ವಿಶ್ವ ತಾಯಂದಿರ ದಿನ: ಎಚ್‌ಡಿಡಿ, ಎಚ್‌ಡಿಕೆ ಶುಭಾಶಯ

ಬೆಂಗಳೂರು, ಮೇ 10, ನಾಡಿನ ಸಮಸ್ತ ಜನತೆಗೆ ವಿಶ್ವ  ತಾಯಂದಿರ ದಿನದ ಶುಭಾಯಶಯಗಳನ್ನು  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೋರಿದ್ದಾರೆ.ಉತ್ತಮ ಸಮಾಜದ ನಿರ್ಮಾಣದಲ್ಲೂ ತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದು ಗೌಡರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಮ್ಮ  ಅನ್ನುವುದೇ ಜಗತ್ತಿನ ಅದ್ಬುತವಾದ ಶಬ್ದ. ನನಗಾಗಿ ದಿನನಿತ್ಯ ದೇವಾಲಯಕ್ಕೆ ತೆರಳಿ ಪೂಜೆ  ಸಲ್ಲಿಸುತ್ತಿದ್ದ ನನ್ನ ತಾಯಿಯ ನೆನಪು ಸದಾ ನನ್ನ ಜೊತೆಗಿದೆ ಎಂದು ಹೇಳಿದ್ದಾರೆ.ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪಾತ್ರ ಅಪೂರ್ವವಾಗಿದ್ದು, ಉತ್ತಮ ಸಮಾಜದ ನಿರ್ಮಾಣದಲ್ಲೂ ತಾಯಿಯದ್ದೇ ಮಹತ್ವದ ಭೂಮಿಕೆ ಎಂದಿದ್ದಾರೆ.ಕುಮಾರಸ್ವಾಮಿ  ಅವರು, ಇಂದು ವಿಶ್ವ ತಾಯಂದಿರ ದಿನ. ಪ್ರೀತಿ, ಮಮತೆ, ತ್ಯಾಗಕ್ಕೆ ಈ ದಿನ ಸಂಕೇತ.  ಆದರೆ, ತಾಯ್ತನ ಅಜರಾಮರ. ನನ್ನ ವ್ಯಕ್ತಿತ್ವದ ಮೇಲೆ ನನ್ನಮ್ಮನ ಪ್ರಭಾವ ಗಾಢವಾಗಿದೆ.  ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಬಡವರಿಗೆ ಮರುಗುವ, ಕಷ್ಟಕ್ಕೆ ಕರಗುವ ಆಕೆಯ ಗುಣಗಳು  ನನ್ನನ್ನು ರೂಪಿಸಿವೆ. ನನ್ನಮ್ಮನಿಗೆ ಹಾಗೂ ವಿಶ್ವದ ಮಾತೃ ಹೃದಯಗಳಿಗೆ ನನ್ನ ಶುಭಾಶಯಗಳು  ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ‌ ತಿಳಿಸಿದ್ದಾರೆ.