ಯಮಕನಮರಡಿ 14: ಪ್ರತಿ ವರ್ಷದ ಪದ್ಧತಿಯಂತೆ ಹತ್ತರಗಿ ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ಶ್ರೀಶೈಲ ಕಂಬಿಮಲ್ಲಯ್ಯಾನ ಉತ್ಸವಪೂಜೆ ಸಮಾರಂಭ ಜರುಗಿ ಸುಮಾರು ಕುಟುಂಬಗಳಲ್ಲಿ ಮಹಾಪ್ರಸಾದ ಇತ್ಯಾದಿ ಕಾರ್ಯಕ್ರಮಗಳು ಆಯೋಜಿಸಿ ದಿ. 13 ರಂದು ಕಂಬಿ ಮಲ್ಲಯ್ಯನ್ನು ಭಕ್ತಿ ಪೂರ್ವಕ ಪೂಜೆ ಸಲ್ಲಿಸಿ ಗ್ರಾಮದ ಸಕಲ ಭಕ್ತಾದಿಗಳು ಶ್ರೀಶೈಲಕ್ಕೆ ಬಿಳ್ಕೋಡುವ ಸಮಾರಂಭ ಯಶಸ್ವಿ ಯಾಗಿ ಜರುಗಿತು.
ಕೆಲ ಜನರು ಪಾದಯಾತ್ರೇ ಮೂಲಕ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳುತ್ತಾರೆ. ಶ್ರೀ ಶೈಲಕ್ಕೆ ಹೊಗುವ ಸಂಪ್ರದಾಯ ಇಂದಿಗೂ ಗ್ರಾಮದಲ್ಲಿ ರೂಢಿಯಾಗಿರುತ್ತಾರೆ.