ವಿಶ್ವ ಬಾಹ್ಯಾಕಾಶ ಸಪ್ತಾಹ: ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿದ ಮಮತಾ

ಕೋಲ್ಕತಾ, ಅ 4:   ಶುಕ್ರವಾರದಿಂದ ಆರಂಭವಾಗಿರುವ  ವಿಶ್ವ ಬಾಹ್ಯಾಕಾಶ ಸಪ್ತಾಹದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಸ್ರೋ ವಿಜ್ಞಾನಿಗಳಿತೆ ಶುಭ ಕೋರಿದ್ದಾರೆ.  ವಿಶ್ವ ಬಾಹ್ಯಾಕಾಶ ವಾರ ಇಂದು ಪ್ರಾರಂಭವಾಗುತ್ತದೆ. ಇಸ್ರೋ ವಿಜ್ಞಾನಿಗಳಿಗೆ ನನ್ನ ಶುಭಾಶಯಗಳು. ದೇಶದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದೆ ಎಂದು ಮಮತಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.  'ವಿಶ್ವ ಬಾಹ್ಯಾಕಾಶ ವಾರ' ಗುರುತಿಸಲು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಕ್ಟೋಬರ್ 4 ರಿಂದ 10 ರವರೆಗೆ ಕರ್ನಾಟಕದ ಏಳು ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಪ್ರಯೋಜನಗಳ ಅರಿವು ಮೂಡಿಸಲಿದೆ.  ಯು.ಆರ್.ರಾವ್ ಉಪಗ್ರಹ ಕೇಂದ್ರವು ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನದ ಜತೆಗೆ ಬಾಹ್ಯಾಕಾಶದ ಮಾಹಿತಿ ನೀಡಲು ಏಳು ಕಾಲೇಜುಗಳೊಂದಿಗೆ ಕೈಜೋಡಿಸಿದೆ ಎಂದು  ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.    ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1999 ರಲ್ಲಿ ವಿಶ್ವ ಬಾಹ್ಯಾಕಾಶ ವಾರ ಎಂದು ಘೋಷಿಸಿತು. (ಡಬ್ಲ್ಯುಎಸ್ಡಬ್ಲ್ಯು) ಪ್ರತಿ ವರ್ಷ ಅಕ್ಟೋಬರ್ 4 ರಿಂದ10 ರ ವರೆಗೆ ಈ ಸಪ್ತಾಹ ನಡೆಯಲಿದೆ. ವಿಶ್ವ ಬಾಹ್ಯಾಕಾಶ ವಾರವು ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರರಾಷ್ಟ್ರೀಯ ಆಚರಣೆಯಾಗಿದ್ದು, ಮಾನವ ಸ್ಥಿತಿಯ ಸುಧಾರಣೆಗೆ ಅಪಾರ ಕೊಡುಗೆ ನೀಡಿದೆ. ಬಾಹ್ಯಾಕಾಶ ವ್ಯಾಪ್ತಿ ಮತ್ತು ಶಿಕ್ಷಣದಲ್ಲಿ ಅನನ್ಯ ಹತೋಟಿ ಒದಗಿಸಿ, ಬಾಹ್ಯಾಕಾಶದಿಂದ ಅವರು ಪಡೆಯುವ ಪ್ರಯೋಜನಗಳ ಬಗ್ಗೆ ವಿಶ್ವದಾದ್ಯಂತ ಜನರಿಗೆ ತಿಳಿಸುವುದು ವಿಶ್ವ ಬಾಹ್ಯಾಕಾಶ ಸಪ್ತಾಹದ ಗುರಿಯಾಗಿದೆ.   ದಿ ಮೂನ್: ಗೇಟ್ವೇ ಟು ದಿ ಸ್ಟಾರ್ಸ. ಈ ವಿಶ್ವ ಬಾಹ್ಯಾಕಾಶ ಸಪ್ತಾಹದ ವಿಷಯವಾಗಿದೆ.  ಜುಲೈ 20 ರಂದು ಚಂದ್ರನ ಮೇಲೆ 1969 ರಲ್ಲಿ ಮಾನವಕುಲದ ಮೊದಲ ಹೆಜ್ಜೆಯ 50 ನೇ ವಾರ್ಷಿಕೋತ್ಸವವನ್ನು  ಈ ಮೂಲಕ ಸಂಭ್ರಮಿಸಲಾಗುತ್ತದೆ.