ಸಾಹಿತಿ ವಂಟಗೂಡಿ, ಶಿಕ್ಷಕ ಭೀಮರಾವ್ ಘಂಟಿಗೆ ಸಿದ್ಧರತ್ನ ಮದಿಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ ಪ್ರದಾನ

ಸಾಹಿತಿ ವಂಟಗೂಡಿ, ಶಿಕ್ಷಕ ಭೀಮರಾವ್ ಘಂಟಿಗೆ ಸಿದ್ಧರತ್ನ ಮದಿಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ ಪ್ರದಾನ Writer Vantagudi and teacher Bhimrao Ghanti were presented with the Siddhatna Madigondeshwar Sadbhav

  ಪಾಲಬಾವಿ 03:  ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದ ಸಾಹಿತಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ, ಸಾಂಸ್ಕೃತಿಕ ಪರಿಷತ್ತು ತಾಲೂಕು ಅಧ್ಯಕ್ಷ ಟಿ.ಎಸ್‌.ವಂಟಗೂಡಿ ಹಾಗೂ ಜಾನಪದ ಕಲಾವಿದರು, ಕೇಂದ್ರ ಶಾಲೆಯ ಪ್ರಧಾನಗುರು, ಭೀಮರಾವ್ ಘಂಟಿ ಇವರಿಗೆ ದಿ. 10ರಂದು ಸಿದ್ಧರತ್ನ ಮದಿಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ ಲಭಿಸಿದೆ.  

ಕಾಗವಾಡ ತಾಲೂಕು ಸುಕ್ಷೇತ್ರ ಕವಲಗುಡ್ಡ ಗಾಣಗಾರುಡಿಗ, ಕವಿಮುನಿತಿಲಕ, ಸದ್ಗುರು ಸಿದ್ಧರತ್ನ ಮದಗೊಂಡೇಶ್ವರ ಮಹಾ ಸ್ವಾಮಿಗಳ 16ನೆಯ ಗುರು ಸ್ಮರಣೆಯ ನಿಮಿತ್ಯ ಕನಕಬಸವ ಮಹಾ ಬೆಳಕು ವಿಶೇಷ ಕಾರ್ಯಕ್ರಮದಲ್ಲಿ ಸದ್ಗುರು ಸಿದ್ಧರತ್ನ ಮದಿಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.  

ಕವಲಗುಡ್ಡ ಕರಿಯೋಗಿ ಸಿದ್ದೇಶ್ವರ ಮಠದ ಪೀಠಾಧಿಪತಿ ಅಮರೇಶ್ವರ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ಶಿರವಾಳ ಅಮೋಘಸಿದ್ದೇಶ್ವರ ಮಠದ ಪೀಠಾಧಿಪತಿ ಸೋಮಲಿಂಗೇಶ್ವರ ಪಟ್ಟದ ದೇವರು, ನಯಾನಗರ ಸಿದ್ದಲಿಂಗೇಶ್ವರದ ಪೀಠಾಧಿಪತಿ ಅಭಿನವ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಸನ್ನಿಧಾನ ವಹಿಸುವರು. ಪಶು ವೈದ್ಯ ಡಾ. ಶಿವಪ್ಪ ಅಜ್ಜನಗಿ, ಲಕ್ಷ್ಮಣ ನಿಂಗಾಗೋಳ, 

ಹಿಡಕಲ್ಲ ಭೀಮರಾವ್ ಘಂಟಿ, ಹಿಡಕಲ್ಲ ಸಾಹಿತಿ ತುಕಾರಾಂ ವಂಟಗೂಡಿ ಚಮಕೇರಿಯ ಶಿಕ್ಷಕ ಮಹಾಂತೇಶ ಮಂಗಳೂರು, ಅನಗೋಳ ಸಮಾಜ ಸೇವಕ ಪ್ರಕಾಶ ಪೂಜಾರಿ ಇವರಿಗೂ ಸದ್ಗುರು ಸಿದ್ಧರತ್ನ ಮದಗೊಂಡೇಶ್ವರ ಸದ್ಭಾವನಾ ಪ್ರಶಸ್ತಿಯು ಪಡೆದುಕೊಳ್ಳಲಿದ್ದಾರೆ. ಎಂದು ಕವಲಗುಡ್ಡ -ಹನುಮಪುರ ಮಠದ ಪೀಠಾಧಿಪತಿ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.