ವಿಶ್ವದಾದ್ಯಂತ 70 ಲಕ್ಷ ಜನರಿಗೆಕರೋನ ಸೋಂಕು, 34 ಲಕ್ಷ ಜನ ಗುಣುಮುಖ

ವಾಷಿಂಗ್ಟನ್ , ಜೂನ್  9,ವಿಶ್ವದಾದ್ಯಂತ  70 ಲಕ್ಷದ 86 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದ್ದು  ಇದರಲ್ಲಿ 34ಲಕ್ಷದ 60 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಇನ್ನು ಅಮೆರಿಕದಲ್ಲಿ ಅತಿ  ಹೆಚ್ಚು ಮಂದಿ ಕೊರೊನಾ  ಸೋಂಕಿಗೆ ಒಳಗಾಗಿದ್ದು.ಇಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷದ ದಾಟಿದ್ದು  1 ಲಕ್ಷದ 12ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.ಬ್ರೆಜಿಲ್ ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ  ಇಲ್ಲಿ 6ಲಕ್ಷದ 91 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದು ಇವರ ಪೈಕಿ, 37,300 ಕ್ಕೂ ಹೆಚ್ಚು ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ.ರಷ್ಯಾ  ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು  5,800ಕ್ಕೂ ಹೆಚ್ಚು ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ.ನಾಲ್ಕನೇ  ಸ್ಥಾನದಲ್ಲಿರುವ ಸ್ಪೇನ್ ನಲ್ಲಿ 2ಲಕ್ಷದ 88ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ.