿಸಿದ್ದ  ಯಂತ್ರ ಚಾಲಿತ ಹಾಗೂ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.  

ಗ್ರಾಮೀಣ ಹಾಗೂ ನಗರ ವಿಶೇಷ ಚೇತನರು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರ ಬಳಿ ಸಮಗ್ರ ಮಾಹಿತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು  ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ  ಆಶು ನದಾಫ್ ಅವರು ಮಾತನಾಡಿ,ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಬಳಿ ವಿದ್ಯಾರ್ಥಿಗಳು ಮರು ಶುಲ್ಕ ಪಾವತಿ, ವಿದ್ಯಾರ್ಥಿವೇತನ ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.   

ವಿಧಾನಸಭಾ  ಕ್ಷೇತ್ರದ ವ್ಯಾಪ್ತಿಯ  35 ವಿಶೇಷ ಚೇತನರಿಗೆ  ತ್ರಿಚಕ್ರ ವಾಹನಗಳನ್ನು ವಿಶೇಷ ಚೇತನರಿಗೆ ಸಾಧನ ಪರಿಕರಗಳನ್ನು ವಿತರಿಸಲಾಯಿತು.  

ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಸಿ ತಾ.ಪಂ ಪುನರ್ ವಸತಿ ಕಾರ್ಯಕರ್ತ  ತಿಪ್ಪೇಶ್ ಗಾಡಿ ರಾಜ್ಯ ಸಮಿತಿ ನಿರ್ದೇಶಕ ಗಣೇಶ್ ನಂದಿಗಾವಿ ಗ್ರಾಮ ಪಂಚಾಯಿತಿಗಳ ಪುನರ್ ವಸತಿ ಕಾರ್ಯಕರ್ತರು ಪ್ರಭಾವತಿ ಟಿ ನೀಲಕಂಠಪ್ಪ ಕುಸುಗೂರ,ಮಹೇಶ್ ಕೆಂಚಗಟ್ಟಿ  ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಹಾಗೂ ಇತರೆ ಫಲಾನುಭವಿಗಳು  ಉಪಸ್ಥಿರಿದ್ದರು.