ಸಾಹಿತಿ ವಂಟಗೂಡಿ, ಶಿಕ್ಷಕ ಭೀಮರಾವ್ ಘಂಟಿಗೆ ಸಿದ್ಧರತ್ನ ಮದಿಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ ಪ್ರದಾನ
Writer Vantagudi and teacher Bhimrao Ghanti were presented with the Siddhatna Madigondeshwar Sadbhav
ಪಾಲಬಾವಿ 03: ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದ ಸಾಹಿತಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ, ಸಾಂಸ್ಕೃತಿಕ ಪರಿಷತ್ತು ತಾಲೂಕು ಅಧ್ಯಕ್ಷ ಟಿ.ಎಸ್.ವಂಟಗೂಡಿ ಹಾಗೂ ಜಾನಪದ ಕಲಾವಿದರು, ಕೇಂದ್ರ ಶಾಲೆಯ ಪ್ರಧಾನಗುರು, ಭೀಮರಾವ್ ಘಂಟಿ ಇವರಿಗೆ ದಿ. 10ರಂದು ಸಿದ್ಧರತ್ನ ಮದಿಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ ಲಭಿಸಿದೆ.
ಕಾಗವಾಡ ತಾಲೂಕು ಸುಕ್ಷೇತ್ರ ಕವಲಗುಡ್ಡ ಗಾಣಗಾರುಡಿಗ, ಕವಿಮುನಿತಿಲಕ, ಸದ್ಗುರು ಸಿದ್ಧರತ್ನ ಮದಗೊಂಡೇಶ್ವರ ಮಹಾ ಸ್ವಾಮಿಗಳ 16ನೆಯ ಗುರು ಸ್ಮರಣೆಯ ನಿಮಿತ್ಯ ಕನಕಬಸವ ಮಹಾ ಬೆಳಕು ವಿಶೇಷ ಕಾರ್ಯಕ್ರಮದಲ್ಲಿ ಸದ್ಗುರು ಸಿದ್ಧರತ್ನ ಮದಿಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಕವಲಗುಡ್ಡ ಕರಿಯೋಗಿ ಸಿದ್ದೇಶ್ವರ ಮಠದ ಪೀಠಾಧಿಪತಿ ಅಮರೇಶ್ವರ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ಶಿರವಾಳ ಅಮೋಘಸಿದ್ದೇಶ್ವರ ಮಠದ ಪೀಠಾಧಿಪತಿ ಸೋಮಲಿಂಗೇಶ್ವರ ಪಟ್ಟದ ದೇವರು, ನಯಾನಗರ ಸಿದ್ದಲಿಂಗೇಶ್ವರದ ಪೀಠಾಧಿಪತಿ ಅಭಿನವ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಸನ್ನಿಧಾನ ವಹಿಸುವರು. ಪಶು ವೈದ್ಯ ಡಾ. ಶಿವಪ್ಪ ಅಜ್ಜನಗಿ, ಲಕ್ಷ್ಮಣ ನಿಂಗಾಗೋಳ,
ಹಿಡಕಲ್ಲ ಭೀಮರಾವ್ ಘಂಟಿ, ಹಿಡಕಲ್ಲ ಸಾಹಿತಿ ತುಕಾರಾಂ ವಂಟಗೂಡಿ ಚಮಕೇರಿಯ ಶಿಕ್ಷಕ ಮಹಾಂತೇಶ ಮಂಗಳೂರು, ಅನಗೋಳ ಸಮಾಜ ಸೇವಕ ಪ್ರಕಾಶ ಪೂಜಾರಿ ಇವರಿಗೂ ಸದ್ಗುರು ಸಿದ್ಧರತ್ನ ಮದಗೊಂಡೇಶ್ವರ ಸದ್ಭಾವನಾ ಪ್ರಶಸ್ತಿಯು ಪಡೆದುಕೊಳ್ಳಲಿದ್ದಾರೆ. ಎಂದು ಕವಲಗುಡ್ಡ -ಹನುಮಪುರ ಮಠದ ಪೀಠಾಧಿಪತಿ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 