ತುಂಗಭದ್ರ ಜಲಾಶಯದ ಶಂಕುಸ್ಥಾಪನೆ ದಿನದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಲಾರೆ್ಣ.
ಬಳ್ಳಾರಿ ಜಿಲ್ಲೆ 28 : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 1945 ಫೆಬ್ರವರಿ 28ನೇ ತಾರೀಖಿನಂದು ತುಂಗಭದ್ರ ಜಲಾಶಯ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ದಿನಕ್ಕೆ 80ವರ್ಷಗಳಾಗಿವೆ. ಬೆಳಿಗ್ಗೆ 8.00 ಗಂಟೆಗೆ ತುಂಗಭದ್ರ ಮಂಡಳಿಯ ಅಧಿಕಾರಿಗಳೂ ಪೂಜೆ ನೆರವೇರಿಸಿರುತ್ತಾರೆ. ಇದೇ ದಿನ ಬೆಳಿಗ್ಗೆ 11.00 ಗಂಟೆಗೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಬಿ.ಜೆಡ್.ಜಮೀರ್ ಅಹ್ಮದ್ ಹಾಗೂ ಹೊಸಪೇಟೆ ಶಾಸಕರಾದ ಮಾನ್ಯ ಹೆಚ್.ಆರ್.ಗವಿಯಪ್ಪ ರವರು ಮತ್ತು ಮಾನ್ಯ ಹೆಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾನ್ಯ ಅಧ್ಯಕ್ಷರು ಹೊಸಪೇಟೆ ನಗಾಭಿವೃದ್ದಿ ಪ್ರಾಧಿಕಾರ ಇವರೆಲ್ಲರೂ ಈ ದಿನ ತುಂಗಭದ್ರ ಜಲಾಶಯಕ್ಕೆ ಆಗಮಿಸಿ 1945ರಲ್ಲಿ ಶಂಕುಸ್ಥಾಪನೆ ಯನ್ನು ನೆರವೇರಿಸಿದ ಶಿಲಾಬಂಡೆಗೆ ಪೂಜೆಯನ್ನು ನೆರವೇರಿಸಿ ಮಾಲಾರೆ್ಣ ಮಾಡಿದರು.