ವಿಶ್ವ ಸಂಸ್ಕೃತ ದಿನಾಚರಣೆ ಹಾಗೂ ರಕ್ಷಾ ಬಂಧನ

ವಿಶ್ವ ಸಂಸ್ಕೃತ ದಿನಾಚರಣೆ ಹಾಗೂ ರಕ್ಷಾ ಬಂಧನ World Sanskrit Day and Raksha Bandhan

ವಿಜಯಪುರ 09: ದಿ. 09ರಂದು ಸಂಸ್ಕೃತ ದಿನಾಚರಣೆಯ ಅಂಗವಾಗಿ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಮಹತ್ವವನ್ನು ತಿಳಿಸಿದರು.  

ಕುಮಾರ ರೋಹಿತ ಸಂಸ್ಕೃತ ಭಾಷೆಯು ಎಲ್ಲ ಭಾಷೆಗಳಲ್ಲಿ ಹಾಸು ಹೊಕ್ಕಾಗಿ ಇದೆ. ಈ ಭಾಷೆಯನ್ನು ಕಲಿಯುವುದರಿಂದ ನಾವೆಲ್ಲರೂ ಉತ್ತಮ ನಾಗರಿಕರಾಗಿ ಇರುತ್ತೇವೆ ಎಂದು ಹೇಳಿದನು. ಕುಮಾರಿ ಶ್ರಾವಣಿ ಸಂಸ್ಕೃತ ಭಾಷೆಯು ಭಾವನೆಯನ್ನು ಎಲ್ಲರಿಗೂ ಮುಟ್ಟಿಸುವಲ್ಲಿ ಕಾಳಿದಾಸ, ಭಾಸ, ಭವಭೂತಿ ಮುಂತಾದ ಕವಿಗಳು ತಮ್ಮ ಕಾವ್ಯಗಳ ಮೂಲಕ ಸಂಸ್ಕೃತ ಭಾಷೆಯನ್ನು ಜನಜನಿತವಾಗಿ ಮಾಡಿದ್ದಾರೆ ಎಂದು ಹೇಳಿದಳು. ಕುಮಾರ ಧೀರಜ ಕುಲಕರ್ಣಿ ಸಂಸ್ಕೃತ ಭಾಷೆಯಿಂದ ನಾವೆಲ್ಲರೂ ಭಾರತೀಯ ಐತಿಹಾಸಿಕ ಕಾವ್ಯಗಳಾದ ರಾಮಾಯಣ, ಮಹಾಭಾರತ ಮುಂತಾದ ಗ್ರಂಥಗಳಲ್ಲಿ ಇರುವ ಶ್ರೇಷ್ಠವಾದ ಮಾನವೀಯ ಮೌಲ್ಯಗಳಿಂದ ಭಾರತ ದೇಶದ ಮಣ್ಣಿನ ಹಿರಿಮೆಯನ್ನು ವಿಶ್ವದಲ್ಲಿ ಪ್ರಕಾಶಿಸುವಂತೆ ಆದರ್ಶಗಳನ್ನು ನಾವು ಪಾಲನೆ ಮಾಡಿ ಮಹಾ ಮಾನವರಾಗಲು ಪ್ರಯತ್ನಿಸಬೇಕು ಎಂದು ಹೇಳಿದನು.  

ಕುಮಾರಿ ಚೇತನಾ ಬಡಿಗೇರ ಇವಳು ಸಂಸ್ಕೃತ ಭಾಷೆಯಿಂದ ನಾವೆಲ್ಲರೂ ಶ್ರೇಷ್ಠವಾದ ವಿಚಾರಗಳನ್ನು ಹೊಂದಿ ನಾವು ಉತ್ತಮ ಮನುಷ್ಯತ್ವವನ್ನು ಹೊಂದುವ ಅವಕಾಶವನ್ನು ಪಡೆಯುತ್ತೇವೆ ಎಂದು ಹೇಳಿ ರಕ್ಷಾ ಬಂಧನವು ಪವಿತ್ರವಾದ ಹಬ್ಬವಾಗಿದೆ ಎಲ್ಲ ಭಾರತೀಯ ಅಣ್ಣ ತಮ್ಮಂದಿರು ತಮ್ಮ ಅಕ್ಕ ತಂಗಿಯರಿಗೆ ರಕ್ಷಣೆಯನ್ನು ನೀಡಬೇಕೆಂದು ಹಿಂದೆ ದ್ರೌಪದಿಯು ಶ್ರೀಕೃಷ್ಣ ಪರಮಾತ್ಮರಿಗೆ ರಕ್ಷಾ ಬಂಧನ ಮಾಡಿ ಅವನ ರಕ್ಷಣೆಯನ್ನು ಪಡೆದು ಪ್ರಸಿದ್ಧಿಯನ್ನು ಪಡೆದಳು ಹೀಗೆ ಈ ಹಬ್ಬವು ಭಾರತ ದೇಶದ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ ಎಂದು ಹೇಳಿದಳು. ಕೊನೆಯದಾಗಿ ಕುಮಾರಿ ಸುಷ್ಮಾ ಧನಶೆಟ್ಟಿ ಸಂಸ್ಕೃತ ಭಾಷೆಯು ದೇವ ಭಾಷೆ ಎಂದು ಪ್ರಸಿದ್ಧಿ ಪಡೆದಿದೆ. ಭಾರತದ ಅತ್ಯಂತ ಪ್ರಾಚೀನವಾದ ಭಾಷೆ ಸಂಸ್ಕೃತ ಭಾಷೆ ಇದು ಕನ್ನಡ, ತಮಿಳು, ತೆಲುಗು, ಮರಾಠಿ ಮುಂತಾದ ಭಾರತೀಯ ಭಾಷೆ ಹಾಗೂ ಇಂಗ್ಲೀಷ ಮುಂತಾದ ವಿದೇಶಿ ಭಾಷೆಗಳಿಗೂ ಸಂಸ್ಕೃತವು ಮೂಲವಾಗಿದೆ ಎಂದು ಹೇಳಿದಳು. ಇಂತಹ ಪ್ರಾಚೀನವಾದ ಸಂಸ್ಕೃತ ಭಾಷೆಯ ಅಧ್ಯಯನ ಪ್ರಚಾರ, ಪ್ರಸಾರ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪದವಿ ಪೂರ್ವ, ಪದವಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಕೃತ ಭಾಷೆಯ ಅಧ್ಯಯನವನ್ನು ಮಾಡುವ ಅವಕಾಶವನ್ನು ಮಾನ್ಯ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಮಾಡಬೇಕೆಂದು ತಿಳಿಸಿದರು.  

ವಿ. ಭ. ದರಬಾರ ಸಂಸ್ಕೃತ ಉಪನ್ಯಾಸಕರಾದ ಡಾಽಽ ವೇದನಿಧಿಆಚಾರ್ಯ ಬಿ. ಕುಲಕರ್ಣಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾವರ್ಧಕ ಸಂಘದ ಮಾನ್ಯ ಅಧ್ಯಕ್ಷರಾದ ರಾಜೇಶ ಡಿ. ದರಬಾರ ಅವರು ಸಂಸ್ಕೃತ ದಿನಾಚರಣೆ ಹಾಗೂ ರಕ್ಷಾ ಬಂಧನದ ಶುಭಾಷಯವನ್ನು ಎಲ್ಲರಿಗೂ ತಿಳಿಸಿದರು. ಪ್ರಾಚಾರ್ಯರಾದ ಟಿ. ಆರ್‌. ಕುಲಕರ್ಣಿರವರು, ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಶುಭ ಕೋರಿದರು.