ಮಹಾಲಕ್ಷೀ ಜಾತ್ರೆಯ ಪೂರ್ವ ಸಿದ್ಧತೆ ಕಾರ್ಯಕ್ರಮ

ಮಹಾಲಕ್ಷೀ ಜಾತ್ರೆಯ ಪೂರ್ವ ಸಿದ್ಧತೆ ಕಾರ್ಯಕ್ರಮ Preparatory program for the Mahalakshmi Jatra

ಲೋಕದರ್ಶನ ವರದಿ 

ಸಂಕೇಶ್ವರ  02: ಸಂಕೇಶ್ವರದ ಮಹಾಲಕ್ಷೀ ಜಾತ್ರೆಯು 2027 ರಲ್ಲಿ ನಡೆಯಲಿದೆ ಜಾತ್ರೆಯ ಬಗ್ಗೆ ಮುಂಜಾಗ್ರತೆ ಕ್ರಮದ ಬಗ್ಗೆ ಜಾತ್ರೆಯ ಕಮೀಟಿಯವರು 3 ತಿಂಗಳು ಕಳೆದರು ಜಾತ್ರೆಯನ್ನು ಯಾವ ರೀತಿ ಮಾಡಬೇಕೆಂದು ಮತ್ತು ನಗರದಲ್ಲಿ ಮೂಲಭೂತ ಸೌಕರ್ಯಗಳು ಕುಡಿಯುವ ನೀರಿನ ವ್ಯವಸ್ಥೆ ಸುಲಭ ಶೌಚಾಲಯಗಳು ರಸ್ತೆಗಳು ಇವುಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ ಎಂದು ನಿನ್ನೆ ನೇಸರಿ ಲಾನ್ ಕಲ್ಯಾಣ ಮಂಟಪದಲ್ಲಿ ನಗರದಲ್ಲಿರುವ ಎಲ್ಲ ಸಮಾಜದ ಮುಖಂಡರುಗಳ ಸಭೆ ಏರಿ​‍್ಡಸಲಾಗಿತ್ತು ಈ ಸಭೆಯ ಕುರುಬ ಸಮಾಜದ ಹಿರಿಯ ನಾಗರಿಕ ಗಜಾನನ ನಿಂಗಪ್ಪಾ ಕ್ವಳ್ಳಿಯವರು ಇವರು ಮುಖಂಡರುಗಳನ್ನು ಉದ್ದೇಶಿಸಿ ಮಾತನಾಡುತ್ತಾ, 63 ವರ್ಷಗಳ ನಂತರ ಈ ಮಹಾಲಕ್ಷ್ಮೀ ಜಾತ್ರೆಯನ್ನು ಮಾಜಿ ಶಾಸಕ ಬಾಳಾಸಾಹೇಬ ಸಾರವಾಡಿಯವರು ಪ್ರಾರಂಭಿಸಿದರು, 2015 ರಲ್ಲಿ ಬಾಳಾಸಾಹೇಬ ಸಾರವಾಡಿಯವರು ನಿಧನರಾದರು, 2016 ರಲ್ಲಿ ಜರುಗಿದ ಈ ಜಾತ್ರೆಯ ಉಸ್ತುವಾರಿಯನ್ನು ನಗರದ ಎಲ್ಲ ಸದ್ಭಕ್ತರು ಸೇರಿ ಹಿರಿಯ ನಾಗರಿಕ ಅಪ್ಪಾಸಾಹೇಬ ಶಿರಕೋಳಿ ಇವರ ಹೆಗಲಿಗೆ ಹೊರೆಸಲಾಯಿತು ಜಾತ್ರೆಯು ಅತಿ ವಿಜೃಂಭನೆಯಿಂದ ಜರುಗಿತು ಇದು ಹೆಮ್ಮೆಯ ವಿಷಯ, ಹಿಂದಿನ ಜಾತ್ರೆಯ ಲೆಕ್ಕ ಪತ್ರ ಜಮಾಖರ್ಚುಗಳನ್ನು ಕೊಡಬೇಕೆಂದು ಗಜಾನನ ಕ್ವಳ್ಳಿಯವರು ಹಿಂದಿನ ಅಧ್ಯಕ್ಷರಿಗೆ ಸಭೆಯಲ್ಲಿ ಒತ್ತಾಯಿಸಿದ್ದಾರೆ.