ವ್ಯಾಸರಾಜಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀಸಂತರ ಆರಾಧನೆ

Worship of Sree Sant was held with devotion at Vyasaraja Matha

ವ್ಯಾಸರಾಜಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀಸಂತರ ಆರಾಧನೆ     

     ಬಳ್ಳಾರಿ 18: ಇಲ್ಲಿನ ರೇಡಿಯೋ ಪಾರ್ಕ್‌ ವ್ಯಾಸರಾಜ ಮಠದಲ್ಲಿ ನಿನ್ನೆಯಿಂದ ವಾದಿರಾಜರ ಆರಾಧನಾ ಮಹೋತ್ಸವ, ವ್ಯಾಸರಾಯರ 486ನೇ ಆರಾಧನೆ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಮಾ.17ರಂದು ಸಂಜೆ ವ್ಯಾಸರಾಜ ಭಜನಾ ಮಂಡಳಿಯಿಂದ ಸಂಗೀತ ಕಾರ್ಯಕ್ರಮ ಜರುಗಿತು. 18 ರಂದು ಸಂಜೆ ಸೋಸಲೆ ಸಮೀರಾಚಾರ್ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಭಕ್ತಾದಿಗಳಿಂದ ಸಂಪೂರ್ಣ ಸೇವೆ, ಅಲಂಕಾರ ಸೇವೆ, ಹೂವಿನ ಅಲಂಕಾರ ಸೇವೆ, ಅನ್ನ ಸಂತರೆ​‍್ಣ ಸೇವೆ, ರಜತ ಮಹೋತ್ಸವ, ಕನಕಾಭಿಷೇಕ, ಸರ್ವ ಸೇವೆ, ಹಸ್ತೋದಕ, ಪಂಚಾಮೃತ ಮತ್ತು ಪಾದಪೂಜೆ ಜರುಗಿದವು. ಸೋಸಲೆ ವ್ಯಾಸರಾಜಮಠದ ಅರ್ಚಕರಾದ ಕೆ.ಪಾಂಡುರಂಗಾಚಾರ್ ಮತ್ತು ಇತರೆ ಧರ್ಮದರ್ಶಿಗಳು ಈ ಆರಾಧಣೆಯ ಉಸ್ತುವಾರಿ ವಹಿಸಿದ್ದರು. ಆನೆಗೊಂದಿಯಲ್ಲಿ ಕೊಪ್ಪಳ ಜಿಲ್ಲೆಯ ನವವೃಂದಾವನ ಕ್ಷೇತ್ರದಲ್ಲಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ  ರಾಜೇಂದ್ರ ತೀರ್ಥರ ಪೂರ್ವಾದಿ ಮಠ, ಮುನಿತ್ರಯಪೀಠ ವ್ಯಾಸರಾಜ ಮಠದಿಂದ ಮಾ.17, 18 ಮತ್ತು 19 ರ ತೃತೀಯ, ಚತುರ್ಥಿ ಮತ್ತು ಪಂಚಮಿಯಂದು ವ್ಯಾಸರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಅತ್ಯಂತ ಭಕ್ತಿಪೂರ್ವಕವಾಗಿ ಜರುಗುತ್ತಿದೆ.  ವ್ಯಾಸರಾಜ ಗುರುಸಾರ್ವಭೌಮರ 486ನೇ ಆರಾಧನಾ ಮಹೋತ್ಸವವನ್ನು ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ 1008 ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಪ್ರತಿದಿನ ವ್ಯಾಸರಾಜರ ಕೃತಿಗಳ ಪರಿಚಯಾತ್ಮಕವಾದ ಪ್ರವಚನ, ವಿದ್ವದ್ಗೋಷ್ಠಿ, ದಾಸವಾಣಿ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ, ಪರಂಪರಾಗತವಾದ ಕಾರ್ಯಕ್ರಮಗಳು ಮುಂದುವರಿದಿವೆ. ವ್ಯಾಸ ಸಾಹಿತ್ಯದಲ್ಲಿ ವಿಶಿಷ್ಟ ಸಾರಸ್ವತ ಸೇವೆ ಸಲ್ಲಿಸಿದ ಅಗ್ರಮಾನ್ಯ ವಿದ್ವಾಂಸರಿಗೆ ವ್ಯಾಸರಾಜಾನುಗ್ರಹ ಪ್ರಶಸ್ತಿ, ನಿರಂತರ  ಮಧ್ವಶಾಸ್ತೊ ಪಾಠ-ಪ್ರವಚನಗಳಲ್ಲಿ ನಿರತರಾದ ವಿದ್ವಾಂಸರಿಗೆ ಸನ್ಮಾನ, ದಾಸ ಸಾಹಿತ್ಯದಲ್ಲಿ ವಿಶೇಷ ಸೇವೆ ಮಾಡಿದ ಸಾಧಕರಿಗೆ ಶ್ರೀಗುರು ಪುರಂದರಾನುಗ್ರಹ ಪ್ರಶಸ್ತಿ, ಸಮಾಜದಲ್ಲಿ ವಿಶೇಷವಾದ ಸೇವೆ ಸಲ್ಲಿಸಿದ ಗಣ್ಯರಿಗೆ ವ್ಯಾಸರಾಜ ಸೇವಾ ದುರಂಧರ ಎಂಬ ಪ್ರಶಸ್ತಿಗೆ ಭಾಜನರಾದರು. ವ್ಯಾಸರಾಜ ಅನುಗ್ರಹ ಪ್ರಶಸ್ತಿಗೆ ವಿದ್ವಾನ್ ಕರ್ನೂಲು ಶ್ರೀನಿವಾಸಾಚಾರ್ಯ, ಪುರಂದರಾನುಗ್ರಹ ಪ್ರಶಸ್ತಿಗೆ ಅಮ್ಮಾಳು ಅಮ್ಮಾಳ್ ಕುಂಭಕೋಣಂ ಇವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ತಮಿಳುನಾಡು ಸೋಸಲೆ ವ್ಯಾಸರಾಜ ಮಠ, ಬೆಂಗಳೂರು ಸಂಜಯನಗರದ ರಾಘವೇಂದ್ರ ಸ್ವಾಮಿ ಮಠದ ಸಮನ್ವಯ ಸಮಿತಯಿಂದ ವ್ಯಾಸರಾಜ ಸೇವಾ ದುರಂಧರ ಪ್ರಶಸ್ತಿಗೆ ಭಾರತದ ಸರ್ವೋಚ್ಛ ನ್ಯಾಯಾಲಯದ ನಿಯೋಜಿತ ಹಿರಿಯ ವಕೀಲರಾದ ರಾಘವೇಂದ್ರ ವತ್ಸ, ತಮಿಳುನಾಡು ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಚೆನೈನ ಪಿ.ಆರ್‌.ಕೃಷ್ಣರಾಜ್, ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ವೆಂಕಟೇಶ್ ಎಸ್‌.ಅರಬಟ್ಟಿ, ವಕೀಲರಾದ ಬಿಭಾಸ್ ವಿ. ಕಿತ್ತೂರು, ಬೆಂಗಳೂರಿನ ಅನಿಲ್ ಕುಮಾರ್ ಅರಳಿ, ಸಿ.ಆರ್‌.ಮುರಳಿ, ವಿಜಯ್ ಹುಲ್ಲೂರು, ಮೈಸೂರಿನ ಡಾ.ಕೃಷ್ಣಾಚಾರ್ ಜೋಷಿ ಅವರು ಭಾಜನರಾಗಿದ್ದಾರೆ. ವ್ಯಾಸರಾಜ ಗುರುಸಾರ್ವಭೌಮರ ಭಕ್ತರು ಪಾಲ್ಗೊಂಡು ವ್ಯಾಸರಾಜ ಗುರು ಸಾರ್ವಭೌಮರ ಮತ್ತು ಮುಖ್ಯ ಪ್ರಾಣದೇವರ ಅಂತರ್ಯಾಮಿ ಮೂಲಗೋಪಾಲಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಲು ಭಕ್ತರಿಗೆ ಸೋಸಲೆ ವ್ಯಾಸರಾಜ ಮಠದ ದಿವಾನರಾದ ಎ.ಪಿ.ವಿಜಯೀಂದ್ರಾಚಾರ್ಯ, ಮುಖ್ಯ ಆಡಳಿತಾಧಿಕಾರಿ ಸಿ.ಎಸ್‌.ಸುರಂಜನ, ದಿವಾನರಾದ ಎಲ್‌.ಎಸ್‌.ಬ್ರಹ್ಮಣ್ಯಾಚಾರ್ಯ ಅವರು ತಿಳಿಸಿದ್ದಾರೆ.