ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ

ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ Two minor boys drowned in a swimming pool: A horrific incident in Belgaum

ಬೆಳಗಾವಿ : ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ಹೊಂಡದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. 

   ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೊಂಡದಲ್ಲಿ ಈ ಘಟನೆ ನಡೆದಿದೆ. ಮೃತ ಅಪ್ರಾಪ್ತ ಬಾಲಕರು ಶಿವಾಜಿ ನಗರದವರೆಂದು ಎಂದು ತಿಳಿದುಬಂದಿದೆ.

  ಬೇಸಿಗೆಯ ಬಿಸಿಲಿನಿಂದ ತಣ್ಣೀರು ಸ್ಥಾನಕ್ಕಾಗಿ ಈ ಬಾಲಕರು ಗುಂಪು ಈಜಲು ಬಂದಿದ್ದರು ಎನ್ನಲಾಗಿದೆ. ಹೊಂಡಕ್ಕೆ ಇಳಿದ ಬಾಲಕರು ಆಳದ ಅಂದಾಜಿಲ್ಲದೆ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕರನ್ನು ಹೊರಗೆ ತೆಗೆದರಾದಿದ್ದರು. ಆದರೆ ಅಷ್ಟರಲ್ಲಿ ಅಪ್ರಾಪ್ತ ಬಾಲಕರು ಮೃತಪಟ್ಟಿದ್ದರು. 

    ಈ ಕಪಿಲೇಶ್ವರ ಹೊಂಡದ ಸುತ್ತಲೂ ಯಾವುದೇ ಸುರಕ್ಷತಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಘಟನಾ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.