ವುಹಾನ್ ಲಾಕ್‌ಡೌನ್ ತೆರವು- ಹೊರ ಪ್ರಯಾಣಕ್ಕೆ ಅನುಮತಿ

ವುಹಾನ್, ಏಪ್ರಿಲ್ 8, ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಿಸಲು 76 ದಿನಗಳ ಹಿಂದೆ ಹೇರಲಾಗಿದ್ದ ಲಾಕ್‌ಡೌನ್ ಕೊನೆಗೊಂಡ ನಂತರ ಮಧ್ಯ ಚೀನಾದ ಈ ಮೆಗಾಸಿಟಿಯಲ್ಲಿ ಬುಧವಾರ ಚಟುವಟಿಕೆಗಳಿಂದ ಆರಂಭವಾಗಿದೆ.ಉತ್ತರ ವುಹಾನ್‌ನ ಫುಹೆ ಟೋಲ್ ಗೇಟ್‌ನಲ್ಲಿ  ಮಧ್ಯರಾತ್ರಿ ಬ್ಯಾರಿಕೇಡ್‍ ಗಳನ್ನು ತೆಗದುಹಾಕಿದ ನಂತರ ಕಾರ್ ಗಳು ಹಾರ್ನ್ ಮಾಡುವುದರ ಮೂಲಕ ಬ್ಯಾರಿಕೇಡ್‍ಗಳನ್ನು ದಾಟಿವೆ. ವುಹಾನ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ ಗುವೊ ಲೀ  ಇತರ ಆರು ಜನರೊಂದಿಗೆ ತನ್ನ ಕಾರ್‍ ಅನ್ನು ಸ್ಥಳೀಯ ಕಾಲಮಾನ ರಾತ್ರಿ 8.40ಕ್ಕೆ ಟೋಲ್ ಗೇಟ್‌ನಲ್ಲಿ ನಿಲ್ಲಿಸಿ ಮುಂದಿನ ಪ್ರಯಾಣಕ್ಕಾಗಿ ಕಾಯುತ್ತಿದ್ದ.
ಎಕ್ಸ್‌ಪ್ರೆಸ್‌ವೇಗಳಲ್ಲಿ ಬುಧವಾರ ಹೊರಹೋಗುವ ವಾಹನಗಳ ಸಂಖ್ಯೆ ಗರಿಷ್ಠ ಮಟ್ಟ ತಲುಪಲಿದೆ ಎಂದು ವುಹಾನ್ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಕೆಲಸ-ಕಾರ್ಯಗಳು ಪುನಾರಂಭಗೊಳ್ಳುವುದರೊಂದಿಗೆ ವುಹಾನ್ ಕಳೆದ 15 ದಿನಗಳಲಲ್ಇ ಪ್ರತಿದಿನ ಸುಮಾರು 400,000 ವಾಹನಗಳ ಏರಿಕೆಯನ್ನು ಕಂಡಿದೆ. ಬುಧವಾರದ ನಂತರ ಈ ಸಂಖ್ಯೆ 1.8 ದಶಲಕ್ಷ ತಲುಪುವ ನಿರೀಕ್ಷೆ ಇದೆ ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ. ಟ್ರಾಫಿಕ್ ಪೊಲೀಸರು ರೇಡಿಯೋ ಕೇಂದ್ರಗಳು, ಆನ್‌ಲೈನ್ ಸಾಮಾಜಿಕ ವೇದಿಕೆಗಳು ಮತ್ತು ಮ್ಯಾಪ್‍ ಆಪ್‍ಗಳ ಮೂಲಕ ನಿಖರ ಸಮಯದ ಸಂಚಾರ ಮಾಹಿತಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ‘ಲಾಕ್‌ಡೌನ್ ತೆಗೆದುಹಾಕಲಾಗಿದೆ ಎಂಬ ವಿಷಯ ಕೇಳಿ ತುಂಬಾ ಸಂತೋಷವಾಗಿದೆ. ಹೊರಹೋಗುವ ವಾಹನಗಳಿಗೆ ಅನುಮತಿ ನೀಡಿರುವುದು, ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿರುವುದನ್ನು ಬಿಂಬಿಸುತ್ತದೆ. ಕಳೆದ ಎರಡು ತಿಂಗಳುಗಳಲ್ಲಿ ಸರ್ಕಾರದ ಕಠಿಣ ಪರಿಶ್ರಮ ಫಲ ನೀಡಿದೆ.’ ಎಂದು ವುಹಾನ್‍ನಲ್ಲಿನ ಎಕ್ಸ್‌ಪ್ರೆಸ್‌ವೇ ಟೋಲ್‌ನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಆದರೂ, ವೈರಸ್‍ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಮತ್ತು ಸಾಂಕ್ರಾಮಿಕ ರೋಗ ಇನ್ನೂ ನಿರ್ಮೂಲನೆಯಾಗ ಕಾರಣ ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಲು ಪ್ರಯಾಣಿಕರಿಗೆ ಮನದಟ್ಟು ಮಾಡಬೇಕಾಗಿದೆ.’ ಎಂದು ಅವರು ಹೇಳಿದ್ದಾರೆ.