ಶ್ಯಾಮಿದಸಾಬ ತಾಳಕೇರಿ
ಲೋಕದರ್ಶನ ವರದಿ
ಯಲಬುಗರ್ಾ 28: ತಾಲೂಕಾ ಕೇಂದ್ರ ಬಸ್ ನಿಲ್ದಾಣದ ಪಟ್ಟಣದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾಗಿ ಮೂಲಭೂತ ಸೌಲಭ್ಯವಿಲ್ಲದೆ ಅವ್ಯವಸ್ಥೆ ಆಗಿದೆ ಅಭಿವೃದ್ಧಿಯಿಂದ ಮರಿಚಿಕೆಯಾಗಿದೆ ಎಂಬುವದು ಸಾರ್ವಜನಿಕರ ಮಾತಾಗಿದೆ.
ಪ್ರತಿ ನಿತ್ಯ ನೂರಾರು ಬಸ್ಗಳು ಓಡಾಡುತ್ತವೆ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಾರೆ ಬಸ್ ನಿಲ್ದಾಣದಲ್ಲಿ ಅಗತ್ಯವಾದ ಹಾಗೂ ಇನ್ನಿತರ ಯಾವುದೆ ವ್ಯವಸ್ಥೆ ಇರುವುದಿಲ್ಲಾ ಹಾಗೂ ಕಂಡ ಕಂಡಲ್ಲಿ ದ್ವೀಚಕ್ರ ವಾಹನ ನಿಲುಗಡೆ ಇಲ್ಲಿಯ ಬಸ್ ನಿಲ್ದಾಣದ ಮುಂಭಾಗದಲ್ಲಿ ವಾಹನ ಸವಾರರು ತಮ್ಮ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಸುವದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಆದ್ದರಿಂದ ದ್ವೀಚಕ್ರ ವಾಹನಗಳು ನಿಲುಗಡೆಗೆ ಸೂಕ್ತವಾದ ಪಾಕರ್ಿಂಗ್ ವ್ಯವಸ್ಥೆ ಮಾಡಬೇಕು ಎಂದರು.
ಕಂಡು ಕಂಡಲ್ಲಿ ಮೂತ್ರ ವಿಸರ್ಜನೆ: ಸಾರ್ವಜನಿಕರು ಕೂಡಾ ನಿಲ್ದಾಣದ ಆವರಣದಲ್ಲಿ ಕಂಡು ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವದರಿಂದ ನಿಲ್ದಾಣದ ಸುತ್ತ ಗಬ್ಬು ನಾರುತ್ತಿರುವುದರಿಂದ ಮಹಿಳೆಯರು ಕಾಲೇಜು ವಿದ್ಯಾಥರ್ಿನೀಯರು ಬಸ್ ನಿಲ್ದಾಣದಲ್ಲಿ ಬರಲು ಹಿಂದೆಟು ಹಾಕುತ್ತಾ ಪಟ್ಟಣದ ಬೇರೆ ಬೇರೆ ಸ್ಥಳಗಳಲ್ಲಿರುವ ಬಸ್ ನಿಲ್ದಾಣವನ್ನೆ ಆಶ್ರಯಿಸಿದ್ದಾರೆ, ಇದರಿಂದ ಪ್ರಯಾಣಿಕರಿಗೆ ತಿರ್ವ ತೊಂದರೆ ನಿಮರ್ಾಣವಾಗಿದೆ ಆದ್ದರಿಂದ ಬಸ್ ನಿಲ್ದಾಣದಲ್ಲಿ ನಾನಾ ರೋಗರುಜಿನಗಳು ಹರಡುವ ಸ್ಥಿತಿ ನಿಮರ್ಾಣವಾಗಿದೆ. ತಾಲೂಕ ಕೇಂದ್ರವಾದರು ಬಸ್ ನಿಲ್ದಾಣಕ್ಕೆ ಸರಿಯಾದ ಮೂಲಭೂತ ಸೌಕರ್ಯ ಇಲ್ಲದೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಇತ್ತ ಗಮನ ಹರಿಸುವ ಮೂಲಕ ಬಸ್ ನಿಲ್ದಾಣಕ್ಕೆ ಸರಿಯಾಗಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವ ಈ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವರೇ ಕಾದು ನೋಡಬೇಕು
ಪ್ರಯಾಣಿಕರಿಗೆ ಕುಡಿಯುವ ನೀರಿನ ಅವ್ಯವಸ್ಥೆ: ಕುಡಿವ ನೀರಗಾಗಿ ಪರದಾಡಿವ ಪ್ರಯಾಣಿಕರು ಸುಮಾರು ದಿನಗಳಿಂದ ಬಸ್ ನಿಲ್ದಾಣದಲ್ಲಿ ಕುಡಿಯವ ನೀರು ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ ಯಾಕೆಂದರೆ ನಿಲ್ದಾಣದ ಆವರಣದಲ್ಲಿರುವ ಕುಡಿಯುವ ನೀರಿನಲ್ಲಿ ಸುಮಾರ ದಿನಗಳಿಂದ ಸ್ಥಗಿತವಾಗಿರುವದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಹಾಗೂ ಕ್ಯಾಂಟಿನ್ ಪ್ರಾರಂಭವಾದರೆ ಮಾತ್ರ ನೀರು ಬರುವ ಸಾದ್ಯತೆ ಕುಡಿಯುವ ನೀರಿಗೆ ಪ್ರಯಾಣಿಕರಿಗೆ ಈಗಾಗಲೇ ಬೇಸಿಗೆ ಹತ್ತಿರ ಬರುತ್ತಿರುವರಿಂದ ಪ್ರಯಾಣಿಕರಿಗೆ ಮತ್ತಷ್ಟು ತೊಂದರೆ ಯಾಗುವ ಮೊದಲು ಸಂಬಂದಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಿ ದುರಸ್ಥಿಯಲ್ಲಿರುವ ಕುಡಿಯುವ ನೀರಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು.