ಶಿರಕೋಳ ಹಿರೇಮಠದಲ್ಲಿ ಮೇ. 3 ರಂದು ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 29 ನೇ ಪಟ್ಟಾಧಿಕಾರ ವಧಂರ್ತಿ ಮಹೋತ್ಸವ
ಧಾರವಾಡ 19: ಶ್ರೀ ಗುರುಸಿದ್ಧೇಶ್ವರ ಜನಸೇವಾ ಟ್ರ????ವತಿಯಿಂದ ಶ್ರೀ ಚನ್ನಬಸವ ಪಟ್ಟದ್ದೇವರ 56 ನೇ ಪುಣ್ಯ ಸ್ಮರಣೋತ್ಸವ ಸಮಾರಂಭವನ್ನು ಮೇ 4 ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಶಿರಕೋಳ ಗ್ರಾಮದ ಹಿರೇಮಠದಲ್ಲಿ ಆಯೋಜಿಸಲಾಗಿದೆ.
ಸಾಗರದ ರಾಜಗುರು ಕೆಳದಿ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಶಿರಕೋಳ ಹಿರೇಮಠದ ಶ್ರೀ ಮಠದ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ.ಗುರುಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸುವರು.
ಮೇ. 1 ರಿಂದ ಮೇ 4 ರವರೆಗೆ ಪ್ರಾತಃಕಾಲ 7 ಗಂಟೆಗೆ ಕರ್ತೃಶ್ರೀ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಲ ಜರಗುವುದು.
ಗೋರಟಾ ಬಸವ ಕಲ್ಯಾಣದ ಶ್ರೀ ವಿಶ್ವಾರಾಧ್ಯ ಸ್ವಾಮಿಗಳು ಪ್ರತಿ ನಿತ್ಯ ರಾತ್ರಿ 8 ಗಂಟೆಗೆ ಆಧ್ಯಾತ್ಮಿಕ ಪ್ರವಚನ ನಡೆಸುವರು.
ಕಾರ್ಯಕ್ರಮದಲ್ಲಿ ಬನ್ನೂರ ಚಿಕ್ಕಮಠದ ಶ್ರೀ ಷ.ಬ್ರ.ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸುಳ್ಳ ಹಾಗೂ ಹೂಲಿ ಹಿರೇಮಠದ ಶ್ರೀ ಷ.ಬ್ರ.ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬ್ಯಾಹಟ್ಟಿ ಹಿರೇಮಠದ ಶ್ರೀ ಷ.ಬ್ರ. ಮರುಳಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮುತ್ನಾಳ-ಬೆಟಸೂರ ಹಿರೇಮಠದ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಮೊರಬ ಜಡೀಮಠದ ಶ್ರೀ ಷ.ಬ್ರ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಲಿಂಗಸೂರು ಮಾತಾ ಮಾಣಿಕೇಶ್ವರ ಆಶ್ರಮದ ಶ್ರೀ ಮಾತಾ ನಂದಿಕೇಶ್ವರ ಅಮ್ಮನವರು, ಶಿರಕೋಳ ಸಿದ್ಧಾರೂಢ ಮಠದ ಶ್ರೀ ಶ್ರೋ.ಬ್ರ.ಚಿದಾನಂದ ಮಹಾಸ್ವಾಮಿಗಳು ಪ್ರತಿ ನಿತ್ಯ ಉಪದೇಶಾಮೃತ ಮಾಡುವರು.
ಮೇ. 03 ರಂದು ಶ್ರೀ ಷ.ಬ್ರ.ಗುರುಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 29 ನೇ ಪಟ್ಟಾಧಿಕಾರ ವಧಂರ್ತಿ ಮಹೋತ್ಸವ ಜರುಗುವುದು. ಮೇ. 12 ರಿಂದ ಮೇ. 16 ರವರೆಗೆ ಶಿರಕೋಳ ಗ್ರಾಮದ ಕಲ್ಮೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 12 ರಂದು ಶ್ರೀ ಕಲ್ಮೇಶ್ವರ ದೇವರ ರಥೋತ್ಸವ, 13 ರಂದು ಕಡುಬಿನ ಕಾಳಗ, 15 ರಂದು ಶ್ರೀ ಮೈಲಾರಲಿಂಗೇಶ್ವರ ಜಾತ್ರೆ, 16 ರಂದು ಗ್ರಾಮದೇವಿಯರ ಉಡಿ ತುಂಬುವ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಹಿರೇಮಠದ ಪ್ರಕಟಣೆ ತಿಳಿಸಿದೆ.