ವಿಶ್ವ ಜಲ ದಿನಾಚರಣೆ

World Water Day-Belgavi news

ಬೆಳಗಾವಿ 25- ವಿಶ್ವ ಜಲ ದಿನಾಚರಣೆಯನ್ನು ಕೆಯುಐಡಿಎಫ್‌ಸಿ ಹಾಗೂ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಬೆಳಗಾವಿ ಉತ್ತರದ ಮಹಾವೀರ ನಗರದಲ್ಲಿ ಗಂಗಾ ಪೂಜೆ ಮಾಡುವುದರ ಮೂಲಕ ಇತ್ತೀಚೆಗೆ ಆಚರಿಸಲಾಯಿತು. ಮಹಾವೀರ ನಗರದಲ್ಲಿ  ಕಳೆದ 10-12 ವರ್ಷಗಳಿಂದ ನೀರು ಸರಬರಾಜು ಕೊಳವೆ ಮಾರ್ಗವೇ ಇದ್ದಿರಲಿಲ್ಲ. ಕಳೆದ 6 ತಿಂಗಳ ಹಿಂದೆ ಕೊಳವೆ ಮಾರ್ಗವನ್ನು ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜನರಿಗೆ ನೀರಿನ ಮಹತ್ವ ಮತ್ತು ಸದ್ಬಳಕೆಯ ಅರಿವು ಮೂಡಿಸಲು ವಿಶ್ವ ಜಲದಿನಾಚರಣೆಯನ್ನು ಸ್ಥಳೀಯರ ಸಹಕಾರದಿಂದ ಆಚರಿಸಲಾಯಿತು.  

ಸೌಮ್ಯ ಎನ್‌. ಪಿ ಮಾಹಿತಿ ಶಿಕ್ಷಣ ತಜ್ಞರು 24*7 ನೀರು ಸರಬರಾಜು ಯೋಜನೆಯ ಪ್ರಮುಖ ಅಂಶಗಳು, ಅದರಿಂದಾಗುವ ಮಹತ್ವ ಹಾಗೂ ನೀರಿನ ದರ ಮತ್ತು ಗ್ರಾಹಕರು ನೀಡಬೇಕಾದ ದಾಖಲೆಗಳ ಬಗ್ಗೆ ವಿವರಣೆ ನೀಡಿದರು.  

ಪ್ರಕಾಶ ಕೋಷ್ಠಿ ಸಾರ್ವಜನಿಕ ಸಂಪರ್ಕ ಅಧಿಕಾರಗಳು ಜಲ ದಿನಾಚರಣೆಯನ್ನು 1993 ಮಾರ್ಚ 22 ರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಈ ವರ್ಷ ಜಲದಿನಾಚರಣೆಯ ಘೋಷವ್ಯಾಖ್ಯೆ ಹಿಮನದಿಗಳನ್ನು ಸಂರಕ್ಷಿಸೋಣ ಎಂಬುದರ ಬಗ್ಗೆ ಮಾಹಿತಿ ನೀಡಿ ನೀರನ್ನು ಯಾವ ಕಾರ‌್ಯಕ್ಕೆ ಎಷ್ಟು ಬಳಸಬೇಕೆಂಬುದರ ಬಗ್ಗೆ ಮಾಹಿತೀನೀಡಿದರು.  

ಮಹಾವೀರ ನಗರದ ಗಣ್ಯರಾದ ವಿಜಯಕುಮಾರ ಕಿಲ್ಲೇದಾರರವರು ಮಾತನಾಡಿ, ಮಹಾವೀರ ನಗರಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲು ಸಹಕರಿಸಿದ ಶಾಸಕರಾದ ರಾಜು ಶೇಠ, ಮಹಾನಗರ ಪಾಲಿಕೆ, ಕೆಯುಐಡಿಎಫ್‌ಸಿ ಮತ್ತು ಎಲ್ ್ಘಟಿರವರಿಗೆ ಕೃತಜ್ಙತೆ ಸಲ್ಲಿಸಿದರು. ಅಲ್ಲದೆ ನಾವೆಲ್ಲ ಮಿತವಾಗಿ ನೀರು ಬಳಸೋಣ, ಬಳಸಿದ ನೀರಿಗೆ ಸರಿಯಾದ ಸಮಯದಲ್ಲಿ ನೀರಿನ ಕರ ಪಾವತಿಸೋಣ ಎಂದರು. 

ಮತ್ತೋರ್ವ ಅತಿಥಿಗಳಾದ ಬಿ.ಎಚ್‌. ಮುತ್ತಲಮುರಿಯವರು ಮಾತನಾಡಿ, ನೀರು ಮನುಷ್ಯನಿಗೆ ಎಷ್ಟು ಅಗತ್ಯವೆಂಬುದರ ಬಗ್ಗೆ ಮಾತನಾಡಿ ಆರೋಗ್ಯಕ್ಕೆ ಯಾವ ಪ್ರಮಾಣದಲ್ಲಿ ನೀರು ಸೇವಿಸಬೇಕು ಹಾಗೂ ಬೇಸಿಗೆ ಕಾಲದಲ್ಲಿ ನೀರನ್ನು ಹೇಗೆ ಬಳಸಬೇಕೆಂದು ತಿಳಿಸಿದರು.  

ಪದ್ಮಾವತಿಯವರು ಮಾತನಾಡಿ ಈ ಮೊದಲು ನಾವು ಕಿಲೋಮೀಟರದಿಂದ ನೀರು ತರುವ ಪರಿಸ್ಥಿತಿಯಿತ್ತು. ವಯಸ್ಸಾದವರಿಗೆ ಹೆಣ್ಣುಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿತ್ತು. ಶಾಸಕರ ಅವಿರತ ಪ್ರಯತ್ನ ಮತ್ತು ಇಲ್ಲಿ ಸೇರಿರುವ ಅಧಿಕಾರಿ ಸಿಬ್ಬಂದಿಗಳ ಸಹಕಾರದಿಂದ ಇಂದು ನಮ್ಮ ಕಾಲೋನಿಗೆ ನೀರು ಬಂದಿದೆ. ಬೇಸಿಗೆಯಿರುವುದರಿಂದ 6 ದಿನಕ್ಕೊಮ್ಮೆ ನೀರು ಬರುತ್ತಿದೆ. ಹೀಗಾಗಿ ನೀರು ಸಾಕಾಗುತ್ತಿಲ್ಲ. ಕನಿಷ್ಠ ಪಕ್ಷ 2 ದಿನಕ್ಕೊಮ್ಮೆ ನೀರು ಸರಬರಾಹು ಮಾಡಲು ವಿನಂತಿಸಿದರು.  

ರಾಜೇಶ್ವರಿಯವರು ಮಾತನಾಡಿ, ತಾತ ನದಿ ನೋಡಿದ್ದ, ಅಪ್ಪ ಭಾವಿ ನೋಡಿದ್ದ, ಮಗ ನಳ ನೋಡುತ್ತಿದ್ದಾನೆ, ಮುಂದಿನ ಜನಾಂಗ ನೀರನ್ನು ಪಾತ್ರೆ ಹಾಗೂ ಬಾಟಲಿನಲ್ಲಿ ನೋಡುವ ಕಾಲ ದೂರ ಉಳಿದಿಲ್ಲ. ಕಾರಣ ನೀರನ್ನು ಮಿತವಾಗಿ ಬಳಸೋಣ. ಭೂಮಿಯಲ್ಲಿ ಪ್ರತಿಶತ 75ಅ ನೀರಿದ್ದರೂ ಬಹುತೇಕ ಸಮುದ್ರವಾಗಿದೆ. ಅದರಲ್ಲಿಯೂ ಸ್ವಲ್ಪ ಹಿಮವಾಗಿದೆ. ಸಿಹಿ ನೀರಿನ ಪ್ರಮಾಣ ಕೇವಲ 1ಅ ಮಾತ್ರ ಇದೆ. ಆದರೆ ಅದೂ ಕೂಡ ಈಗ 0.6ಅ ಆಗಿದೆ. ಆದ್ದರಿಂದ ನಾವು ನೀರನ್ನು ಈಗ ಉಳಿಸಿದರೆ ಮುಂದಿನ ಜನಾಂಗ ನೀರು ಪಡೆಯಬಹುದಾಗಿದೆ. ಕಾರಣ ಮಿತವಾಗಿ ನೀರು ಬಳಸೋಣವೆಂದರು. 

ನೆರವು ಸಂಸ್ಥೆಯ ಸಿಬ್ಬಂದಿಗಳು ನೀರಿನ ಮಹತ್ವ ಕುರಿತು ಪ್ರಹಸನ ಪ್ರಸ್ತುತಪಡಿಸಿದರು. ಹಾಗೂ ನೀರಿನ ಸದ್ಬಳಕೆ ಕುರಿತು " ನಾನು ನೀರನ್ನು ಉಳಿಸಲು ಮತ್ತು ಸಂರಕ್ಷಿಸಲು ನೀರಿನ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ನನ್ನ ಕುಟುಂಬ, ನನ್ನ ಸಮುದಾಯ, ನನ್ನ ರಾಷ್ಟ್ರ ಮತ್ತು ಪ್ರಪಂಚದ ಹಿತ ದೃಷ್ಠಿಯಿಂದ ಜಾಗೃತಿ ಮೂಡಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿತ್ತೇನೆ ಎಂಬ  ಪ್ರಮಾಣ ವಚನ ಬೋಧಿಸಿದರು. ಮಹಾವೀರ ನಗರದ ನಾಗರಿಕರು ನೀರು ಸರಬರಾಜು ಮಾಡಲು ಶ್ರಮಿಸಿದ ಕೆಯುಐಡಿಎಫ್‌ಸಿ, ಎಲ್ಘ್‌ಟಿ ಹಾಗೂ ನೆರವು ಸಂಸ್ಥೆಯ ಎಲ್ಲ ಸಿಬ್ಬಂದಿಗಳನ್ನು ಸನ್ಮಾನಿಸಿದರು. ವೇದಿಕೆಯಲ್ಲಿ  ಫಾತಿಮಾ ನಯಿಕವಾಡಿ, ಬಸವರಾಜ ಕುಂಬಾರ, ವಿಜಯಕುಮಾರ ಕಿಲ್ಲೇದಾರ, ಚಂದ್ರಕಾಂತ ಸಂಭಾಜಿ, ಸುನಂದಾ ಮುನವಳ್ಳಿ, ಪದ್ಮಾವತಿ, ಎ.ಎಚ್‌. ದೊಡ್ಡಮನಿ ಮತ್ತಿತರರು ಇದ್ದರು. ಸೌಮ್ಯ ಸ್ವಾಗತಿಸಿದರು, ಪ್ರಕಾಶ ಕೋಷ್ಠಿ ನಿರೂಪಿಸಿದರು ಮತ್ತು ಇಬ್ರಾಹಿಂ ಮಂಗಲಗೇರಿ ವಂದಿಸಿದರು. 

ವಿಶ್ವ ಜಲದಿನಾಚರಣೆ ಅಂಗವಾಗಿ ಕೆಯುಐಡಿಎಫ್‌ಸಿ ಹಾಗೂ ಎಲ್ ್ಘ ಟಿ ಯವರ ಸಹಯೋಗದಲ್ಲಿ ಅನಗೋಳ ಕೆರೆಯನ್ನು ಸ್ವಚ್ಚಗೊಳಿಸಲಾಯಿತು.