ನೀರಿನ ಅಭಾವದಿಂದ ಮುದ್ದೇಬಿಹಾಳ ಕೆರೆಗಳನ್ನು ತುಂಬಿಸುವಂತೆ ಮನವಿ

ನೀರಿನ ಅಭಾವದಿಂದ ಮುದ್ದೇಬಿಹಾಳ ಕೆರೆಗಳನ್ನು ತುಂಬಿಸುವಂತೆ ಮನವಿ   Appeal to fill Muddebihal lakes due to water shortage

ಮುದ್ದೇಬಿಹಾಳ 03 : ತಾಲೂಕಿನ  ಎಲ್ಲಾ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ  ತಾಲೂಕಿನ ರೈತ ಮುಖಂಡ ರಾಜುಗೌಡ ಕರಡ್ಡಿ ನೇತೃತ್ವದಲ್ಲಿ ತಹಶಿಲ್ದಾರ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು. ಈಗಾಗಲೇ ಎಲ್ಲಡೆ ಬೇಸಿಗೆ ಪ್ರಾರಂಭಗೊಂಡಿದ್ದು ಮಾತ್ರವಲ್ಲದೇ ಪ್ರತಿವರ್ಷಕ್ಕಿಂತಲೂ ಈ ವರ್ಷ ಬೇಸಿಗೆ ಬಿರುಬಿಸಿಲು ಹೆಚ್ಚಾಗಿದೆ ಇದರಿಂದ ಕೃಷ್ಣಾ ನದಿ ನೀರು ಕೂಡ ಬತ್ತಿ ಹೋಗುತ್ತಿದೆ ಅದರಂತೆ ಈಗಾಗಲೇ ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಹರಿಸುವುದು ಅತ್ಯವಶ್ಯಕವಾಗಿದೆ ಜತೆಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅಭಾವ ಉಂಟಾಗಿರುತ್ತದೆ.  

ಕಾರಣ ಆಲಮಟ್ಟಿ ಜಲಾಶಯದಿಂದ ಕೆರೆ ತುಂಬುವ ಯೋಜನೆಯಡಿ ದೇವರ ಹಿಪ್ಪರಗಿ ಸಿಂಧಗಿ ತಾಲೂಕಿನ ಕೆರೆಗಳನ್ನು ತುಂಬಿಸಲಾಗಿರುವ ಮಾಹಿತಿ ತಿಳಿದು ಬಂದಿದ್ದು ಆದರೇ ಮುದ್ದೇಬಿಹಾಳ ತಾಲೂಕಿನ ಕೆರೆ ತುಂಬಿಸುವಲ್ಲಿ ಕೆಬಿಜೆಎನ್ ಎಲ್ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು ಇದರಿಂದ ನಮ್ಮ ಭಾಗದ ಜನರಿಗೆ ಕುಡಿಯಲು ನೀರು ಸಿಗದೆ ತೀವೃತೊಂದರೆ ಅನುಭವಿಸುವಂತಾಗುತ್ತದೆ ಕಾರಣ ಕೂಡಲೆ ಕೆಬಿಜೆ ಎನ್‌.ಎಲ್ ಅಧಿಕಾರಿಗಳು ನಮ್ಮ ತಾಲೂಕಿನ ಬಹುತೇಕ ಎಲ್ಲ ಕೆರೆಗಳಿಗೆ ನೀರು ಹರಿಸಬೇಕು.   

ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಇಲ್ಲಸಲ್ಲದ ನೆಪಗಳನ್ನು ಹೇಳುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕೂಡಲೆ ಇಂಗಳಗೇರಿ ಗ್ರಾಮದ ಕೆರೆಯನ್ನು ಪ್ರಥಮ ಆಧ್ಯತೆ ಮೇರೆಗೆ ತುಂಬಿಸಬೇಕು. ಆಲಮಟ್ಟಿ ನೀರಾವರಿ ಸಲಹಾ ಸಮೀತಿ ಸಭೆಯಲ್ಲಿ ಚರ್ಚಿಸಿದಂತೆ ನಮ್ಮ ಮುದ್ದೇಬಿಹಾಳ ತಲೂಕಿನ ಕರಗಳಿಗೆ ನೀರು ತುಂಬಿಸಿಲ್ಲ ಇದಕ್ಕೆ ಜನ ಪ್ರತಿನಿಧಿಗಳು  ಅಧಿಕಾರಿಗಳು ನೇರ ಹೊಣೆಗಾರರು ಒಂದು ವೇಳೆ ಈ ಮನವಿ ಕೊಟ್ಟ 7 ದಿನಗಳ ಒಳಗಾಗಿ ಕೆರೆ ತುಂಬಿಸದೆ ಇದ್ದಲ್ಲಿ ಇಂಗಳಗೇರಿ, ಗುಡ್ನಾಳ ಗ್ರಾಮಗಳ ಗ್ರಾಮಸ್ಥರು ತಮ್ಮ ಕಛೇರಿಗೆ ಮುತ್ತಿಗೆ ಹಾಕಿ ಅನಿರ್ಧಿಷ್ಟಾವಧಿವರೆಗೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.  

ಈ ವೇಳೆ ರಾಜುಗೌಡ ಕರಡ್ಡಿ, ಬಸವರಾಜ ಕುಂಟೋಜಿ, ಸಿದ್ದು ಕರಡ್ಡಿ, ಆದಪ್ಪಗೌಡ ಗಬಸಾವಳಗಿ, ಶಿವಣ್ಣ ದೊರನಳ್ಳಿ, ಮಲ್ಲಿಕಾರ್ಜುನ ಗುರಡ್ಡಿ, ಪ್ರಸನ್ನ ಕೋಳೂರ, ರಾಜಶೇಖರ ಹೊಸಮನಿ, ರಾಜಶೇಖರ ಬಿರಾದಾರ, ಶರತ್ ಗುರಡ್ಡಿ,  ಸೇರಿದಂತೆ ಹಲವರು ಇದ್ದರು.