ವಿಶ್ವ ಪರಿಸರ ದಿನಾಚರಣೆ: ಸಸ್ಯಸಂತೆ ಕಾರ್ಯಕ್ರಮ

ಲೋಕದರ್ಶನ ವರದಿ

ಕುಮಟಾ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಬುಧವಾರ ಪಟ್ಟಣದ ಗಿಬ್ ಸರ್ಕಲ್ ಬಳಿ ಸಾರ್ವಜನಿಕರಿಗೆ ಉಚಿತವಾಗಿ ಸಸ್ಯಗಳನ್ನು ವಿತರಿಸುವ "ಸಸ್ಯ ಸಂತೆ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅರಣ್ಯ ಇಲಾಖೆ ಹೊನ್ನಾವರ ವಿಭಾಗ ಕುಮಟಾ ಉಪವಿಭಾಗ ಕುಮಟಾ ವಲಯದ ವತಿಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣಕುಮಾರ ಬಸ್ರೂರ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ವರದರಂಗನಾಥ ಇವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಸ್ಯಗಳನ್ನು ವಿತರಿಸಲಾಯಿತು.

ಚಂದಾವರ ಶಾಖೆಯ ಉಪವಲಯ ಅರಣ್ಯಾಧಿಕಾರಿ ಎಸ್ ಆಯ್ ನಾಯ್ಕ ಅವರು ಪತ್ರಕರ್ತರೊಂದಿಗೆ ಮಾತನಾಡಿ, ನೀರಿಗಾಗಿ ಅರಣ್ಯ, ಹಸಿರು ಕನರ್ಾಟಕ ಎಂಬ ಈ ವರ್ಷದ ಗೋಷವಾಕ್ಯವಾಗಿದೆ. ಅಲ್ಲದೇ ಜನರಿಗೆ ಗಿಡಮರಗಳನ್ನು ಉಳಿಸಿ ಬೆಳೆಸುವುದರ ಕುರಿತು ಆಸಕ್ತಿ ಹಾಗೂ ಪರಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ ಜೂನ್ 5ರಂದು ವಿವಿಧ ಸಂಘ ಸಂಸ್ಥೆಗಳಿಗೆ, ಶಾಲಾ, ಕಾಲೇಜುಗಳಿಗೆ, ರಿಕ್ಷಾ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಗಿದೆ ಎಂದರು.  

ಈ ಸಂಧರ್ಭದಲ್ಲಿ ಅರಣ್ಯ ರಕ್ಷಕರಾದ ಪ್ರಮೋದ ಪಟಗಾರ, ಗುರು ಲಂಬಾಣಿ, ಅರಣ್ಯ ವೀಕ್ಷಕರಾದ ಗಣಪತಿ ಹರಿಕಾಂತ, ಸುರೇಶ ನಾಯ್ಕ, ಮಧುಕರ ಪಟಗಾರ, ಬೀರಾ ಗೌಡ, ಮಹೇಶ ಹರನೀರಕರ್ ಹಾಗೂ ಗಿಬ್ ಸರ್ಕಲ್ ಆಟೋ ಸ್ಟೆಂಡ್ ಆಟೋ ಚಾಲಕರು ಉಪಸ್ಥಿತರಿದ್ದರು.

***********