ಬೈಲಹೊಂಗಲ 30: ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ವತರ್ಿಸಿದ್ದ ಬಸವೇಶ್ವರ ಅರ್ಬನ್ ಕ್ರೆಡಿಟ್ ಕೋ ಆಪ್ ಸೊಸೈಟಿ, ಕ್ರೀಡಾ ಮತ್ತು ಕಲಾವೇದಿಕೆ ಹಾಗೂ ಜಾತ್ರಾ ಕಮೀಟಿ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಗಳು ಗುರುವಾರ ಸಂಜೆ ತುರುಸಿನಿಂದ ನಡೆದವು.
ಹನುಮಂತ ದೇವರ ದೇವಸ್ಥಾನ ಪಕ್ಕದ ದೊಡ್ಡ ಕೆರೆ ಹತ್ತಿರ ನಿಮರ್ಿಸಿದ ಬೃಹತ್ ಕುಸ್ತಿ ಕಣದಲ್ಲಿ ನೂರಾರು ಜಟ್ಟಿಗಳು ತಮ್ಮ ಶಕ್ತಿ ಪ್ರದಶರ್ಿಸಿ ಕುಸ್ತಿ ಪ್ರೇಮಗಳನ್ನು ರಂಜಿಸಿದರು. ಜಟ್ಟಿಗಳ ಮೈಮಾಟ, ತೋಳಬಲ, ಡಾವ್ ಪೇಚಗಳನ್ನು ವೀಕ್ಷಿಸಿದ ಕುಸ್ತಿ ಪ್ರೇಮಿಗಳು ಸಿಳ್ಳೆ, ಚೀರಾಟ, ಕೇಕೇ ಹೊಡೆದು ಕುಸ್ತಿಪಟುಗಳನ್ನು ಹುರಿದುಂಬಿಸಿದರು.
ಕುಸ್ತಿಗಳು ನಿಖಾಲಿ ಮಾಡಿಯೇ ತೀರಬೇಕೆಂದು ಪಟ್ಟ ಹಿಡಿದರು. ಕುಸ್ತಿ ಪ್ರೇಮಿಗಳ ಪ್ರೋತ್ಸಾಹಸಕ್ಕೆ ಶಕ್ತಿಮೀರಿ ಹೋರಾಟ ಮಾಡಿದ ಪೈಲ್ವಾನರುಗಳು ವಿವಿಧ ಭಂಗಿಯ ಡಾವ್ ಪೇಚಗಳನ್ನು ಮಾಡಿ ವಿಜಯಶಾಲಿಗಳಾಗಿ ಹೊರ ಹೊಮ್ಮಿದರು.
ಕುಸ್ತಿಯಲ್ಲಿ ಬೆಳಗಾವಿ, ಚಿತ್ರದುರ್ಗ, ದಾವಣಗೇರೆ, ಧಾರವಾಡ, ಹುಬ್ಬಳ್ಳಿ, ಕೊಲ್ಲಾಪೂರ, ಮಹಾರಾಷ್ಟ್ರ, ಪುಣೆ, ಸಾಂಗ್ಲಿಯಿಂದ ಕುಸ್ತಿಪಟುಗಳು ಆಗಮಿಸಿದ್ದರು. ರಾಜ್ಯ, ಹೊರ ರಾಜ್ಯಗಳ ಕುಸ್ತಿಪ್ರೇಮಿಗಳು ಕುಸ್ತಿಯನ್ನು ಕಣ್ತುಂಬಿಕೊಂಡರು.
ಫಲಿತಾಂಶ: ಸುಮಾರು ಐದು ಬಾರಿ ಸಮಬಲ ಸಾಧಿಸಿದ ಶ್ರೀವತರ್ಿ ಸಿದ್ದಬಸವೇಶ್ವರ ಸೊಸೈಟಿಯ ಮೊದಲ ಜೋಡಿ ಕುಸ್ತಿಯಲ್ಲಿ ಪುಣೆಯ ಕಾಕಾ ಪವಾರ ತಾಲೀಮು ಪೈಲ್ವಾನ, ಮಹಾರಾಷ್ಟ್ರ ಕೇಸರಿ ಪೋಪಟ ಘೋಡಕೆ ಜೊತೆ ಸೆಣಸಿದ ಮೈಸೂರ ದಸರಾ ಕೇಸರಿ, ಕನರ್ಾಟಕ ಚಾಂಪಿಯನ್ ದಾವಣಗೇರಿ ತಾಲೀಮು ಪೈಲ್ವಾನ ಕಾತರ್ಿಕ ಕಾಟೆ ಮುಂಗೈ ಉಲ್ಟಾಡಾವ್ ಮಾಡುವ ಮೂಲಕ ಪುಣೆಯ ಪೋಪಟ ಘೋಡಕೆ ಅವರನ್ನು ಸೋಲಿಸಿದರು.
ಎರಡನೇ ಕುಸ್ತಿಯಲ್ಲಿ ಸಾಂಗ್ಲಿ ತಾಲೀಮು ಪೈಲ್ವಾನ ಗಜಾನನ ಜಮಖಂಡಿಯನ್ನು ಕೊಲ್ಹಾಪೂರ ತಾಲೀಮು ಪೈಲ್ವಾನ ಪ್ರವೀಣ ದೊಡವಾಡ ಚಿತ್ತ ಮಾಡಿ ವಿಜಯದ ನಗೆ ಬೀರಿದರು.
ಮೂರನೇ ಜೋಡಿಯಲ್ಲಿ ಪುಣೆ ತಾಲೀಮು ಯುನಿರ್ವಸಿಟಿ ಚಾಂಪಿಯನ್ ಸೂರಜ ಪವಾರ ಗೆಲುವಿನ ನಗೆ ಬೀರಿದರು.
ನಾಲ್ಕನೇ ಜೋಡಿಯಲ್ಲಿ ಬೆಳಗಾವಿ ದಗರ್ಾ ತಾಲೀಮು ಪೈಲ್ವಾನ ಶಂಕರ ಚಿಕ್ಕಬಾಗೇವಾಡಿ ಜೊತೆ ಸೆಣಸಿದ ಸಾಂಗ್ಲಿ ತಾಲೀಮು ಪೈಲ್ವಾನ ಶಿವಪುತ್ರಪ್ಪ ಚಿಂಚಲಿ ಸಮಬಲ ಸಾಧಿಸಿದರು.
ಐದನೇ ಕುಸ್ತಿಯಲ್ಲಿ ಸಾಂಗ್ಲಿ ತಾಲೀಮು ಪೈಲ್ವಾನ ಸಿದ್ದು ಚಿಂಚಲಿ ಜೊತೆ ಸೆಣಸಿದ ಬೆಂಗಳೂರ ತಾಲೀಮು ಪೈಲ್ವಾನ ಸೂರಜ ಬೈಲಹೊಂಗಲ ಸೊಗಸಾದ ಆಟವಾಡಿ ನೋಡುಗರನ್ನು ರಂಜಿಸುವ ಮೂಲಕ ಗೆಲುವಿನ ಕೇಕೇ ಹಾಕಿದರು.
ಆರನೇ ಕುಸ್ತಿಯಲ್ಲಿ ಬೆಳಗಾವಿ ತಾಲೀಮು ಪೈಲ್ವಾನ ವಿನಾಯಕ ಹಿಡಕಲ್ಲ ಜೊತೆ ಸೆಣಸಿದ ಸಾಂಗ್ಲಿ ತಾಲೀಮು ಪೈಲ್ವಾನ ಸುನೀಲ ಚಿಂಚಲಿ ಸಮಬಲ ಸಾಧಿಸಿದರು.
ಕುಸ್ತಿಗಳಿಗೆ ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಸದಸ್ಯರಾದ ಬಾಬು ಕುಡಸೋಮಣ್ಣವರ, ಗುರು ಮೆಟಗುಡ್ಡ, ಶಿವಬಸಪ್ಪ ಕುಡಸೋಮಣ್ಣವರ, ಸೋಮೇಶ್ವರ ಸಕ್ಕರೆ ಕಾಖರ್ಾನೆ ನಿದರ್ೇಶಕ ರಾಜು ಕುಡಸೋಮಣ್ಣವರ, ಅಬ್ದುಲ್ರೆಹಮಾನ ನಂದಗಡ, ರಾಮು ಕುಡಸೋಮಣ್ಣವರ, ದೀಪಕ ಕುಡಸೋಮಣ್ಣವರ, ಬಸವರಾಜ ಕಲಾದಗಿ ಚಾಲನೆ ನೀಡಿದರು.
ಕ್ರೀಡಾ ಮತ್ತು ಕಲಾ ವೇದಿಕೆಯಿಂದ ನಡೆದ ಕುಸ್ತಿಗಳನ್ನು ಮಡಿವಾಳಪ್ಪ ಹೋಟಿ, ವಿ.ಎಸ್.ಕೋರಿಮಠ, ವಿಠ್ಠಲ ಹಂಪಿಹೊಳಿ, ಪುಂಡಲೀಕ ಹೋಟಿ, ಸೋಮನಾಥ ಸೊಪ್ಪಿಮಠ, ಶೇಖಪ್ಪ ಜತ್ತಿ ಚಾಲನೆ ನೀಡಿದರು.
ಮೊದಲ ಜೋಡಿ ಕುಸ್ತಿಯಲ್ಲಿ ಬೆಳಗಾವಿ ಬಾಂದೂರಗಲ್ಲಿ ತಾಲೀಮು ಪೈಲ್ವಾನ ಪವನ ಚಿಕ್ಕನಿಂಗನ್ನಕೊಪ್ಪ ಜೊತೆ ಸೆಣಸಿದ ಇಂಚಲಕರಂಜಿ ತಾಲೀಮು ಪೈಲ್ವಾನ ಪರಶು ಇಂಗಳಗಿ ಚಿತ್ತಾದರು.
ಎರಡನೇ ಕುಸ್ತಿಯಲ್ಲಿ ಬೆಳಗಾವಿ ಪೈಲ್ವಾನ ತುಕಾರಾಮ ಅಥಣಿ, ಹನುಮಂತ ಇಂಗಳಗಿ ನಡುವೆ ನಡೆದ ಕುಸ್ತಿ ಸಮಬಲವಾಯಿತು.
ಮಾಜಿ ಪೈಲ್ವಾನರಾದ ಬಿ.ಎಂ.ಕುಡಸೋಮಣ್ಣವರ, ಮುದಕಪ್ಪ ದೊಡವಾಡ, ಕಲ್ಲಗೌಡ ನಾವಲಗಟ್ಟಿ, ಮಲ್ಲಿಕಾಜರ್ುನ ಆಲದಕಟ್ಟಿ, ಜಗದೀಶ ಕೋತಂಬ್ರಿ, ವಿರುಪಾಕ್ಷ ವಾಲಿ, ಮಲ್ಲಿಕಾಜರ್ುನ ಗೌರಿ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಕುಸ್ತಿ ಪ್ರೇಮಿಗಳು ಕುಸ್ತಿಯನ್ನು ವೀಕ್ಷಿಸಿ ಸಂಭ್ರಮಿಸಿದರು. ಸಣ್ಣಬಸಪ್ಪ ಕುಡಸೋಮಣ್ಣವರ, ಉಳವಪ್ಪ ಉಪ್ಪಿನ, ಚನ್ನಪ್ಪ ಬೆಟಗೇರಿ, ಅಶೋಕ ಕಡಕೋಳ, ಸಿದ್ರಾಯಿ ಕುದರಿ ಪಂಚರಾಗಿ ಕಾರ್ಯನಿರ್ವಹಿಸಿದರು.
ಶಿಕ್ಷಕ ದುಂಡಪ್ಪ ಅಕ್ಕಿ, ಸೋಮಪ್ಪ ಬೋರಕನವರ, ವಿಠ್ಠಲ ಅಜ್ಜನಕಟ್ಟಿ ನಿರೂಪಿಸಿದರು.