ಬೆಳಗಾವಿ, 15: ಮನುಷ್ಯನಿಗೆ ರೋಗ ರುಜನಿಗಳು ದೇಹದ ವಿವಿಧ ಭಾಗಗಳಿಂದ ಹರುಡುತ್ತವೆೆ ಅದರಲ್ಲಿ ಮುಖ್ಯವಾಗಿ ಕೈ, ಬಾಯಿ ಮತ್ತು ಗುದ ದ್ವಾರಗಳಿಂದ ಹರಡುವ ಸೋಕಿನಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾರೆ, ಆದುದರಿಂದ ಸ್ವಚ್ಚವಾಗಿ ಕೈತೊಳೆಯುದರಲ್ಲಿ ಹಂತಗಳು ಇವೆ, ಅವುಗಳನ್ನು ಸರಿಯಾಗಿ ಪಾಲಿಸಿದ್ದೇ ಆಗಿದ್ದಲ್ಲಿ ಕಾಯಿಲೆಗಳಿಗೆ ತುತ್ತಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯು.ಎಸ್.ಎಂ ಕ.ೆಎಲ್.ಇ ಯ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ ಪಾಂಗಿ ಅವರು ಇಂದು ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ ಯಳ್ಳೂರು ರಸ್ತೆ ಬೆಳಗಾವಿಯಲ್ಲಿ ನಡೆದ "ವಿಶ್ವ ಕೈತೊಳೆಯುವ ದಿನಾಚಾರಣೆ" ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯವಾಗಿ ಆರೋಗ್ಯ ಕಾರ್ಯಕರ್ತರು ಕೈ ಗಳಲ್ಲಿನ ಅಲಂಕಾರಿಕ ವಸ್ತುಗಳು, ಉದ್ದನೆಯ ಉಗುರುಗಳನ್ನು ಬಿಡುವುದರಿಂದ ಸೋಂಕು ರೋಗಗಳಿಗೆ ಕಾರಣವಾಗುತ್ತದೆ ಆದುದರಿಂದ ಅವುಗಳಿಂದ ದೂರವಿದ್ದು ಯುವ ಜನತೆಯು ಆರೋಗ್ಯದ ಕಡೆಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು. ಹೀಗೆ ಕೈ ತೊಳೆಯುವ ವಿಧಾನದ ಹಂತಗಳನ್ನು ತಿಳಿಸಿಕೊಟ್ಟರು.
ಸುತ್ತ ಮುತ್ತಲಿನ ಪರಿಸರ ಸ್ವಚ್ಚವಾಗಿರದೆ ಇದ್ದರೆ ಮತ್ತು ಸರಿಯಾದ ರೀತಿಯಲ್ಲಿ ಕೈಗಳನ್ನು ತೊಳಯದೆ ಹೋದಲ್ಲಿ ಸೋಂಕು ಮತ್ತು ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆ ಇರುವದರಿಂದ ಯುವ ಜನತೆಯು ಆರೋಗ್ಯದ ಕಡೆಗೆ ಗಮನ ಹರಿಸಿ ಸಮುದಾಯದ ಜನರಿಗೆ ಆರೋಗ್ಯ ಬಗ್ಗೆ ತಿಳುವಳಿಕೆ ನೀಡುವುದರಲ್ಲಿ ಮುಂದಾಗಬೇಕು ಎಂದು ಕೆ.ಎಲ್.ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ನಿದರ್ೆಶಕರಾದ ಡಾ.ಎಸ್.ಸಿ ಧಾರವಾಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆರೋಗ್ಯ ಎಂಬುವುದು ತುಂಬ ಮುಖ್ಯವಾಗಿರುವಂತಹ ಅಂಶವಾಗಿರುತ್ತದೆ. ಅದನ್ನು ಶುಚಿಯಾಗಿ ಕಾಪಾಡಿಕೊಳ್ಳವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಜೆ.ಎನ್.ಎಂ ವಿದ್ಯಾರ್ಥಿ ಗಳು, ಆರೋಗ್ಯ ಸಹಾಯಕಿ ವಿದ್ಯಾಥರ್ಿಗಳು, ಆಸ್ಪತ್ರೆಯ ವೈದೈಕೀಯ ಮತ್ತು ವೈದೈಕೀಯೆತರ ಸಿಬ್ಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಜನ ಸಂಪರ್ಕ ಅಧಿಕಾರಿ ಅರುಣ ನಾಗಣ್ಣವರ ನಿರುಪಿಸಿ ವಂದಿಸಿದರು.