ವಿಶ್ವ ಕಿರಿಯರ ಆರ್ಚರಿ ಚಾಂಪಿಯನ್ಶಿಪ್: ಭಾರತಕ್ಕೆ ಕಂಚಿನ ಪದಕ

ಕೊಲ್ಕತಾ, ಆ 24    ಸ್ಪೇನ್ನ ಮ್ಯಾಡ್ರಿಡ್ನಲ್ಲಿ ನಡೆಯುತ್ತಿರುವ  ವಿಶ್ವ ಆರ್ಚರಿ ಯುವ ಚಾಂಪಿಯನ್ಶಿಪ್ನಲ್ಲಿ ಭಾರತ ಪುರುಷರ ಕಿರಿಯರ(21 ವಯೋಮಿತಿ) ಆರ್ಚರಿ ತಂಡ 

ಮೊದಲ ಕಂಚಿನ ಪಡೆದಿದ್ದಾರೆ. 

ಸುಖ್ಬೀರ್ ಸಿಂಗ್, ಸಂಗಮ್ಪ್ರೀತ್ ಬಿಸ್ಲಾ ಹಾಗೂ ಸಂಜಯ್ ಫಡ್ತಾರೆ ಅವರನ್ನೊಳಗೊಂಡ ಭಾರತ ತಂಡ ಕೊಲಂಬಿಯಾದ ಸಿಂಗ್ ಮೆಜಿಯಾ, ಫೆಲಿಪ್ ಝುಲುಗೆ ಹಾಗೂ ಮನ್ಯೂಲ್ ಟೊರೊ ಅವರ ತಂಡದ ವಿರುದ್ಧ 234-231 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.  

ತೀವ್ರ ಕತೂಹಲ ಕೆರಳಿಸಿದ್ದ ಫೈನಲ್ ಹಣಾಹಣಿಯಲ್ಲಿ ಭಾರತ ಕೇವಲ ಮೂರು ಅಂಕಗಳ ಅಂತರದಲ್ಲಿ ಕೊಲಂಬಿಯಾ ವಿರುದ್ಧ ಸೋಲು ಅನುಭವಿಸಿತು. ನಾಲ್ಕನೇ ಹಾಗೂ ಅಂತಿಮ ಸುತ್ತಿನಲ್ಲಿ ಭಾರತ 60-56 ಅಂತರದಲ್ಲಿ ಕೊಲಂಬಿಯಾ ವಿರುದ್ಧ ಕೇವಲ ಮೂರು ಅಂಕಗಳ ಅಂತರದಲ್ಲಿ ಸೋತಿತು.  

ಇದಕ್ಕೂ ಮುನ್ನ ಕಾಪೌಂಡ್ ಕಿರಿಯರ ಮಿಶ್ರ ವಿಭಾಗದಲ್ಲಿ ಭಾರತ ಇನ್ನೆರಡು ಪದಕಗಳನ್ನು ಖಚಿತಪಡಿಸಿಕೊಂಡಿದೆ. ಇರಾನ್ ವಿರುದ್ಧ ಶುಕ್ರವಾರದ ಸೆಮಿಫೈನಲ್ ಪಂದ್ಯದಲ್ಲಿ 154-151 ಅಂತರದಲ್ಲಿ ಜಯ ಗಳಿಸಿದ್ದು, ಚಿನ್ನದ ಪದಕಕ್ಕಾಗಿ ಸ್ವಿಜಲರ್ೆಂಡ್ ವಿರುದ್ಧ ಇಂದು ಸೆಣಸಲಿದೆ.