ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಸಂಶೋಧನಾ ಕೇಂದ್ರದ ಸ್ಥಾಪನೆ

ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಸಂಶೋಧನಾ ಕೇಂದ್ರದ ಸ್ಥಾಪನೆ  Establishment of Sri Gavisiddeshwara Ayurveda College Hospital Research Centre

ಲೋಕದರ್ಶನ ವರದಿ 

ಕೊಪ್ಪಳ 12: ಶ್ರೀ ಗವಿಮಠದ 17ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಶಿವ ಶಾಂತವೀರ ಮಹಾ ಶಿವಯೋಗಿಗಳವರು ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಮಹಾ ತಪೋನಿಷ್ಠರು, ಜಗದ್ಗುರು ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಸಂಶೋಧನಾ ಕೇಂದ್ರದ ಸ್ಥಾಪನೆ ಮತ್ತು ಏಳಿಗೆಗೆ ಶ್ರಮಿಸಿದರು. ಭಾಗದ ಜನರ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿದ ಅವರು ಮಹಾವಿದ್ಯಾಲಯದ ಕಟ್ಟಡ ಕಟ್ಟುವ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅವರ ಸರಳತೆ ಸೇವಾ ಮನೋಭಾವ ಎಲ್ಲರಿಗೂ ಸದಾ ಆದರ್ಶವಾಗಿರಬೇಕು ಎಂದು ಬಿಸರಳ್ಳಿಯ ಮಠದ ಶ್ರೀ ಶಿವ ಶಾಂತವೀರ ಸ್ವಾಮಿಗಳವರು ಹೇಳಿದರು.

ನಗರದ ಜಗದ್ಗುರು ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಸ್ಥಾನ ಶ್ರೀ ಗವಿಮಠದ 17ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಶಿವ ಶಾಂತವೀರ ಮಹಾಶಿವಯೋಗಿಗಳವರ 23ನೇ ಪುಣ್ಯ ಸ್ಮರಣೀಯ  ನಿಮಿತ್ತ ದಿನಾಂಕ 12.03.2026ರಂದು ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಹಾಗೂ ಸಲಹಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ನಾಡಿನ ಜನರ ಆರೋಗ್ಯ ಸುಧಾರಣೆಗೆ ಇಂತಹ ಶಿಬಿರ ಅಗತ್ಯವಾಗಿರುವ , ಅನೇಕ ಬಡ ಜನರಿಗೆ ಉಪಯೋಗವಾಗಲಿದೆ.

ಇಂತಹ ಶಿಬಿರದ ಸದುಪಯೋಗವನ್ನು ಅಗತ್ಯವಿರುವ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು. ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಆರೋಗ್ಯ ತಪಾಸಣಾ ಹಾಗೂ ಸಲಹಾ ಶಿಬಿರದಲ್ಲಿ ಸುಮಾರು 650 ಕ್ಕಿಂತಲೂ ಹೆಚ್ಚಿನ ಸಾರ್ವಜನಿಕರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಶ್ರೀ ಜಗದ್ಗುರು ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್‌ ನ ಸದಸ್ಯರು ಹಾಗೂ ಮಹಾವಿದ್ಯಾಲಯದ ಚೇರ್ಮನ್ನರಾದ ಸಂಜಯ್ ಕೋತ್ಬಾಳ್ , ಟ್ರಸ್ಟ್‌ ನ ಕಾರ್ಯದರ್ಶಿಗಳಾದ ಡಾ  ಎಸ್ ವಿ ಹಿರೇಮಠ್, ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ ಸಾಲಿಮಠ ಹಾಗೂ ಉಪ ಪ್ರಾಚಾರ್ಯರಾದ ಡಾ.ಸುರೇಶ್ ಹಕ್ಕಂಡಿ ಹಾಗೂ ಮಹಾವಿದ್ಯಾಲಯದ ವಿಶೇಷ ತಜ್ಞ ವೈದ್ಯ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.   

ಇದೇ ಸಂದರ್ಭದಲ್ಲಿ ದೈಹಿಕ ವಿಕಲ ಚೇತನ ಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಮಾತೃ ಫೌಂಡೇಶನ್ ಸ್ಥಾಪಕರಾದ ಡಾ. ಮಾಲತಿ ಹೊಳ್ಳ ಅವರು ಭಾಗವಹಿಸಿ ಹಲವು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಹಾಗೂ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಆಯ್ಕೆ ಮಾಡಿಕೊಂಡರು.