ಹಿರೇಬೆಂಡಿಗೇರಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಈರವ್ವ ಹಡಪದ ಅವಿರೋಧ ಆಯ್ಕೆ

Eravva Hadapad was elected unopposed as the new chairperson of Hirebendigeri Gram Panchayat

ಶಿಗ್ಗಾವಿ 18: ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮ ಪಂಚಾಯಿತಿಗೆ 2ನೇ ಅವಧಿ ಅಧ್ಯಕ್ಷ ,ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷೆ ಈರವ್ವ ಹಡಪದ, ಉಪಾಧ್ಯಕ್ಷ ಚನ್ನಬಸಪ್ಪ ಮ್ಯಾಗೇರಿ ಅವರನ್ನು ಗ್ರಾಮಸ್ಥರು, ಸದಸ್ಯರು ಸನ್ಮಾನಿಸಿದರು. 

   ಸಾಮಾನ್ಯ ಮಹಿಳೆ ಮೀಸಲಾತಿ ಇರುವ ಅಧ್ಯಕ್ಷೆ ಸ್ಥಾನಕ್ಕೆ ಈರವ್ವ ಹಡಪದ, ಸಾಮಾನ್ಯ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಬಸಪ್ಪ ಮ್ಯಾಗೇರಿ ತಲಾ ಒಂದೊಂದು ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರನ್ನು ಅಧ್ಯಕ್ಷ ,ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದರೆ ಎಂದು ಘೋಷಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ಕುಮಾರ ಮಣ್ಣವಡ್ಡರ, ಸಹಾಯಕರಾಗಿ ಪ್ರಕಾಶ ಓಂಧಕರ, ಸುರೇಶ ತಗ್ಗಿಹಳ್ಳಿ ಕಾರ್ಯ ನಿರ್ವಹಿಸಿದರು.    ನಂತರ ನಡೆದ ಅಭಿನಂದನ ಸಮಾರಂಭದಲ್ಲಿ ಈರವ್ವ ಹಡಪದ್ ಮಾತನಾಡಿ,ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು.ಅದಕ್ಕೆ ಎಲ್ಲ ಸದಸ್ಯರ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದರು.  

ಮುಖಂಡರಾದ ತಿಪ್ಪಣ್ಣ ಸಾತಣ್ಣವರ, ಸಂಗಮೇಶ ಕಂಬಳಿಮಠ, ಫಕ್ಕೀರೇಶ ಕೊಂಡಾಯಿ,ಶಂಕರ ಮುಂದಿನ್ಮನಿ, ಬಸನಗೌಡ ಪಾಟೀಲ, ಚನ್ನಪ್ಪ ಕುಂದೂರ, ಫಕೀರಯ್ಯ ಹಿರೇಮಠ ನಾಗಪ್ಪ ಅದೃಶ್ಯಪ್ಪನವರ, ಬಸವರಾಜ್ ಕನಕಟ್ಟಿ, ಬಸವರಾಜ ಬ್ಯಾಹಟ್ಟ, ಚನ್ನಬಸಪ್ಪ ಹಡಪದ, ಆಶಿಮ್ ಖಾನ್ ಪಟೇಲ್, ದ್ಯಾಮಣ್ಣವರ, ಶಂಕ್ರಮ್ಮ ಹರಿಜನ, ಯಲ್ಲವ್ವ ತಳವಾರ,ಫಾತಿಮಾ ತಹಶಿಲ್ದಾರ, ರುದ್ರ​‍್ಪ ನಂದನ್ನವರ, ಸೇರಿದಂತೆ ಅನೇಕ ಮುಖಂಡರು ಇದ್ದರು