(ಮಾರ್ಚ 15 ರ ವಿಶ್ವ ಗ್ರಾಹಕ ಹಕ್ಕುಗಳ ದಿನದ ಪ್ರಯುಕ್ತ ಈ ಲೇಖನ)
ಉದ್ಯಮಿ ವಾರೆನ್ ಬಫೆಟ್ ಅವರ ಪ್ರಕಾರ, ಈಠ ಠ ಥಿಠಡಿ ಛಿಣಠಜಡಿ ಚಿಟಿಜ ಟಜಚಿಜ ಥಿಠಡಿ ಠಿಜಠಟಜ ಛಿ ಣಠರ ಣಜಡಿ ಟತ ಟಿ ಜಜಠಿಜಟಿಜ ಠ ಥಿಠಡಿ ಣಛಿಛಿ” ಎಂದು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಂದು ವ್ಯವಹಾರಿ ಸಂಸ್ಥೆಯು ಮುಖ್ಯವಾಗಿ ತನ್ನ ಗ್ರಾಹಕರನ್ನು ಕೇಂದ್ರೀಕರಿಸಿಕೊಂಡು ಅವರ ಅಗತ್ಯತೆ ಮತ್ತು ಅವಶಕ್ಯತೆಗಳನ್ನು ಗುರುತಿಸಿ, ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುವುದರ ಮೂಲಕ ಸಂತೃಪ್ತಿಗೊಳಿಸುವುದೇ ಆ ಸಂಸ್ಥೆಯ ಯಶಸ್ಸಿಗೊಂದು ದಾರೀದೀಪವಾಗಿದೆ. ಜಗತ್ತಿನಾದ್ಯಂತ ಎಲ್ಲ ಗ್ರಾಹಕರಲ್ಲಿ ತಾವು ಕೊಂಡುಕೊಳ್ಳಬಯಸುವ ವಸ್ತು-ಸರಕಿನ ಗುಣಮಟ್ಟ, ಬೆಲೆ ಮತ್ತು ಇನ್ನಿತರ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗೂ ತಮಗಿರುವ ಹಕ್ಕುಗಳು, ಅವಶ್ಯಕತೆಗಳು ಮತ್ತು ಒಂದು ವ್ಯಾಪಾರಿಗಳಿಂದ ಯಾವುದೇ ರೀತಿಯ ಶೋಷಣೆಗೆ ಒಳಪಟ್ಟರೆ ಅದಕ್ಕೆ ಸೂಕ್ತ ಆರ್ಥಿ ಪರಿಹಾರವನ್ನು ಪಡೆಯಲು ಗ್ರಾಹಕರ ಹಿತರಕ್ಷಣಾ ಕಾಯಿದೆ 1986 ರನ್ವಯ ಹಕ್ಕಿದೆ.
ಈ ದಿನದ ಆಚರಣೆಗೆ ಅಮೇರಿಕಾದ ಅಧ್ಯಕ್ಷರಾಗಿದ್ದ ಜಾನ್. ಎಫ್. ಕೆನಡಿ ಅವರು ಮಾರ್ಚ 15, 1962 ರಲ್ಲಿ ಅಧಿವೇಷನ ನಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಪುಷ್ಟಿ ನೀಡುವಂತೆ 1983 ರಲ್ಲಿ ಗ್ರಾಹಕರ ಆಂದೋಲನ ಪ್ರಾರಂಭಗೊಂಡಿತು. ಅಂದಿನಿಂದ ಪ್ರತಿವರ್ಷ ಮಾರ್ಚ 15 ರಂದು ಅಂತರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. “ ನಿಮ್ಮ ವಸ್ತುಗಳು, ನಿಮ್ಮ ಹಕ್ಕುಗಳು, ವಸ್ತುಗಳನ್ನು ಕೊಳ್ಳುವಾಗ ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿಯಬೇಕು-ಸುಸ್ಥಿರ ಗ್ರಾಹಕ” ಎಂಬುದು 2020 ವರ್ಷದ ಆಚರಣೆಯ ಪ್ರಮುಖ ವಿಷಯ ವಸ್ತು ಇದಾಗಿದೆ.
ಈ ನಿಟ್ಟಿನಲ್ಲಿ ಗ್ರಾಹಕರು ತಾವು ಖರೀದಿಸುವ ವಸ್ತು-ಸರಕು ಅಥವಾ ಪಡೆಯುವ ಸೇವೆಗೆ ಸಂಬಂಧಿಸಿದಂತೆ ಮತ್ತು ಹಕ್ಕು-ಬಾಧ್ಯತೆಗಳನ್ನು ಅರಿತು ಜಾಗರೂಕತನದಿಂದ ವ್ಯವಹರಿಸಲು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ. ಅದರೊಂದಿಗೆ ಜಾಗತಿಕ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಮಾರುಕಟ್ಟೆಯಲ್ಲಾಗುತ್ತಿರುವ ಶೋಷಣೆ, ವಂಚನೆ ಮತ್ತು ಅನ್ಯಾಯದಿಂದ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಳ್ಳಲು ಈ ಕಾಯಿದೆಯಡಿ ಅವಕಾಶವಿದೆ. ಪ್ರತಿವರ್ಷ ಮಾರ್ಚ 15 ರಂದು ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಲ್ಲಿ ಗ್ರಾಹಕರನ್ನು ಜಾಗೃತಗೊಳಿಸಲು ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗತಿಕವಾಗಿ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2021 ರ ವರ್ಷದ ಪ್ರಮುಖ ಘೋಷವಾಕ್ಯ ಅಥವಾ ವಿಷಯವೆಂದರೆ ಗ್ರಾಹಕರಿಗೆ ಸುಸ್ಥಿರವಾದ ಮತ್ತು ಅನುಕೂಲಕರವಾದ ಪರಿಸರವನ್ನು ನಿರ್ಮಿಸುವದೇ ಆಗಿದೆ.
ಇಂದಿನ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಗ್ರಾಹಕನೇ ಮಹಾಪ್ರಭು. ಉತ್ಪಾದಕರು ಮತ್ತು ಮಾರಾಟಗಾರರು ಗ್ರಾಹಕನ ವರ್ತನೆಯಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅ ಮೂಲಕ ಸರಕು-ಸೇವೆಗಳನ್ನು ಮಾರಾಟ ಮಾಡುವ ತಂತ್ರಗಾರಿಕೆಯಲ್ಲಿ ತೊಡಗಬೇಕು. ಇಂದಿನ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದಾಗಿ ನಮ್ಮ ದೇಶೀಯ ಗ್ರಾಹಕರ ಬಯಕೆ, ಬೇಕು-ಬೇಡಗಳು, ಆಸೆ-ಆಕಾಂಕ್ಷೆಗಳು, ಅಪೇಕ್ಷೆ-ಕೊಂಡುಕೊಳ್ಳುವಿಕೆ ಮತ್ತು ಬಣ್ಣ, ರಚನೆ, ವಿನ್ಯಾಸಗಳೆಲ್ಲವೂ ಕ್ಷಿಪ್ರವಾಗಿ ಬದಲಾವಣೆಯ ರೂಪವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ಮಾರುಕಟ್ಟೆಯ ಚಿತ್ರಣವೇ ಸಮಗ್ರವಾಗಿ ಬದಲಾಗುತ್ತಾ ಸಾಗುತ್ತಿದೆ.
ಆದ್ದರಿಂದ “ಜಾಗೋ ಗ್ರಾಹಕ ಜಾಗೋ” ಎಂಬ ಘೋಷವಾಕ್ಯದೊಂದಿಗೆ ಉತ್ತಾದಕರು ಮತ್ತು ವ್ಯಾಪಾರಸ್ಥರಿಂದ ಗ್ರಾಹಕರ ಶೋಷಣೆಯಾಗದಂತೆ ತಡೆಯಲು ಮತ್ತು ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಮಹೋನ್ನತ ಉದ್ಧೇಶದಿಂದ ಮಾರ್ಚ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದಲ್ಲಿ ಏಕಸ್ವಾಮ್ಯ ನಿಯಂತ್ರಣ ಮತ್ತು ವ್ಯಾಪಾರ ಕಾರ್ಯಾಚರಣೆಯ ಹೆಸರಿನಲ್ಲಿ ಉತ್ಪಾದಕರು ಮತ್ತು ವ್ಯಾಪಾರಿಗಳಿಂದ ಗ್ರಾಹಕರು ಶೋಷಣೆಯಾಗದಂತೆ ನಿಯಂತ್ರಿಸಲು ಭಾರತದಲ್ಲಿ 1986 ರಲ್ಲಿ ಗಾಹಕರ ಹಿತರಕ್ಷಣಾ ಕಾಯಿದೆಯನ್ನು ಜಾರಿಗೆ ತರಲಾಯಿತು. ಪ್ರತಿವರ್ಷ ಮಾರ್ಚ 15 ರಂದು ರಾಷ್ಟ್ರದಾದ್ಯಂತ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವದರ ಜೊತೆಗೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಶೋಷಣೆ ಮತ್ತು ವಂಚನೆಯನ್ನು ತಡೆಯಲು ಹಾಗೂ ಗ್ರಾಹಕರಿಗೆ ಸಾಮಾಜಿಕ ನ್ಯಾಯ ದೊರೆಕಿಸಿಕೊಡಲು ವಿಶೇಷವಾಗಿ ಈ ಕಾಯಿದೆಯ ಪ್ರಮುಖ ಧ್ಯೇಯೋದ್ಧೇಶವಾಗಿದೆ. ಈ ದಿನದ ಪ್ರಯುಕ್ತ ದೇಶದೆಲ್ಲೆಡೆ ಸಾಮಾನ್ಯ ಜನರು, ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಸಮಾಜದಲ್ಲಿ ಗ್ರಾಹಕರ ಹಕ್ಕುಗಳ ಬಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಜನಜಾಗೃತಿ ಜಾಥಾ, ಆಂದೋಲನ, ಉಪನ್ಯಾಸ, ವಿಚಾರಗೋಷ್ಠಿ, ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.
ಇಂದಿನ ಮಾರುಕಟ್ಟೆಯಲ್ಲಿ ಉತ್ಪಾದನಾ ಸಂಸ್ಥೆಗಳು ಅಥವಾ ವ್ಯಾಪಾರಸ್ಥರು ಕೇವಲ ಲಾಭ ಸಂಪಾದನೆಗೆ ಪ್ರಾಶಸ್ತ್ಯ ನೀಡದೇ ಬಹು ಮುಖ್ಯವಾಗಿ ಗ್ರಾಹಕ ಕೊಂಡುಕೊಳ್ಳಬಯಸುವ ವಸ್ತುಗಳನ್ನು ಉತ್ತಮ ಗುಣಮಟ್ಟ, ಸರಿಯಾದ ಬೆಲೆ, ತಾಳಿಕೆ-ಬಾಳಿಕೆ, ಮಾರಾಟ ನಂತರದ ಸೇವೆಯನ್ನು ಜೊತೆಗೆ ಗ್ರಾಹಕ ಸಂತೃಪ್ತಿ-ಸಂತುಷ್ಟಿಗೊಳಿಸುವ ನಿಟ್ಟಿನಲ್ಲಿ ವ್ಯವಹಾರವನ್ನು ಕೈಗೊಳ್ಳಬೇಕು. ಅಂದಾಗ ಮಾತ್ರ ಆ ಸಂಸ್ಥೆಗಳು ಉತ್ಪಾದಿಸುವ ಮತ್ತು ಮಾರಾಟ ಮಾಡುವ ಸರಕು-ಸೇವೆಗಳ ಮೇಲೆ ಗ್ರಾಹಕ ವಿಶ್ವಾಸ-ನಂಬಿಕೆ, ವಿಧೇಯತೆ ಮತ್ತು ಬ್ರ್ಯಾಂಡ್ ಇಮೇಜ್ ಮೂಡಲು ಸಾಧ್ಯವಾಗುತ್ತದೆ.
ಗ್ರಾಹಕ ಹಿತರಕ್ಷಣಾ ಕಾಯಿದೆ 1986 ರ ಪ್ರಕಾರ ಪ್ರತಿಯೊಬ್ಬ ಗ್ರಾಹಕರು ಖರೀದಿಸುವ ವಸ್ತವಿನ ಗುಣಮಟ್ಟ, ಬೆಲೆ, ನೀಡುವ ಸೇವೆಗಳಲಿ ಯಾವುದೇ ರೀತಿಯ ಶೋಷಣೆಯಾಗಬಾರದೆಂಬ ಮಹತ್ವಾಕಾಂಕ್ಷೆಯೊಂದಿಗೆ ಗ್ರಾಹಕರ ಹಕ್ಕು-ಬಾಧ್ಯತೆ, ಶೋಷಣೆಗೆ ಒಳಪಟ್ಟಂತಹ ಸಂದರ್ಭದಲ್ಲಿ ತನಗಾದ ಅನ್ಯಾಯದಿಂದ ಯೋಗ್ಯ ಪರಿಹಾರ ಮತ್ತು ನ್ಯಾಯ ದೊರೆಕಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಹಕರು ಮೋಸ ಹೋದಾಗ ಅಥವಾ ಶೋಷಣೆಯಾದಾಗ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗ್ರಾಹಕ ಹಿತರಕ್ಷಣಾ ಮಂಡಳಿಗಳಿಗೆ ಹೇಗೆ ದೂರು ಸಲ್ಲಿಸುವದು, ಅವುಗಳ ಕಾರ್ಯವಿಧಾನ ಮತ್ತು ಅನುಸರಿಸಬೇಕಾದ ನೀತಿ-ನಿಯಮಾವಳಿಗಳು ಮತ್ತು ಒದಗಿಸಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಸಮಗ್ರವಾಗಿ ವಿವರಿಸಲಾಗಿದೆ.
ಗ್ರಾಹಕರು ವ್ಯಾಪಾರಿಗಳಿಂದ ಶೋಷಣೆಗೆ ಒಳಗಾಗದಂತೆ ತಡೆಯಲು ಮತ್ತು ಪರಿಣಾಅಮಕಾರಿಯಾದ ಸುರಕ್ಷತೆಯನ್ನು ಒದಗಿಸಲು ಗ್ರಾಹಕರ ಹಿತರಕ್ಷಣಾ ಕಾಯಿದೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಕಾಯಿದೆಯ ಮೂಲಕ ಇಂದಿನ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಗ್ರಾಹಕರೇ ಮಹಾಪ್ರಭುವಾಗಿರುವದರಿಂದ ಆತನ ಅಗತ್ಯತೆ, ಅವಶ್ಯಕತೆ, ಬೇಕು-ಬೇಡ, ಅಪೇಕ್ಷೆ-ಆಕಾಂಕ್ಷೆಗೆ ತಕ್ಕಂತೆ ವಸ್ತುಗಳನ್ನು ಮಾರಾಟಮಾಡಲು ಮತ್ತು ಉತ್ಪಾದಿಸುವ ಕಾರ್ಯವನ್ನು ಕೈಕೊಳ್ಳಬೇಕಾಗಿದೆ. ಈ ಕಾಯಿದೆಯಲ್ಲಿರುವ ಗ್ರಾಹಕರ ಹಕ್ಕುಗಳನ್ನು ಸಹ ಪರಿಚ್ಛೇದ 14 ರಿಂದ 19 ರವರೆಗೆ ನಮ್ಮ ಸಂವಿಧಾನದಲ್ಲಿಯೂ ನಮೂದಿಸಲಾಗಿದೆ. ಈ ಹಕ್ಕುಗಳಲ್ಲಿ ಸುರಕ್ಷತಾ ಹಕ್ಕು, ಮಾಹಿತಿ ಪಡೆಯುವ ಹಕ್ಕು, ವಸ್ತುವಿನ ಆಯ್ಕೆ ಹಕ್ಕು, ವಸ್ತುವಿನ ಬಗೆಗೆ ಕೇಳುವ ಹಕ್ಕು ಹೀಗೆ ಒಟ್ಟು ಏಳು ಹಕ್ಕುಗಳನ್ನು ನೀಡಲಾಗಿದೆ.
ಕೊನೆಯ ನುಡಿ: ಖ್ಯಾತ್ ಮಾರುಕಟ್ಟೆ ನಿರ್ವಹಣೆ ಸಿದ್ಧಾಂತದ ಪಿತಾಮಹ ಎಂದೇ ಹೆಸರುವಾಸಿಯಾಗಿದ್ದ ಫಿಲಿಪ್ ಕೋಟ್ಲರ್ ಅವರ ಅಭಿಪ್ರಾಯದಂತೆ, ಯಾವ ಮಾರಾಟ ಸಂಸ್ಥೆಗಳು ತಾವು ಉತ್ಪಾದಿಸುವ ವಸ್ತುಗಳ ಬಗ್ಗೆ ಗ್ರಾಹಕರಲ್ಲಿ ವಿವಿಧ ಜಾಹೀರಾತು ಮಾಧ್ಯಮಗಳಿಂದ ಅರಿವು ಮೂಡಿಸುವದರ ಮೂಲಕ ಅ ಗ್ರಾಹಕರ ಚಿತ್ತವನ್ನು ವಸ್ತುವಿನೆಡೆ ಆಕರ್ಷಿಸಿ, ಅವರು ಮಾರುಕಟ್ಟೆಯ ಮಿಶ್ರಣಗಳ ತಂತ್ರಗಾರಿಕೆಯೊಂದಿಗೆ ಕೊಂಡುಕೊಳ್ಳುವಂತೆ ಪ್ರೇರೇಪಣೆ ಮಾಡುವುದು ಮತ್ತು ಆ ಮೂಲಕ ಗ್ರಾಹಕರನ್ನು ಸಂತೃಪ್ತಿಗೊಳಿಸುತ್ತವೆಯೋ ಅಂತಹ ಸಂಸ್ಥೆಗಳು ಮಾತ್ರ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತವೆ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತವೆ ಎಂದು ಹೇಳಿದ್ದಾರೆ.
ಆದ್ದರಿಂದ ಪ್ರತಿಯೊಂದು ವ್ಯಾಪಾರಿ-ವ್ಯವಹಾರಿ ಸಂಸ್ಥೆಯು ಕೇವಲ ಲಾಭ ಸಂಪಾದನೆ ಅಥವಾ ವಾಣಿಜ್ಯದ ದೃಷ್ಟಿಯಿಂದ ಗ್ರಾಹಕರಿಗೆ ಸರಕು-ಸೇವೆಗಳನ್ನು ಮಾರಾಟ ಮಾಡದೇ ಗ್ರಾಹಕನ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅವನ ಬಯಕೆ-ಅಪೇಕ್ಷೆ, ಆಶೆ-ಆಕಾಂಕ್ಷೆ, ಕೊಂಡುಕೊಳ್ಳುವ ಮನೋಭಿಲಾಷೆ, ಆದಾಯದ ಮೂಲ, ಕೊಳ್ಳುವ ಶಕ್ತಿ, ಇತರ ಆರ್ಥಿಕ -ಸಾಮಾಜಿಕ ಮತ್ತು ಗ್ರಾಹಕನ ವರ್ತನೆಯಲ್ಲಾಗುವ ಬದಲಾವಣೆಗಳಿಗೆ ತಕ್ಕಂತೆ ಮಾರಾಟ ಮಾಡುವದರ ಮೂಲಕ ಗ್ರಾಹಕನನ್ನು ಸಂತೃಪ್ತಿಪಡಿಸುವದೇ ಆಗಿರಬೇಕು. ಅಂದಾಗ ಆಂತಹ ವ್ಯಾಪಾರಿಗಳು ಮತ್ತು ಉತ್ಪಾದನಾ ಸಂಸ್ಥೆಗಳು ಸ್ಪರ್ಧಾತ್ಮಕ ಪೈಪೋಟಿಯುತವಾಗಿ ಇಂದಿನ ಮಾಕುಕಟ್ಟೆಯ ಪರಿಸರದಲ್ಲಿ ಆ ಗ್ರಾಹಕರಿಂದ ನಿರಂತರ ಬೇಡಿಕೆಯನ್ನು ಪಡೆದು ಮಾರುಕಟ್ಟೆಯ ಪಾಲು ಹೆಚ್ಚಿಸಿಕೊಂಡು ಯಶಸ್ವಿ ಮಾರಾಟ ಸಂಸ್ಥೆಯಾಗಲು ಸಾಧ್ಯ. ಅದಕ್ಕಾಗಿ ಗ್ರಾಹಕನೇ ದೇವರು ಎಂದು ನಂಬಿ ತಮ್ಮ ಮಳಿಗೆಗೆ ವಸ್ತುವನ್ನು ಖರೀದಿಸಲು ಬಂದ ಗ್ರಾಹಕನನ್ನು ಕಡೆಗಣಿಸದೇ ಅವರ ಆಶೋತ್ತಗಳಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ವಸ್ತುವನ್ನು ಸರಿಯಾದ ಬೆಲೆಗೆ ಮಾರಾಟ ಮಾಡುವದರ ಜತೆಗೆ ಸಮರ್ಕ ಸೇವೆಗಳನ್ನು ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಈ ರಾಷ್ಟ್ರೀಯ ಗ್ರಾಹಕ ಹಿತರಕ್ಷಣಾ ಕಾಯಿದೆಯ ಧ್ಯೇಯೋದ್ಧೇಶ ಮತ್ತು ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂಬುದೊಂದು ನನ್ನ ಅಂಬೋಣ.
ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)