ನೆರೆಹಾವಳಿ ಪರಿಸ್ಥಿತಿ ನಿಭಾಯಿಸಲು ಯಡಿಯೂರಪ್ಪರದ್ದು ಹೆಣಗಾಟ : ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ 10     ಅನೇಕ ಗೊಂದಲ, ರಾಜಕೀಯ ದೊಂಬರಾಟದ ನಡುವೆ ಸರ್ಕಾರ ರಚನೆ ಮಾಡಿರುವ ಬಿ ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಡಾ ಜಿ ಪರಮೇಶ್ವರ್ ಟೀಕಿಸಿದ್ದಾರೆ 

  ಸದಾಶಿವನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟದ ಸದಸ್ಯರಿಲ್ಲದ ಏಕವ್ಯಕ್ತಿ ಸಕರ್ಾರ ರಾಜ್ಯದಲ್ಲಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಒಬ್ಬರೇ ಕಳೆದ 20 ದಿನಗಳಿಂದ ಸರ್ಕಾರ ನಡೆಸುತ್ತಿದ್ದಾರೆ. ಸರ್ಕಾರ ರಚನೆ ಮಾಡುವುದರಲ್ಲಿ ಯಡಿಯೂರಪ್ಪ ತೋರಿಸಿದ್ದ ಪ್ರಯತ್ನವನ್ನು ಮಂತ್ರಿ ಮಂಡಲ ರಚನೆಯಲ್ಲಿ ತೋರಿಸುತ್ತಿಲ್ಲ ಏಕೆ. ಸಂಪುಟ ರಚನೆ ವಿಳಂಬ ಏಕೆ ಎಂದು ಅವರು ಪ್ರಶ್ನಿಸಿದರು. 

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು  ಸಾಕಷ್ಟು ಕಸರತ್ತು ನಡೆಸಿದ್ದ  ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಂಪುಟ ಭರ್ತಿಗೆ ಪ್ರಯತ್ನಿಸುತ್ತಿಲ್ಲದರ ಹಿಂದಿನ ಮರ್ಮವೇನು ಎಂದರು. 

ರಾಜ್ಯದಲ್ಲಿ ಪ್ರವಾಹದಿಂದಾಗಿ ತುರ್ತು  ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಹಾವಳಿಯಿಂದ 2.5 ಲಕ್ಷ ಮನೆ ತೊರೆದಿದ್ದು, 31 ಜನ ಮೃತಪಟ್ಟಿದ್ದಾರೆ. ಕೊಡಗು ಭಾಗದಲ್ಲಿನ ಜನರು ನಿರಾಶ್ರಿತರಾಗಿದ್ದಾರೆ. ಇಂತಹ ಗಂಭಿರ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಒಬ್ಬರಿಂದ ಮಾತ್ರ ಆಡಳಿತ ನಡೆಸಲು ಸಾಧ್ಯವಿಲ್ಲ. ಸಂಪುಟ ರಚನೆಯಾಗಿದ್ದರೆ ಜಿಲ್ಲಾ ಉಸ್ತುವಾರಿಗಳು, ಅಧಿಕಾರಿಗಳು ಇರುತ್ತಿದ್ದರು. ಆದರೀಗ ಸಚಿವರೇ ಇಲ್ಲದ ಸರ್ಕಾರದಿಂದ ಜನರ ರಕ್ಷಣೆ ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ ಎಂದು ಪರಮೇಶ್ವರ್ ಆರೋಪಿಸಿದರು. 

  ಯಡಿಯೂರಪ್ಪ ಅವರು ಇಳಿವಯಸಿನಲ್ಲಿ ನೆರೆಹಾವಳಿಯಿಂದ ಜನರನ್ನು ರಕ್ಷಿಸಲು ಪ್ರಯತ್ನ ಪಡುತ್ತಿದ್ದರಾದರೂ ಅವರಿಗೆ ಸಹಕಾರವಿಲ್ಲದೇ ನೆರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ನಿರಾಶ್ರಿತರ ನೆರವಿಗೆ ನಿಲ್ಲಲು ಅವರಿಂದ  ಸಾಧ್ಯವಾಗುತ್ತಿಲ್ಲ ಎಂದರು. 

ರಾಜ್ಯದಲ್ಲಿ ನೆರೆ ಪರಿಸ್ಥಿತಿ ವೀಕ್ಷಣೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಮಡಿಕೇರಿ ಪ್ರವಾಹದಿಂದ ನೆರೆ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡಲು ಸಾಧ್ಯವಾಗಿಲ್ಲ. ನೆರೆ ಸಂತ್ರಸ್ಥರಿಗೆ ಕೇಂದ್ರ ಹೆಚ್ಚಿನ ನೆರವು ನೀಡಬೇಕು. ತುರ್ತುಗಿ ಕೇಂದ್ರ ಸರ್ಕಾರ ನೆರೆ ಸಂತ್ರಸ್ಥರ ರಕ್ಷಣೆಗೆ ತಂಡವನ್ನು ಕಳುಹಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.  

  ಕನರ್ಾಟಕಕ್ಕೆ ನೆರೆ ಸಂತ್ರಸ್ಥರಿಗೆ ಪರಿಹಾರ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನಸುರಿಸುತ್ತಿದೆ. ಕೇರಳ, ಮಹಾರಾಷ್ಟ್ರ ಮಾದರಿಯಲ್ಲಿ ಕನರ್ಾಟಕಕ್ಕೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅವರು ಮನವಿ ಮಾಡಿದರು.  

  ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜಿನಾಮೆಗೆ ತೋರಿಸಿದಷ್ಟು ಉತ್ಸಾಹವನ್ನು ಯಡಿಯೂರಪ್ಪ ಸಂಪುಟ ಭರ್ತಿಗೆ ತೋರುತ್ತಿಲ್ಲ. ರಾಜ್ಯದಲ್ಲಿ ಸಚಿವರಿಲ್ಲದೇ ಜನರು ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡೂ ಸಹ ರಾಜ್ಯಪಾಲರು ಕಣ್ಣುಮುಚ್ಚಿ ಕುಳಿತುಕೊಂಡಿರುವುದು ಸರಿಯಲ್ಲ. ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಗಂಟೆಗೊಮ್ಮೆ ಪತ್ರ ಬರೆಯುತ್ತಿದ್ದ ವಜೂಭಾಯಿವಾಲಾ ಅವರು ಈಗ ಎಲ್ಲಿದ್ದಾರೆ ಎಂದು ಪರಮೇಶ್ವರ್ ಪ್ರಶ್ನಿಸಿದರು. 

  ನೋಡಲ್ ಅಧಿಕಾರಿಗಳ ಉಸ್ತುವಾರಿ  ಕಾರ್ಯದರ್ಶಿಗಳು  ಸ್ಥಳಕ್ಕೆ ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರ ನೆರೆಹಾವಳಿಗೆ ಏಕೆ ಹಣ ಕೊಡುತ್ತಿಲ್ಲ. ಇನ್ನೂ ಏಕೆ ಸಂಪುಟ ವಿಸ್ತರಣೆಯಾಗಿಲ್ಲ. ಸುಪ್ರಿಂಕೋರ್ಟ್ ತೀಪು ಬರುವವರೆಗೂ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎನ್ನುವುದೆಲ್ಲವನ್ನು ರಾಜ್ಯದ ಜನರ ಮುಂದೆ ಯಡಿಯೂರಪ್ಪ ಬಾಯಿಬಿಡಲಿ ಎಂದು ಅವರು ಒತ್ತಾಯಿಸಿದರು.  

  ಸರ್ಕಾರದ ಕೆಲಸಗಳ ಮೇಲೆ ವಿಪಕ್ಷ ಕಾಂಗ್ರೆಸ್ ಕಣ್ಣಿಟ್ಟಿದೆ. ಬಿಬಿಎಂಪಿ ಬಜೆಟ್ ಗೆ 11000 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಕೌನ್ಸಿಲ್ ಅನುಮೋದನೆ ಮಾಡಿರುವುದು ಸರಿಯಾದ ಕ್ರಮವಲ್ಲ. ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ  ಭಾರೀ ಹಾನಿಯಾಗಿದೆ. 187  ಗ್ರಾಮಗಳು ಜಲಾವೃತಗೊಂಡಿದ್ದು, 3037 ಮನೆಗಳು ಕುಸಿದಿವೆ. 37 ಕ್ಕೂ ಹೆಚ್ಚು   ಜಾನುವಾರುಗಳು ಹಾಗೂ ಇಬ್ಬರು ಪ್ರವಾಹಕ್ಕೆ ಬಲಿಯಾಗಿದ್ದಾರೆ. 55,569 ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಾಶವಾಗಿದೆ.239  ಕಿಲೋಮೀಟರ್ ರಸ್ತೆ ಹಾಗೂ 54  ಸೇತುವೆಗಳು ಹಾಳಾಗಿವೆ ಎಂದರು.  

ನೆರೆಹಾವಳಿ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಸರ್ವಪಕ್ಷಗಳ ಸಭೆ ಕರೆಯಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಮುಂಬೈಗೆ ಶಾಸಕರನ್ನು ಕಳುಹಿಸಲು ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವ ಬಿಜೆಪಿ ನಾಯಕರು,  ಪ್ರವಾಹ ಪೀಡಿತರ ರಕ್ಷಣೆ ಮಾಡಲು ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿಲ್ಲ. ಇನ್ನೂ ಕೆಲವೆಡೆ  ಹಾಳಾಗಿರುವ ಹೆಲಿಕ್ಯಾಪ್ಟರ್ ಕಳುಹಿಸಿದ್ದಾರೆ. ಪ್ರವಾಹ ಪೀಡಿತರ ರಕ್ಷಣೆ ವಿಚಾರದಲ್ಲಿ ಅವರು ನಿರ್ಲಕ್ಷ್ಯ ವಹಿಸಿದ್ದಾದರೂ ಏಕೆ? ಎಲ್ಲವನ್ನು ಅವರು ಸೂಕ್ಷ್ಮವಾಗಿ ಗಮನಿಸಬೇಕಿತ್ತು ಎಂದರು. 

ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರವಾಹ ಪೀಡಿತ ಜನರ ಆರೋಗ್ಯಕ್ಕಾಗಿ ವೈದ್ಯಕೀಯ ತಂಡ ಕಳುಹಿಸಲಾಗುವುದು.  ತಮ್ಮ ಒಂದು ತಿಂಗಳ ಸಂಬಳವನ್ನು ನೀಡುವುದರ ಜೊತೆ ಸಿದ್ದಾರ್ಥ  ಸಂಸ್ಥೆಯಿಂದ 10 ಲಕ್ಷ ರೂ.ಗಳನ್ನು ನೆರೆ ಸಂತ್ರಸ್ಥರ ಮುಖ್ಯಮಂತ್ರಿ ಪರಿಹಾರ ನಿಧಿಗೆ  ಕೊಡಲು ತೀಮರ್ಾನಿಸಿರುವುದಾಗಿ ಪರಮೇಶ್ವರ್ ಹೇಳಿದರು.