ಕಾಗವಾಡ 02: ಸಾವಿರಾರು ವರ್ಷಗಳಿಂದ ಭಾರತ ದೇಶದಲ್ಲಿ ಋಷಿ ಮುನಿಗಳು ಯೋಗಾಭ್ಯಾಸ ಮಾಡುತ್ತಿದ್ದರು. ಈ ಪರಂಪರೆ ಈಗಲೂ ಭಾರತ ದೇಶದಲ್ಲಿ ಮಾತ್ರ ಮುಂದುವರೆದಿದೆ. ನಿರಂತರವಾಗಿ ಯೋಗ ಮಾಡುತ್ತಾ. ಆಚಾರ, ವಿಚಾರ, ಶುದ್ಧ ಆಹಾರ ಸೇವಿಸಿದರೆ, ಕಾಯಿಲೆಗಳು ನಿಮ್ಮ ಸುತ್ತ ಬರಲಾರವು ಎಂದು ಖ್ಯಾತ ಹಿರಿಯ ವೈದ್ಯರು ಉಗಾರ ಋಗ್ಣ ಸೇವಾ ಮಂಡಳ ಆಧ್ಯಕ್ಷ ಡಾ. ಪಿ.ವಿ.ಜೋಗ್ ಉಗಾರದಲ್ಲಿ ಹೇಳಿದರು.
ಭಾನುವಾರದಂದು ಉಗಾರ ಸಕ್ಕರೆ ಕಾಖರ್ಾನೆ ಮತ್ತು ಮಲ್ಲಿಕಾಜರ್ುನ ಗುರುದೇವ ಆಶ್ರಮದ ಸಂಯುಕ್ತಾಶ್ರಯದಲ್ಲಿ ಉಗಾರದ ವಿಹಾರ ಸಭಾಂಗಣದಲ್ಲಿ ಜರುಗಿದ 10 ದಿನಗಳ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಗಗುರುಗಳಾದ ಅಣ್ಣಾಸಾಹೇಬ ಪಾಟೀಲ ದಂಪತಿಗಳನ್ನು ಸನ್ಮಾನಿಸಿ, ಡಾ. ಪಿ.ವಿ.ಜೋಗ್ ಮಾತನಾಡಿದರು.
ಯೋಗಗುರು ಅಣ್ಣಾಸಾಹೇಬ ಪಾಟೀಲ ಇವರು 15 ವರ್ಷಗಳಿಂದ ಯೋಗಗುರುಗಳಾದ ರಾಮದೇವ ಬಾಬಾ ಇವರ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ಪ್ರಶಿಕ್ಷಣ ಪಡೆದಿದ್ದಾರೆ. ಯೋಗ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಾ ಅನೇಕ ಅಸಾಧ್ಯ ರೋಗಗಳನ್ನು ಗುಣಮುಖಮಾಡಿದ್ದರು. ಈ ಮುಂದೆ ಇಲ್ಲಿಯ ಸಂಯೋಜಕರು ನಿರಂತರ ಶಿಬಿರ ಮುಂದುವರಿಸಬೇಕೆಂದು ಯೋಗಗುರು ಹೇಳಿದರು.
ಶಿಬಿರದಲ್ಲಿ 150 ಶಿಬಿರಾಥರ್ಿಗಳು 10 ದಿನ ಭಾಗವಹಿಸಿ, ಯೋಗ ಅಭ್ಯಾಸ ಮಾಡಿದ್ದರು. ಇವರಿಂದ ಯೋಗಗುರುಗಳ ದಂಪತಿಗಳಿಗೆ ಕಾಣಿಕೆ ನೀಡಿ ಸನ್ಮಾನಿಸಿದರು.
ಶಿಬಿರ ಯಶಸ್ವಿಗೊಳಿಸಲು ಉಗಾರ ಪುರಸಭೆ ಸದಸ್ಯರಾದ ಮಂಜುನಾಥ ತೇರದಾಳೆ, ಮದನ ದೇಶಿಂಗೆ, ಯೊಗೇಶ ಕುಂಬಾರ, ವಿಜಯ್ ಆಸೂದೆ, ಅನೀಲ್ ನಾವಲಗೇರ್, ಪ್ರದೀಪ್ ಚಿಂಚವಾಡೆ ಮುಂತಾದವರು ಶ್ರಮಿಸಿದರು.