ವಿಶ್ವ ಕಿರಿಯರ ಚಾಂಪಿಯನ್ ಶಿಪ್: ಅಮೆರಿಕ ಈಜುಗಾರರ ಪ್ರಾಬಲ್ಯ, 10 ಪದಕ ಮಡಿಲಿಗೆ

ಬುಡಾಪೆಸ್ಟ್,  ಆಗಸ್ಟ್ 24     ಇಲ್ಲಿ ಶುಕ್ರವಾರ ನಡೆದ 7 ನೇ ಫಿನಾ ವಿಶ್ವ ಕಿರಿಯರ ಈಜು ಚಾಂಪಿಯನ್ಶಿಪ್ನಲ್ಲಿ ಅಮೆರಿಕ ತಂಡ ಪ್ರಬಲ ಮುನ್ನಡೆ ಸಾಧಿಸಿದ್ದು, 10 ಕ್ಕೂ  ಹೆಚ್ಚು ಪದಕಗಳನ್ನು (4 ಚಿನ್ನ ಸೇರಿದಂತೆ) ಗೆದ್ದು, ಒಂದು ವಿಶ್ವ ಕಿರಿಯರ ದಾಖಲೆ  ಮತ್ತು ಎರಡು ಚಾಂಪಿಯನ್ಶಿಪ್ ದಾಖಲೆಗಳನ್ನು ನಿರ್ಮಿಸಿದೆ.        ಪುರುಷರ  200 ಮೀಟರ್ ಬ್ರೆಸ್ಟ್ಸ್ಟ್ರೋಕ್ ಫೈನಲ್ನಲ್ಲಿ, ಅಮೆರಿಕದ ಜೋಶ್  ಮ್ಯಾಥೆನಿ ಎರಡು ನಿಮಿಷ 9.40 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಈ ಮೂಲಕ  ಜಪಾನಿನ ಈಜುಗಾರ ಶೋಮಾ ಸಾಟೊ ಅವರನ್ನು ಸೋಲಿಸಿ  ಹೊಸ ಚಾಂಪಿಯನ್ಶಿಪ್ ದಾಖಲೆಯನ್ನು ಸ್ಥಾಪಿಸಿದರು.  ಮಹಿಳೆಯರ  400 ಫ್ರೀಸ್ಟೈಲ್ ಫೈನಲ್ನಲ್ಲಿ ಆಸ್ಟ್ರೇಲಿಯಾದ ಲಾನಿ ಪಾಲಿಸ್ಟರ್ ಪ್ರಾಬಲ್ಯ ಸಾಧಿಸಿದರು.  4 ನಿಮಿಷ ಐದು ಸೆಕೆಂಡ್ನಲ್ಲಿ ಗುರಿ ಮುಟ್ಟಿ ಚಿನ್ನ ಪದಕಕ್ಕೆ ಪಾತ್ರರಾದರು. ಈ ಮೂಲಕ 2015 ರಲ್ಲಿ ಸಿಂಗಾಪುರ ತಮ್ಸಿನ್ ಕುಕ್ ನಿರ್ಮಿಸಿದ್ದ ಚಾಂಪಿಯನ್ಶಿಪ್ ದಾಖಲೆಯನ್ನು (4ನಿಮಿಷ ಆರು ಸೆಕೆಂಡ್) ಮುರಿದಿದ್ದಾರೆ.