ವಿಶ್ವಸಂಸ್ಥೆ, ಜೂನ್ 7, ಜೂನ್ 7 ಭಾನುವಾರದಂದು ವಿಶ್ವ ಆರೋಗ್ಯ ಸುರಕ್ಷತಾ ದಿನ. ಆಹಾರದಿಂದ ಉಂಟಾಗಬಹುದಾದ ರೋಗಗಳನ್ನು ಪತ್ತೆ ಮಾಡಿ, ಅವುಗಳನ್ನು ತಡೆಗಟ್ಟಲು, ಆಹಾರ ಭದ್ರತೆಗೆ ಆದ್ಯತೆ ನೀಡುತ್ತಾ ಮಾನವ ಆರೋಗ್ಯ ಕಾಪಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಕಳೆದ ವರ್ಷ ಅಂದರೆ 2019 ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಎಫ್ ಎ ಒ ಜಂಟಿಯಾಗಿ “ಆಹಾರ ಸುರಕ್ಷತೆ, ಎಲ್ಲರ ಆದ್ಯತೆ” ವಿಷಯವಾಗಿ ಅಭಿಯಾನ ಆರಂಭಿಸಿದೆ. ಜಾಗತಿಕವಾಗಿ ಆಹಾರ ಸುರಕ್ಷತೆಯ ಜಾಗೃತಿ ಮೂಡಿಸಲು ಈ ಅಭಿಯಾನ ಆರಂಭಿಸಿದೆ. ಆಹಾರ ಸುರಕ್ಷತೆಯತ್ತ ಗಮನಹರಿಸುವುದು ಸರ್ಕಾರಗಳು, ಆಹಾರ ಉತ್ಪಾದಕರು ಮತ್ತು ಗ್ರಾಹಕರ ಜಂಟಿ ಜವಾಬ್ದಾರಿಯಾಗಿದೆ. ಆಹಾರದಿಂದಾಗಿ ಜನರು ಅನಾರೋಗ್ಯಪೀಡಿತರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ಚಿಂತನೆ ನಡೆದಿದೆ. ವಿಶ್ವ ಆಹಾರ ದಿನದ ಮೂಲಕ ಆಹಾರ ಸುರಕ್ಷತೆ ಖಾತ್ರಿಪಡಿಸಿ ಜಾಗತಿಕವಾಗಿ ಆಹಾರದಿಂದ ಉಂಟಾಗಬಹುದಾದ ಕಾಯಿಲೆಗಳನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.