ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಸ್ಕಿಜೋಪ್ರೇನಿಯಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಜಿ.ಪಂ ಉಪಕಾರ್ಯದಶರ್ಿ ದುಗರ್ೇಶ ರುದ್ರಾಕ್ಷಿ ಚಾಲನೆ ನೀಡಿದರು.
ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಪೊಲೀಸ್ ಪ್ಯಾಲೇಸ ನಂತರ ಎಲ್ಐಸಿ ಸರ್ಕಲ್ ವರೆಗೆ ಸಾಗಿ ಪುನಃ ಜಿಲ್ಲಾಡಳಿತ ಭವನಕ್ಕೆ ಮುಕ್ತಾಯಗೊಂಡಿತು. ಜಾಥಾದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಕಿರಿಯ ಮಹಿಳಾ ಆರೋಗ್ಯ ತರಬೇತಿ ವಿದ್ಯಾಥರ್ಿನಿಯರು, ಆಯಾ ತಾಲೂಕಿನ ಆಶಾ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.
ಜಾಥಾದುದ್ದಕ್ಕೂ ಗೋಷಣೆಗಳನ್ನು ಕೂಗಲಾಯಿತು. ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ, ಜಿಲ್ಲಾ ಶಸ್ತ್ರ ಚಚಿಕಿತ್ಸಕ ಡಾ.ಪಿ.ಎ.ಬಿರಾದಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ವೀರಣ್ಣ ಪಾಟೀಲ ಮಾತನಾಡಿ ಸ್ಕಿಜೋಪ್ರೇನಿಯಾ ಒಂದು ದೀರ್ಘಕಾಲದ ಹಾಗೂ ತೀವ್ರ ಮಟ್ಟದ ಮಾನಸಿಕ ಕಾಯಿಲೆಯಾಗಿದೆ. ಇದು ರೋಗಿಯ ಆಲೋಚನೆ, ಭಾವನೆಗಳು, ವರ್ತನೆ ಮತ್ತು ಪರಿಸರವನ್ನು ಅರ್ಥಮಾಡಿಕೊಳ್ಳಲು ಏರುಪೇರು ಆಗುತ್ತದೆ. ಈ ಕಾಯಿಲೆ ಯಾರಿಗಾದರೂ ಕಾಣಿಸಿಕೊಳ್ಳಬಹುದು.
ಇದು ದೆವ್ವ, ಭೂತ, ಮಾಟ ಮಂತ್ರ ಅಥವಾ ಪೂರ್ವ ಜನ್ಮದ ಪಾಪದಿಂದ ಬರುವಂತಹದಲ್ಲ. ಇದು ಕಾರ್ಯದಲ್ಲಿ ಏರು ಪೇರು ಆದಾಗ ಕಾಣಿಸಿಕೊಳ್ಳುವ ಕಾಯಿಲೆ ಯಾಗಿದೆ ಎಂದರು. ಈ ಕಾಯಿಲೆ ಪ್ರತಿ 100 ರಲ್ಲಿ ಒಬ್ಬರಿಗೆ ಸರಾಸರಿ 15 ರಿಂದ 30 ವರ್ಷದ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಬೇಗನೇ ಗುರುತಿಸಿ ಸರಿಯಾದ ಔಷದೋಪಚಾರ ಅಥವಾ ತೀವ್ರ ಗತಿಯಲ್ಲಿ ಇದ್ದಾಗ ವಿದ್ಯುತ್ ಕಂಪನ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ. ಒಂದು ವೇಳೆ ಚಿಕಿತ್ಸೆ ನೀಡದಿದ್ದರೆ ಅಂಗವಿಕಲತೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಬಸವರಾಜ ಹೆಬ್ಬಳ್ಳಿ, ಡಾ.ಜಯಶ್ರೀ ಎಮ್ಮಿ, ಡಾ.ಡಿ.ಬಿ.ಪಟ್ಟಣಶೆಟ್ಟಿ, ಡಾ.ಪಿ.ಎ.ಹಿಟ್ನಳ್ಳಿ, ಡಾ.ವಿಜಯಕುಮಾರ, ಪವಾಡೆಪ್ಪ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಜೆ.ಎಂ.ಬೀಳಗಿ ಉಪಸ್ಥಿತರಿದ್ದರು.