ಪುರಾಣ ಪ್ರವಚನಗಳ ಆಲಿಕೆಯಿಂದ ಮಕ್ಕಳಿಗೆ ಸಂಸ್ಕಾರ: ಹಂಗರಗಿ

Sanskara for children by listening to Puranic discourses: Hangaragi


ಪುರಾಣ ಪ್ರವಚನಗಳ ಆಲಿಕೆಯಿಂದ ಮಕ್ಕಳಿಗೆ ಸಂಸ್ಕಾರ: ಹಂಗರಗಿ   

ಸಿಂದಗಿ,18: ಶಿಕ್ಷಣ ಸಂಸ್ಥೆಗಳು ಜ್ಞಾನವನ್ನು ನೀಡಿದರೆ ಮಠ-ಮಂದಿರಗಳಲ್ಲಿ ನಡೆಯುತ್ತಿರುವ ದೇಶದ ಅನೇಕ ಮಹಾಪುರುಷ್ಯರ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮಕ್ಕಳಲ್ಲಿ ಸಂಸ್ಕಾರ ಸಿಗುತ್ತದೆ ಕಾರಣ ತಾಯಂದಿರು ಮಕ್ಕಳನ್ನು ಪುರಾಣ ಪುಣ್ಯಕತೆಗಳಲ್ಲಿ ತೊಡಗಿಸಬೇಕು ಇದರಿಂದ ಆದ್ಯಾತ್ಮೀಕ ಚಿಂತನೆ ಬೆಳೆಯುತ್ತದೆ ಅಲ್ಲದೆ ನಿತ್ಯ ಕೇಳುವ ಪುರಾಣದ ತುಣುಕುಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದಕ್ಕೂ ಸ್ವಾರ್ಥಕವಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.  

  ಪಟ್ಟಣದ ಬಸ್‌ಡಿಪೋ ಹತ್ತಿರದಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 29ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಶ್ರೀ ರೇವಣಸಿದ್ದೇಶ್ವರ ಪುರಾಣ ಪ್ರವಚನ ಸಮಾರಂಭದಲ್ಲಿ ಮಾತನಾಡಿದರು. 

ಕಾರ್ಯಕ್ರಮದ ನೇತೃತ್ವವ ವಹಿಸಿದ ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಪ್ರತಿವರ್ಷ ಶ್ರೀಮಠವು ಬಡವರ ಮಠವಾಗಿದ್ದು ಮಾನವ ಜನ್ಮದ ಉದ್ಧಾರಕ್ಕೆ ಅನೇಕ ಮಹಾಪುರಷ ಪುರಾಣ ಪ್ರವಚನಗಳನ್ನು ಹಾಕಿಕೊಳ್ಳುತ್ತಿದು ಮಾನವ ಆದ್ಯಾತ್ಮಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು.  ತಿಳುವಳಿಕೆಗಾಗಿ ಇಂತಹ ಪುರಾಣ ಪ್ರವಚನ ಸಂತ್ಸಂಗಗಳನ್ನು ಆಲಿಸಬೇಕು. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಅಲ್ಲದೆ ಜ.22 ರಂದು ಶ್ರೀಮಠದ ಸುತ್ತಮುತ್ತ ಆಧಿಶೇಷರ ಮೇರವಣಿಗೆ ಬರುತ್ತಿದ್ದು ಎಲ್ಲ ತಾಯಂದಿರು ಮನೆ ಮುಂದೆ ಅಲಂಕಾರ ಮಾಡುವ ಮೂಲಕ ಸ್ವಚ್ಚತೆ ಕಾಪಾಡಿ ಪ್ರತಿ ಮನೆಯ ನೀರು ಹೂವು ಹಣ್ಣು ಕಾಯಿ ಹಿಡಿದುಕೊಂಡು ಸ್ವಾಗತಿಸಿಕೊಂಡು ತಮ್ಮ ಜೀವನ ಪಾವನಗೊಳೀಸಿಕೊಳ್ಳಬೇಕು ಮತ್ತು ಜ.23 ರಂದು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳ 54ನೇ ಅನುಷ್ಠಾನ ಸುವರ್ಣ ಮಹೋತ್ವ ಹಾಗೂ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮೂಂದಿನ ಬಾರಿ ಹೆಲಿಪ್ಯಾಡ್ ಮೂಲಕ ಪುಷ್ಪಾರ್ಚನೆ ಮಾಡುವ ಸದುದ್ದೇಶ ಹೊಂದಲಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. 

    ಹೆಸ್ಕಾಂ ಸಹಾಯಕ ಅಭಿಯಂತರ ಮಲಕಣ್ಣ ಜಾಲಿಬೆಂಜಿ ಮಾತನಾಡಿ, ಜೀವನ ಜಂಜಾಟದಲ್ಲಿ ನಿತ್ಯ ಅನೇಕ ಕಷ್ಠ ಕಾರ​‍್ಪಣಯಗಳನ್ನು ಅನುಭವಿಸುತ್ತಿದ್ದೇವೆ ಕಷ್ಠ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೆ ಕಷ್ಠ ಮತ್ತು ಸುಖ ಸಮನಾಗಿ ಸ್ವೀಕಾರ ಮಾಡಬೇಕು ಇದ್ದದರಲ್ಲೇ ಸುಖ ಜೀವನ ಕಾಣಲು ಇಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಾಗ ಮಾತ್ರ ಜೀವನದಲ್ಲಿ ಶಾಂತಿ ಸ್ಥಪಿಸಲು ಸಾಧ್ಯವಾಗುತ್ತದೆ. ನಮ್ಮ ಈ ಬದುಕು ನೀರಿನ ಮೇಲಿನ ಗುಳ್ಳೆ ಇದ್ದಹಾಗೆ. ಆದ್ಯಾತ್ಮಿಕ ಜೀವನ ಕೌಶಲ್ಯಗಳ ಬಗ್ಗೆ ಇಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವುದು ಅವಶ್ಯಕ. ಮಾನವ ಸಂಸಾರದ ಸಂಪತ್ತಿಗೆ ಅತೀ ಆಸ ಪಡದೆ, ಧರ್ಮ, ಸಂಸ್ಕಾರ ಊಣಬಡಿಸುವ ಮಠ-ಮಂದಿರಗಳಲ್ಲಿ ನಡೆಯುವ ಪುರಾಣ-ಪ್ರವಚನಗಳಲ್ಲಿ ಭಾಗವಹಿಸುವ ಮುಖಾಂತರ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

      ದಿವ್ಯ ಸಾನಿಧ್ಯವನ್ನು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ವಹಿಸಿದ್ದರು. 

ಪೂಜಾ ಹಿರೇಮಠ ನಿರೂಪಿಸಿದರು. ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು.  

ಪ್ರವಚನಕಾರ ಮೈಂದರಗಿ ಗುರುಹಿರೇಮಠದ ಷ.ಬ್ರ ಅಭಿನವ ರೇವನಸಿದ್ದ ಗುರುಗಳು, ಸಂಗೀತಗಾರ ಶಾಂತಲಿಂಗ ಹೊನ್ನಕಿರಣಗಿ, ತಬಲಾ ಆಕಾಶ ಹೈದ್ರಾ,  ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.