ಆಶ್ರಯ ಮನೆ ಆದೇಶ ಇಟ್ಟುಕೊಂಡು ವ್ಯಾಪಾರಸ್ಥ ವರ್ಗಕ್ಕೆ ಭೂಮಿ ಕೊಟ್ಟ ನಗರಸಭೆ

*When will the High Court order be implemented?

*ಹೈಕೋರ್ಟ್‌ ಆದೇಶ ಪಾಲನೆ ಯಾವಾಗ?

*ನೋಟೀಸ್ ನೀಡಿ ಮೌನಕ್ಕೆ ಜಾರಿದ ದಾಂಡೇಲಿ ನಗರಸಭೆ  

ಕಾರವಾರ 14: ದಾಂಡೇಲಿ ನಗರಸಭೆ ವ್ಯಾಪ್ತಿಯ 200 ಎಕರೆ ಪ್ರದೇಶದ ಜೆ.ಎನ್ ರಸ್ತೆಯ ಪ್ರಮುಖ ವಾಣಿಜ್ಯ ನಿವೇಶನಗಳನ್ನು 99 ವರ್ಷಗಳ ಅವಧಿಗೆ 15x20 ಜಾಗೆಯನ್ನು ನೀಡಿದ್ದು, ಅದರಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡವರಿಗೆ 30 ಸಾವಿರ ರೂಪಾಯಿಗೆ ಲೀಸ್ ರದ್ದು ಪಡಿಸಿ , ಮಾಲೀಕತ್ವ ನೀಡಲಾಗಿದೆ.  

ಈ ಮಾಲೀಕರು ತಮಗೆ ನೀಡಿದ ಅಳತೆಯನ್ನು ಮೀರಿ ಸಾವಿರಾರು ಚದರಡಿ ಜಾಗೆಯನ್ನು ಅತಿಕ್ರಮಿಸಿ ಕಟ್ಟಡ ಕಟ್ಟಿದ್ದಾರೆ. ಆ ಜಾಗೆಗೆ ಆಶ್ರಯ ಯೋಜನೆಯಲ್ಲಿ ಪಟ್ಟಾ ಪಡೆದಿದ್ದಾರೆ. ಹಿಂದಿನ ಪೌರಾಯುಕ್ತ ಆರ್‌.ವಿ ಜತ್ತಣ್ಣ ಅವರು ಮಾರಾಟ ಪತ್ರಕ್ಕೆ ಸಹಿ ಮಾಡಿಕೊಟ್ಟಿದ್ದಾರೆ. ಇದನ್ನು ಆಧರಿಸಿ , ಹಳಿಯಾಳ ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ಭೂಮಿ ನೊಂದಣಿ ಮಾಡಿಸಿರುತ್ತಾರೆ.ಕಾನೂನು ಬಾಹಿರ ಕೃತ್ಯ ಮಾಡಿರುವ ಕುರಿತು ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಜೆ.ಎನ್ ರಸ್ತೆಯ 1 ರಿಂದ 31 ವಾಣಿಜ್ಯ ನಿವೇಶನಗಳ ಮಾಲೀಕರಲ್ಲಿ, 17 ಜನರು ಹೈ ಕೋರ್ಟನ ಧಾರವಾಡ ಪೀಠಕ್ಕೆ ಒಂದೇ ಉದ್ದೇಶದ ಮೇಲೆ, ಪ್ರತಿಯೊಬ್ಬರು ಪ್ರತ್ಯೇಕವಾಗಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ರಿಟ್ ಅರ್ಜಿಗಳಲ್ಲಿ ಎಲ್ಲರದು ಒಂದೇ ಬೇಡಿಕೆಯಾಗಿರುವದರಿಂದ, ಹೈ ಕೋರ್ಟ ಎಲ್ಲವನ್ನೂ ಒಟ್ಟು ಗೂಡಿಸಿ ವಿಚಾರಣೆ ನಡೆಸಿದ್ದು ತೀರ​‍್ು ಪ್ರತಿಕೂಲವಾಗಿ ಬಂದಿದೆ. ಇದರಿಂದ ವಾಣಿಜ್ಯ ನಿವೇಶನಗಳ ಮಾಲೀಕರು ಸ್ವಯಂಕೃತವಾಗಿ ಮಾಡಿದ ಕೆಲಸದಿಂದ ಕಾನೂನಿನ ಕುಣಿಕೆಯಲ್ಲಿ ಸಿಲುಕಿದ್ದಾರೆ.ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಪುರಸಭಾ ಕಾಯ್ದೆಯನ್ವಯ ಅತಿಕ್ರಮಿಸಿ ಕಟ್ಟಿದ ಕಟ್ಟಡಗಳನ್ನು ತೆರವು ಮಾಡಿ, ನಗರಸಭೆಗೆ ಮೊದಲು ಹಸ್ತಾಂತರಿಸಬೇಕಿದೆ. 

ನಗರಸಭೆಯಿಂದ ಅತಿಕ್ರಮಿಸಿದ ಸಾವಿರಾರು ಚದರ ಮೀಟರ ಜಾಗೆಗೆ ಶ್ರಿಮಂತ ವ್ಯಾಪಾರಸ್ಥರಾದ ಮಾಲೀಕರು , ಆಶ್ರಯ ಯೋಜನೆ ಅಡಿ ಪಟ್ಟಾ ಪಡೆದು, ಆಶ್ರಯ ಯೋಜನೆಯ ನಿಯಮಾವಳಿಗಳ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಇದರಲ್ಲಿ ಎ.ಈಶಾ ಎನ್ನುವ ನಿವೇಶನ ಮಾಲೀಕರೊಬ್ಬರ ಮಾತು ಕೇಳಿ, ಎಲ್ಲಾ 31 ವಾಣಿಜ್ಯ ನಿವೇಶನದಾರರು ಕಾನೂನಿನ ಪ್ರಕ್ರಿಯೆ ಎದುರಿಸುವಂತಾಗಿದೆಯಲ್ಲದೆ, ಕಟ್ಟಡ ತೆರವು ಮಾಡಿ ಅತಿಕ್ರಮಿತ ಜಾಗೆ ನಗರಸಭೆಗೆ ಹಸ್ತಾಂತರಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. 

*ಕಾನೂನು ಏನು ಹೇಳುತ್ತಿದೆ?ಪೌರಾಡಳಿತ ಕಾಯ್ದೆಯಂತೆ, 25 ಸಾವಿರ ರೂಪಾಯಿ ಮೇಲ್ಪಟ್ಟ ನಿವೇಶನಗಳನ್ನು ಮಾರಾಟ ಮಾಡುವಾಗ, ಸರ್ಕಾರದ ಅನುಮೋದನೆ ಅಗತ್ಯ. ಆಶ್ರಯ ಯೋಜನೆಯಡಿ ನಿವೇಶನ ನೀಡಬೇಕಾದರೆ ಕಡು ಬಡವನಾಗಿರಬೇಕು. ಯಾವುದೇ ನಿವೇಶನ ಹೊಂದಿರಬಾರದು. ಆಶ್ರಯ ಯೋಜನೆಯಡಿ ಕೇವಲ 600 ಚದರ ಅಡಿ ನಿವೇಶನ ನೀಡಬಹುದು. ಆದರೆ ಇಲ್ಲಿ ಸಾವಿರಾರು ಚದರ ಅಡಿ ನಿವೇಶನ ಆಶ್ರಯ ಯೋಜನೆಯಡಿ ನೊಂದಣಿಯಾಗಿದೆ.ಅತಿಕ್ರಮಿಸಿದ ಕಟ್ಟಡ ಜಾಗೆಯನ್ನು ನಾಲಾ ಪ್ರದೇಶವಾಗಿರುವುದರಿಂದ, ಅಲ್ಲಿ ಯಾವುದೇ ವಾಣಿಜ್ಯ ವ್ಯವಹಾರ ಮಾಡಲು ಸಾಧ್ಯವಿಲ್ಲದ್ದರಿಂದ, ತಮಗೆ ನೀಡಬೇಕು ಎನ್ನುವ ಮಾಲೀಕರ ವಾದಕ್ಕೆ ನ್ಯಾಯಾಲಯ ಬ್ರೇಕ್‌ ಹಾಕಿದೆ.ಅತಿಕ್ರಮಿತ ಜಾಗೆ ನಗರಸಭೆಗೆ ಹಸ್ತಾಂತರಿಸಿ ಬಹಿರಂಗ ಹರಾಜಿನಲ್ಲಿ ನಿವೇಶನ ವಿಲೇವಾರಿ ಮಾಡಬೇಕು ಎಂದು ಪೌರಾಡಳಿತ ಕಾನೂನುಗಳು ಸ್ಪಷ್ಟ ಪಡಿಸಿದೆ. 

*ನಗರಸಭೆಯಿಂದ ನೋಟಿಸು: ಹೈಕೋರ್ಟನ ತೀರ​‍್ಪನನು ಉಲ್ಲೇಖಿಸಿ , ದಾಂಡೇಲಿ ನಗರಸಭೆಯ ಪೌರಾಯುಕ್ತರು, ಜೆ.ಎನ್ ರಸ್ತೆಯ 1 ರಿಂದ 31 ವಾಣಿಜ್ಯ ನಿವೇಶನಗಳ ಮಾಲೀಕರಿಗೆ, ಎರಡು ಬಾರಿ ನೋಟಿಸುಗಳನ್ನು ನೀಡಿ ಜಾಗೆಯನ್ನು ನಗರಸಭೆಗೆ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ. ನೋಟಿಸಿನಲ್ಲಿ ಧಾರವಾಡ ಹೈ ಕೋರ್ಟ ಪೀಠದ ಆದೇಶ ದಿ. 15-2-2022 ರ ತೀರ​‍್ಿನನ್ವಯ ಸರ್ಕಾರದ ಕಾರ್ಯದರ್ಶಿಗಳಿಗೆ ನೀಡಿದ, ನಿಮ್ಮ ಮನವಿಯನ್ನು ಪರೀಶೀಲಿಸಿ ಸರ್ಕಾರದ ಆದೇಶ ಸಂಖ್ಯೆ ನಅಇ 135: ಜಿಇಎಲ್2022 ಬೆಂಗಳೂರು ಆದೇಸದಲ್ಲಿ ನಗರಸಭೆಯ ಸದರಿ ಜಾಗೆಯನ್ನು ವಶ ಪಡಿಸಿಕೊಂಡು ಸರ್ಕಾರದ ಆದೇಶ ಸಂಖ್ಯೆ ನಅಇ 129;ಟಿಎಂಡಿ2002 ದಿನಾಂಕ: 2-6-2003 ರಲ್ಲಿನ ಮಾರ್ಗಸೂಚಿಗಳನ್ವಯ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ಕರ್ನಾಟಕ ಪುರಸಭೆಗಳ ಅಧಿನಿಯಮ 1964 ರ ಕಲಂ 72(2) ಅದರಂತೆ ಸರ್ಕಾರದ ಪೂರ್ವಾನುಮೋದನೆಗೆ ಪ್ರಸ್ಥಾವನೆ ಸಲ್ಲಿಸಿಲು, ನಿರ್ದೇಶಿಸಿರುವದರಿಂದ ದಾಂಡೇಲಿ ನಗರಸಭೆಯ ವತಿಯಿಂದ 99 ವರ್ಷದ ಅವಧಿಗೆ 27.84 ಚದರ ಮೀಟರ ಅಳತೆಯ ಜಾಗೆಯನ್ನು ಲೀಸ್ ಮೇಲೆ ನೀಡಿದ ನಿವೇಶನವಾಗಿರುತ್ತದೆ. ಅದರಂತೆ ಸದರ ನಿವೇಶನದ ಹಿಂಭಾಗದಲ್ಲಿರುವ ನಗರಸಭೆಯ ಮಾಲೀಕತ್ವದ 122.13 ಚದರ ಮೀಟರ ಜಾಗೆಯಿದ್ದು, ಅದರ ಜಾಗೆಯನ್ನು ಅತಿಕ್ರಮಣ ಮಾಡಿಕೊಂಡಿರುತ್ತೀರಿ. ಕಾರಣ ಸದರಿ ಜಾಗೆಯನ್ನು 15 ದಿನದೊಳಗಾಗಿ ಖಾಲಿ ಮಾಡಿ ನಗರಸಭೆಗೆ ಹಸ್ತಾಂತರಿಸಬೇಕೆಂದು ನೋಟಿಸು ನೀಡಲಾಗಿತ್ತು.ಆದರೆ ಇದುವರೆಗೂ ಜಾಗೆಯನ್ನು ಖಾಲಿ ಮಾಡಿ ಹಸ್ತಾಂತರಿಸುವದಿಲ್ಲ. ಪುರಸಭೆ ಕಾಯ್ದೆ 1964 ರನ್ವಯ ನಿಯಮಾನುಸಾರ ಕೈಗೊಳ್ಳುವುದರ ಜೊತೆಗೆ ನಿಮ್ಮ ಮೇಲೆ ಕಾನೂನು ಕ್ರಮ ಕೈ ಗೊಂಡು ಜಾಗೆಯನ್ನು ಖುಲ್ಲಾ ಪಡಿಸಿ ಸದರ ಜಾಗೆಯನ್ನು ನಗರಸಭೆಯ ವಶಕ್ಕೆ ತೆಗೆದುಕೊಳ್ಳಲಾಗುವದು. ಇದರಿಂದ ಆಗುವ ನಷ್ಠಕ್ಕೆ ನಗರಸಭೆ ಹೊಣೆಯಾಗಿರುವದಿಲ್ಲ. ಜಾಗೆಯನ್ನು ಖುಲ್ಲಾ ಪಡಿಸಿಕೊಡುವ ಖರ್ಚು ವೆಚ್ಚಗಳನ್ನು ನಿಮ್ಮಿಂದಲೇ ವಸೂಲಿ ಮಾಡಲಾಗುವದೆಂದು ನೋಟಿಸಿನಲ್ಲಿ ತಿಳಿಸಿದ್ದಾರೆ.  

ಈ ನೋಟಿಸು ನೀಡಿ ಒಂದು ವರ್ಷ, ಎರಡು ತಿಂಗಳು ಮೀರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೋಟಿಸು ನೀಡಿದ ಪೌರಾಯುಕ್ತರು ವರ್ಗಾವಣೆಗೊಂಡಿದ್ದಾರೆ. ಈಗ ಬಂದಿರುವ ಪೌರಾಯುಕ್ತರು ನ್ಯಾಯಾಲಯದ ಆದೇಶದಂತೆ ಯಾವ ರೀತಿಯ ಕ್ರಮ ಜರುಗಿಸುತ್ತಾರೆ ಎನ್ನುವದು ಕಾದು ನೋಡಬೇಕಿದೆ. ......